BBMP New Guidelines: ಪಬ್, ಬಾರ್ ಹಾಗೂ ಹೋಟೆಲ್ ಗಳಿಗೆ ಬಂತು ಹೊಸ ರೂಲ್ಸ್!!
BBMP New Guidelines: ಇತ್ತೀಚೆಗೆ ಬೆಂಗಳೂರಿನ ಕೋರಮಂಗಲದಲ್ಲಿ ನಡೆದ ಅಗ್ನಿ ದುರಂತದ ಬಳಿಕ ಎಚ್ಚೆತ್ತಿರುವ ಬಿಬಿಎಂಪಿ, ಪ್ರಸ್ತುತ ಬೆಂಗಳೂರಿನಲ್ಲಿ ಉದ್ದಿಮೆ ನಡೆಸುವವರಿಗೆ ಹೊಸ ಮಾರ್ಗಸೂಚಿ (BBMP New Guidelines) ಬಿಡುಗಡೆ ಮಾಡಲು ನಿರ್ಧರಿಸಿದೆ.
ಈ ಹಿನ್ನೆಲೆ ರಾಜ್ಯ ರಾಜಧಾನಿ ಬೆಂಗಳೂರಿನ ಪಬ್, ಬಾರ್, ಹೋಟೆಲ್ ಗಳಿಗೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಶೀಘ್ರದಲ್ಲೇ ಹೊಸ ಮಾರ್ಗಸೂಚಿ ಹೊರಡಿಸಲಿದ್ದು, ಪ್ರತೀ ಉದ್ದಿಮೆಗಳು ಪಾಲಿಕೆಯ ಹೊಸ ನಿಯಮ ಪಾಲನೆ ಮಾಡುವುದು ಕಡ್ಡಾಯವಾಗಲಿದೆ.
ಹೋಟೆಲ್, ಪಬ್, ಬಾರ್, ರೆಸ್ಟೋರೆಂಟ್, ಅಗ್ನಿಶಾಮಕ ಇಲಾಖೆ ಜೊತೆ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ನೇತೃತ್ವದಲ್ಲಿ ಮಹತ್ವದ ಸಭೆ ನಡೆಸಿದ ಬಳಿಕ ಹೋಟೆಲ್ ಅಸೋಸಿಯೇಶನ್ ಬಾರ್ ಆಂಡ್ ರೆಸ್ಟುರೆಂಟ್ ಅಸೋಸಿಯೇಶನ್ ಜೊತೆಗೆ ಸಭೆ ನಡೆಸಿದ ಬಿಬಿಎಂಪಿ ಅಧಿಕಾರಿಗಳು ಅಗ್ನಿ ಅವಘಡಗಳನ್ನು ತಪ್ಪಿಸಲು ಕೈಗೊಳ್ಳಬೇಕಾದ ಅಗತ್ಯ ಕ್ರಮಗಳ ಬಗ್ಗೆ ಚರ್ಚೆ ನಡೆಸಲಾಗಿದೆ .
ಸಭೆಯಲ್ಲಿ ಮುಂದೆ ಯಾವುದೇ ರೀತಿಯ ಅಗ್ನಿ ಅವಘಡಗಳನ್ನು ತಪ್ಪಿಸುವ ನಿಟ್ಟಿನಲ್ಲಿ ಪಬ್, ಬಾರ್, ಹೋಟೆಲ್ ಗಳಲ್ಲಿ ಒಂದಷ್ಟು ನಿಯಮಗಳನ್ನು ಕಡ್ಡಾಯವಾಗಿ ಪಾಲಿಸುವಂತೆ ಕ್ರಮ ಕೈಗೊಳ್ಳಲು ಚಿಂತನೆ ನಡೆಸಲಾಗಿದೆ.
ಬಿಬಿಎಂಪಿ ಪಾಲಿಕೆ ಗೈಡ್ಲೈನ್ಸ್ ಇಂತಿವೆ :
* ಪ್ರತೀ ಹೋಟೆಲ್ ಅಲ್ಲಿ ಇನ್ಮುಂದೆ ಫೈರ್ ಮ್ಯಾನ್ ನೇಮಕ ಕಡ್ಡಾಯ.
* ಪ್ರತಿ ಹೋಟೆಲ್ ಸಿಬ್ಬಂದಿಗೆ ಅಗ್ನಿ ಸುರಕ್ಷತೆ ಬಗ್ಗೆ ಟ್ರೈನಿಂಗ್ ಕೊಡಿಸಬೇಕು.
* ಬೆಂಕಿ ನಂದಿಸಲು ಬಳಸುವ ವಾಟರ್ ಪೈಪ್ ಕಡ್ಡಾಯ ವಾಟರ್ ಜೆಟ್ ಮಾದರಿಯ ಹೋಗೆ ನಿವಾರಕ ಮಶೀನ್ ಕಡ್ಡಾಯ.
* ಹೋಟೆಲ್ ಪಬ್ ಬಾರ್ ರೆಸ್ಟೋರೆಂಟ್ 5 ಭಾಗದಲ್ಲಿ ಬೆಂಕಿ ನಂದಿಸುವ ಮಶೀನ್ ಇರಬೇಕು.
* ಅಗ್ನಿ ಸುರಕ್ಷತೆ ಕೈಗೊಂಡಿರುವ ಬಗ್ಗೆ ಅಗ್ನಿಶಾಮಕ ದಳದ ಕಡೆಯಿಂದ ಸರ್ಟಿಫಿಕೇಟ್ ಕಡ್ಡಾಯ.
* 2 ಸಾವಿರಕ್ಕೂ ಅಧಿಕ ಪಬ್ ಬಾರ್ ರೆಸ್ಟೋರೆಂಟ್ ನಲ್ಲಿ ರೂಲ್ಸ್ ಫಾಲೋ ಮಾಡದ ಉದ್ದಿಮೆ ಬಾಗಿಲು ಮುಚ್ಚಿಸುವ ಬಗ್ಗೆ ನಿರ್ಧಾರ.
ಈ ರೀತಿ ಹಲವು ಕ್ರಮಗಳನ್ನು ಕೈಗೊಳ್ಳಲು ಬಿಬಿಎಂಪಿ ಚಿಂತನೆ ನಡೆಸಿದ್ದು ಕೆಲವೇ ದಿನದಲ್ಲಿ ಪಾಲಿಕೆಯಿಂದ ಈ ಹೊಸ ಮಾರ್ಗ ಸೂಚಿ ಜಾರಿಯಾಗುವ ಸಾಧ್ಯತೆ ಇದೆ.
ಇದನ್ನು ಓದಿ: EPF ವತಿಯಿಂದ ಈ ಉದ್ಯೋಗಿಗಳಿಗೆ ಭರ್ಜರಿ ಸುದ್ದಿ – ವೇತನ ಮಿತಿ ಹೆಚ್ಚಿಸಿದ ಸಂಸ್ಥೆ !!