Latest News: ಗಾಜಾ ಪಟ್ಟಿ ಮೇಲೆ ಅಣ್ವಸ್ತ್ರ ದಾಳಿ? ಓರ್ವ ಸಚಿವ ಅಮಾನತು !
ಗಾಜಾದ ಪಟ್ಟಿಯ ಮೇಲೆ ಇಸ್ರೇಲ್ ದಾಳಿಯನ್ನು ತೀವ್ರಗೊಳಿಸಿದ್ದು ಎಲ್ಲರಿಗೂ ತಿಳಿದೇ ಇದೆ. ಇದರ ಮಧ್ಯೆಯೇ, ಗಾಜಾಪಟ್ಟಿ ಮೇಲೆ ಅಣ್ವಸ್ತ್ರ ದಾಳಿ ಮಾಡಬೇಕು ಎಂದು ಹೇಳಿಕೆ ಕೊಟ್ಟಿದ್ದ ಸಚಿವನನ್ನು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅಮಾನತುಗೊಳಿಸಿದ್ದಾರೆ.
ಗಾಜಾ ಮೇಲೆ ಅಟಾಮಿಕ್ ಬಾಂಬ್ ದಾಳಿ ಮಾಡುವಂತೆ ಸಲಹೆ ನೀಡಿದ್ದ ಇಸ್ರೇಲಿ ಸಚಿವರನ್ನು ಅನಿರ್ದಿಷ್ಟಾವಧಿಗೆ ಅಮಾನತುಗೊಳಿಸಲಾಗಿದೆ ಎಂದು ಪ್ರಧಾನಿ ಬೆಂಜಮಿನ್ ನೆತನ್ಯಾಹು ಕಚೇರಿ ತಿಳಿಸಿದೆ. ಸಂದರ್ಶನವೊಂದರಲ್ಲಿ ಪ್ರಧಾನಿ ಬೆಂಜಮಿನ್ ನೆತನ್ಯಾಹು ಮಂತ್ರಿಮಂಡಲದ ಸಚಿವರೊಬ್ಬರು ಈ ಕರೆ ಕೊಟ್ಟಿದ್ದರು.
“ನಾವು ಉಗ್ರಗಾಮಿ ದೃಷ್ಟಿಕೋನದಿಂದ ದೂರ ಇರುತ್ತೇವೆ. ಇಸ್ರೇಲ್ ಮತ್ತು ಇಸ್ರೇಲಿ ರಕ್ಷಣಾ ಪಡೆಗಳು (ಐಡಿಎಫ್) ಅಮಾಯಕ ಜನರಿಗೆ ಹಾನಿಯಾಗದಂತೆ ಅಂತಾರಾಷ್ಟ್ರೀಯ ಕಾನೂನಿನ ಅತ್ಯುನ್ನತ ಮಾನದಂಡಗಳಿಗೆ ಅನುಗುಣವಾಗಿ ಕಾರ್ಯನಿರ್ವಹಿಸುತ್ತಿವೆ ಎಂದು ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರ ಕಚೇರಿ ಹೇಳಿಕೆಯೊಂದನ್ನು ಬಿಡುಗಡೆ ಮಾಡಿ ತಿಳಿಸಿದೆ.
ಇದನ್ನು ಓದಿ: New Guidelines For Dog Care: ಮನೆಯಲ್ಲಿ ನಾಯಿ ಸಾಕುವವರಿಗೆ ಬಂತು ಹೊಸ ರೂಲ್ಸ್ – ಬೆಳ್ಳಂಬೆಳಗ್ಗೆಯೇ ಹೊಸ ಆದೇಶ