Tirupati Blessings: ಹೊಸ ದಂಪತಿಗಳಿಗೆ ಸುಲಭದಲ್ಲಿ ಸಿಗಲಿದೆ ತಿರುಪತಿ ತಿಮ್ಮಪ್ಪನ ವಿಶೇಷ ಆಶೀರ್ವಾದ !! ಇಲ್ಲಿದೆ ನೋಡಿ ಕಂಪ್ಲೀಟ್ ಡೀಟೇಲ್ಸ್

New couples can get special blessings from Tirupati Tirumala latest news

Tirupati Blessings: ನವ ವಿವಾಹಿತರಿಗೆ ಇಲ್ಲವೇ ಮದುವೆಯಾಗುವ ತಯಾರಿ ನಡೆಸುವವರಿಗೆ ಸಿಹಿ ಸುದ್ದಿ ಇಲ್ಲಿದೆ ನೋಡಿ!! ತಿರುಮಲ ತಿರುಪತಿ ದೇವಸ್ಥಾನದಲ್ಲಿ(Tirupati Tirumala)ಮದುವೆಯಾಗುತ್ತಿರುವವರಿಗೆ ಎಂದೇ ವಿಶೇಷ ಘೋಷಣೆ ಮಾಡಲಾಗಿದೆ.

 

ನವ ವಿವಾಹಿತರಿಗೆ, ಮದುವೆಯಾಗುವ ತಯಾರಿಯಲ್ಲಿ ಇರುವವರಿಗೆ ಸಿಹಿ ಸುದ್ದಿ (Good News)ಇಲ್ಲಿದ್ದು, ಸದ್ಯ ಮದುವೆಯಾಗಲಿರುವ ಜೋಡಿಗಳಿಗೆ ಟಿಟಿಡಿ (TTD) ಖುಷಿ ಸುದ್ದಿ ಇಲ್ಲಿದೆ. ಹೊಸ ದಾಂಪತ್ಯ ಜೀವನಕ್ಕೆ ಕಾಲಿಡುವಾಗ ತಿಮ್ಮಪ್ಪನ ಆಶೀರ್ವಾದವನ್ನು (Tirupati Blessings)ಸುಲಭವಾಗಿ ಟಿಟಿಡಿ(TTD)ವಿಶೇಷ ಘೋಷಣೆ ಮಾಡಲಾಗಿದೆ. ನವ ವಿವಾಹಿತರು ತಮ್ಮ ಪೂರ್ಣ ವಿಳಾಸದೊಂದಿಗೆ ತಮ್ಮ ಮದುವೆ ಆಮಂತ್ರಣ ಪತ್ರವನ್ನು ಟಿಟಿಡಿ ವಿಳಾಸಕ್ಕೆ ಕಳುಹಿಸಿದರೆ, ವೆಂಕಟೇಶ್ವರನ ಆಶೀರ್ವಾದ ಪಡೆಯಬಹುದು.

ಹಾಗಾದ್ರೆ, ಆಮಂತ್ರಣ ಪತ್ರವನ್ನು ಹೇಗೆ ಕಳುಹಿಸುವುದು? ಯಾರಿಗೆ ಕಳುಹಿಸಬೇಕು? ಎಂದು ಯೋಚಿಸುತ್ತಿದ್ದರೆ, ಇಲ್ಲಿದೆ ನೋಡಿ!! ಶ್ರೀ ವೆಂಕಟೇಶ್ವರ ಸ್ವಾಮಿ, ಇಒ ಕಚೇರಿ, ಟಿಟಿಡಿ ಆಡಳಿತ ಭವನ, ಕೆ.ಟಿ.ರಸ್ತೆ, ತಿರುಪತಿ 517501 ಇಲ್ಲಿಗೆ ನಿಮ್ಮ ಮದುವೆ ಆಮಂತ್ರಣ ಪತ್ರ ರವಾನೆ ಮಾಡಬಹುದು. ತಮ್ಮ ವಿಳಾಸವನ್ನು ಒಳಗೊಂಡ ಪತ್ರವನ್ನು ಕಳುಹಿಸಿದ ನವ ವಿವಾಹಿತರಿಗೆ ಅರಿಶಿನ, ಕುಂಕುಮ, ಬಳೆ, ಹಾಗೂ ಪ್ರಸಾದವನ್ನು ಅಂಚೆ ಮೂಲಕ ಕಳುಹಿಸಲಾಗುವುದು ಎಂದು ಟಿಟಿಡಿ ಮಾಹಿತಿ ನೀಡಿದೆ. ನೀವೂ ಕೂಡ ಶ್ರೀನಿವಾಸನ ಆಶೀರ್ವಾದ ಪಡೆಯಬೇಕೆಂದರೆ ನಿಮ್ಮ ಮದುವೆ ಪತ್ರಿಕೆಯನ್ನು ಕಳುಹಿಸಬಹುದು.

Leave A Reply

Your email address will not be published.