NPS Pension News: ಉದ್ಯೋಗಿಗಳೇ ಈಗಿಂದಲೇ ಹೀಗೆ ಮಾಡಿ- ಪ್ರತೀ ತಿಂಗಳು ನಿಮ್ಮ ಕೈಸೇರುತ್ತೆ ಭರ್ಜರಿ 50,000 ಪೆನ್ಶನ್ !! ಇಲ್ಲಿದೆ ನೋಡಿ ಪಕ್ಕಾ ಲೆಕ್ಕಾ
Business news NPS pension news get employees to get 50000 pension every month here is details
NPS Pension News: ರಾಷ್ಟ್ರೀಯ ಪಿಂಚಣಿ ಯೋಜನೆ (NPS)ಯನ್ನು ಪಿಂಚಣಿ ನಿಧಿ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ ನಿಯಂತ್ರಿಸುತ್ತದೆ. ಈ ಯೋಜನೆಯನ್ನು ಪಿಂಚಣಿ ನಿಧಿ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ (PFRDA) ನಿರ್ವಹಿಸುತ್ತದೆ. ಪಿಂಚಣಿ ಸೌಲಭ್ಯದ ಹೊರತಾಗಿ, ಇದು ತೆರಿಗೆ ವಿನಾಯಿತಿಯನ್ನು ಕೂಡಾ ಒದಗಿಸುತ್ತದೆ.
ನಿವೃತ್ತಿ ನಂತರವೂ ನಿಯಮಿತ ಆದಾಯ ಒದಗಿಸುವ ಉದ್ದೇಶದಿಂದ ಕೇಂದ್ರ ಸರ್ಕಾರವು ರೂಪಿಸಿದ ಸ್ವಯಂಪ್ರೇರಿತ ಕೊಡುಗೆಯ ಯೋಜನೆ ಇದಾಗಿದೆ. NPS ಯೋಜನೆಯು ಪಿಂಚಣಿ ವ್ಯವಸ್ಥೆಯಲ್ಲಿ (NPS Pension News)ಸುಧಾರಣೆ ತರುವುದಷ್ಟೇ ಅಲ್ಲದೆ, ಜನರಲ್ಲಿ ನಿವೃತ್ತಿ ಜೀವನಕ್ಕೆ ಉಳಿತಾಯ ಮಾಡುವ ಅಭ್ಯಾಸವನ್ನು ಪ್ರೇರೇಪಿಸುತ್ತದೆ. ರಾಷ್ಟ್ರೀಯ ಪಿಂಚಣಿ ಯೋಜನೆ ಅಥವಾ NPS ಅಡಿಯಲ್ಲಿ, ಉದ್ಯೋಗಿ ವೈಯಕ್ತಿಕ ನಿವೃತ್ತಿ ಖಾತೆಯನ್ನು ತೆರೆಯಬಹುದಾಗಿದ್ದು, NPS ಯೋಜನೆಯು ಎಲ್ಲರಿಗೂ ಮುಕ್ತವಾಗಿದ್ದು ಜೊತೆಗೆ ಎಲ್ಲಾ ಸರ್ಕಾರಿ ನೌಕರರಿಗೆ ಕಡ್ಡಾಯವಾಗಿದೆ.
NPS ನಲ್ಲಿ ಹೂಡಿಕೆ ಮಾಡಿದ ಮೊತ್ತವು ಪ್ರಸ್ತುತ 9 ಪ್ರತಿಶತದಿಂದ 12 ಪ್ರತಿಶತದವರೆಗೆ ವಾರ್ಷಿಕ ಆದಾಯವನ್ನು ಪಡೆಯಬಹುದು. ಇದಲ್ಲದೇ, ಆದಾಯ ತೆರಿಗೆ ಕಾಯಿದೆ, 1961 ರ ಸೆಕ್ಷನ್ 80 CCD(1) ಮತ್ತು 80 CCD 1(B) ಅಡಿಯಲ್ಲಿ ವಾರ್ಷಿಕವಾಗಿ 2 ಲಕ್ಷದವರೆಗೆ ತೆರಿಗೆ ವಿನಾಯಿತಿ ಸಿಗಲಿದೆ. NPS ಕ್ಯಾಲ್ಕುಲೇಟರ್ ಅನುಸಾರ, ಒಬ್ಬ ವ್ಯಕ್ತಿಯು 25 ರಿಂದ 60 ವರ್ಷ ವಯಸ್ಸಿನವರು NPS ಗೆ ತಿಂಗಳಿಗೆ 6,531 ರೂಪಾಯಿಗಳನ್ನು ಹೂಡಿಕೆ ಮಾಡಿದರೆ 60 ವರ್ಷಗಳ ಬಳಿಕ ತಿಂಗಳಿಗೆ 50,005 ರೂಪಾಯಿಗಳನ್ನು ಪಡೆಯಬಹುದು. 60 ವರ್ಷಗಳಿಗೆ ಒಬ್ಬ ವ್ಯಕ್ತಿಯು 27,43,020 ವರೆಗೆ ಹೂಡಿಕೆ ಮಾಡಿದಂತಾಗಲಿದೆ. ಬಡ್ಡಿ ಎಲ್ಲಾ ಸೇರಿದಂತೆ ಆ ವ್ಯಕ್ತಿ ಬಳಿ 2,50,02,476 ವರೆಗೆ ಸಂಗ್ರಹವಾಗಲಿದೆ. ಈ ಮೂಲಕ ತಿಂಗಳಿಗೆ 50,005 ರೂಪಾಯಿ ಪಿಂಚಣಿ ಪಡೆಯಬಹುದು.
ಇದನ್ನೂ ಓದಿ: ಅಶ್ಲೀಲ ಚಿತ್ರದ ಚಿತ್ರೀಕರಣವನ್ನು ಲೈವ್ ಆಗೇ ತೋರಿಸಿದ ಇಬ್ಬರು ನಟ-ನಟಿಯರು !!