New pension scheme: ಕೇಂದ್ರದ ಈ ಯೋಜನೆಗೆ ಕುಳಿತಲ್ಲೇ ಅರ್ಜಿ ಹಾಕಿ – ಸಂಬಳದಂತೆ ಪ್ರತೀ ತಿಂಗಳು ಪಡೆಯಿರಿ 36,000 ಪೆನ್ಶನ್ !!

Business news personal savings Government employees get 36000 pension every month

New pension scheme: ಜನಸಾಮಾನ್ಯರು ಭವಿಷ್ಯದಲ್ಲಿ, ವೃದ್ಧಾಪ್ಯದ ವೇಳೆಯಲ್ಲೆ ನೆಮ್ಮದಿಯ ಜೀವನ ಕಾಣಲು ಬಯಸುತ್ತಾರೆ. ಅದಕ್ಕಾಗಿ ಈಗಿಂದಲೇ ಸಾಕಷ್ಟು ಉಳಿತಾಯ, ಹೂಡಿಕೆಗಳನ್ನು ಮಾಡುತ್ತಾರೆ. ಇದರೊಂದಿಗೆ ಸರ್ಕಾರ ಕೂಡ ಜನರಿಗೆ ಹಲವಾರು ರೀತಿಯಲ್ಲಿ ಸಹಕಾರ ನೀಡುತ್ತಿದ್ದು ಅವರು ವೃದ್ಧಾಪ್ಯದಲ್ಲಿ ನೆಮ್ಮದಿಯ, ಶಾಂತಿಯುತ ಬಾಳ್ವೆ ನಡೆಸಲು ಅನುಕೂಲ ಮಾಡಿಕೊಟ್ಟಿದೆ. ಅದಕ್ಕಾಗಿ ಹಲವರು ಯೋಜನೆಗಳನ್ನೂ ಜಾರಿಖೊಳಿಸಿದೆ.

ಹೌದು, ಸರ್ಕಾರವು ಜನರು ಇಳಿ ವಯಸ್ಸಿನಲ್ಲೂ ನೆಮ್ಮದಿಯಿಂದ ಜೀವನ ನಡೆಸಲು ಅನೇಕ ಹೊಸ ಪಿಂಚಣಿ ಯೋಜನೆಗಳನ್ನು(New pension scheme) ಜಾರಿಗೆ ತಂದಿದೆ. ಅದರಲ್ಲಿ ಈಗ ಜಾರಿಗೆ ಬಂದಿರುವ ಪ್ರಧಾನ ಮಂತ್ರಿ ಮನ್ ಧನ್ ಯೋಜನೆಯೂ ಒಂದು. ಈ ಯೋಜನೆಯನ್ನು ಹಿರಿಯ ನಾಗರಿಕರು ತಮ್ಮ 60 ವರ್ಷದ ಸಮಯದಲ್ಲಿ ಯಾವುದೇ ಆರ್ಥಿಕ ಸಮಸ್ಯೆಯೂ ಇಲ್ಲದೆ ಆರಾಮಾಗಿ ಕುಳಿತು 36,000ಗಳ ವರೆಗೆ ಪಿಂಚಣಿ ಪಡೆಯಲು ಸಹಾಯಕವಾಗುವ ಸಲುವಾಗಿ ಜಾರಿಗೆ ತರಲಾಗಿದೆ. ಹಾಗಿದ್ರೆ ಏನು ಈ ಯೋಜನೆ? ಏನಿದರ ಪ್ರಯೋಜನ? ಹೂಡಿಕೆ ಮಾಡಬೇಕಾದದ್ದು ಎಷ್ಟು? ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ.

ಹೂಡಿಕೆ ಹೇಗೆ?
18ರಿಂದ 55 ವರ್ಷ ವಯಸ್ಸಿನವರು ಪ್ರಧಾನಮಂತ್ರಿ ಮನ್ ಧನ್ ಯೋಜನೆಯಲ್ಲಿ ಹೂಡಿಕೆ ಮಾಡಬಹುದು.
• 18 ವಯಸ್ಸಿನಲ್ಲಿ ಮನ್ ಧನ ಯೋಜನೆ ಆರಂಭಿಸಿದರೆ ತಿಂಗಳಿಗೆ ಕೇವಲ 55 ರೂಪಾಯಿಗಳನ್ನು ಪಾವತಿಸಬೇಕು.
• 30 ವಯಸ್ಸಿನಲ್ಲಿ ಹೂಡಿಕೆ ಆರಂಭಿಸಿದರೆ 110 ರೂ.ಗಳನ್ನು
• 45ನೇ ವಯಸ್ಸಿನಲ್ಲಿ ಹೂಡಿಕೆ ಆರಂಭಿಸಿದರೆ 220ರೂ. ಗಳನ್ನು ಪ್ರತಿ ತಿಂಗಳು ಪಾವತಿಸಬೇಕಾಗುತ್ತದೆ.

ಎಲ್ಲಿ ಹೂಡಿಕೆ ಮಾಡುವುದು?
ಪ್ರಧಾನ ಮಂತ್ರಿ ಮನ್ ಧನ್ ಯೋಜನೆಯ ಅಡಿಯಲ್ಲಿ ನೀವು ಪೋಸ್ಟ್ ಆಫೀಸ್ (post office) ಹಾಗೂ ಹತ್ತಿರದ ಬ್ಯಾಂಕ್ (Bank Account) ನಲ್ಲಿ ಖಾತೆ ತೆರೆಯುವುದರ ಮೂಲಕ ನಿಮ್ಮ ಪ್ರೀಮಿಯಂ ಪಾವತಿಸಬಹುದು.

ದೊರೆಯುವ ಲಾಭ ಏನು?
ಈ ಯೋಜನೆ ಮುಗಿದ ನಂತರ ಪ್ರತಿ ತಿಂಗಳು 3000 ಗಳಂತೆ ವರ್ಷಕ್ಕೆ 36,000ಗಳನ್ನು ಪಿಂಚಣಿಯಾಗಿ ಪಡೆದುಕೊಳ್ಳಬಹುದು. ಇದಕ್ಕೆ ನಮ್ಮ ಆಧಾರ್ ಕಾರ್ಡ್ ಪಾಸ್ಪೋರ್ಟ್ ಅಳತೆಯ ಭಾವಚಿತ್ರ ಬ್ಯಾಂಕ ಖಾತೆ ಹಾಗೂ ಅದಕ್ಕೆ ಆಧಾರ್ ಕಾರ್ಡ್ ಲಿಂಕ್ ಆಗಿರುವುದು ಕಡ್ಡಾಯವಾಗಿದೆ.

ಇದನ್ನೂ ಓದಿ: KEA Exam Irregularity: KEA ಪರೀಕ್ಷೆ ಅಕ್ರಮ – ಅರೇ.. ಕಬ್ಬಿನ ಗದ್ದೆಯಲ್ಲಿ ಅಭ್ಯರ್ಥಿಗಳು ಮಾಡಿದ್ದೇನು ಗೊತ್ತಾ ?!

Leave A Reply

Your email address will not be published.