Bus Ticket Price: ಈ ವರ್ಷವೇ KSRTC ಟಿಕೆಟ್ ದರದಲ್ಲಿ ಹೆಚ್ಚಳ ?! ಸಾರಿಗೆ ಸಚಿವರು ಏನಂದ್ರು?!

KSRTC bus Ticket Price transport minister Ramalinga Reddy given big Update regarding the same

Bus Ticket Price: 2016ರಿಂದ ಬಸ್ ಟಿಕೆಟ್ ದರ ಹೆಚ್ಚಳ ಮಾಡಿಲ್ಲ. ಹೀಗಾಗಿ ಈ ವರ್ಷ ಬಸ್ ಟಿಕೆಟ್ ದರ(Bus Ticket Price) ಹೆಚ್ಚಳ ಆಗಲಿದೆಯೇ ಎಂಬ ಪ್ರಶ್ನೆ ಸಹಜವಾಗಿ ಈ ಹೆಚ್ಚಿನ ಮಂದಿಗೆ ಮೂಡಿತ್ತು. ಇದಕ್ಕೆ ಸದ್ಯ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಸ್ಪಷ್ಟನೆ ನೀಡಿದ್ದಾರೆ. ಬಸ್ ಟಿಕೆಟ್ ದರ ಸದ್ಯಕ್ಕೆ ಹೆಚ್ಚಳ ಮಾಡುವುದಿಲ್ಲ. ಮುಂದೆ ಸಿಎಂ, ಸಚಿವ ಸಂಪುಟದಲ್ಲಿ ತೀರ್ಮಾನ ಕೈಗೊಳ್ಳಲಿದ್ದರೆ ಎಂದು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಸ್ಪಷ್ಟನೆ ನೀಡಿದ್ದಾರೆ.

ದೀಪಾವಳಿ ಹಬ್ಬ ಸಮೀಪಿಸುತ್ತಿದ್ದು, ಪ್ರಯಾಣಿಸುವವರ ಸಂಖ್ಯೆ ಹೆಚ್ಚಾಗಲಿದೆ. ಈ ಹಿನ್ನೆಲೆಯಲ್ಲಿ ಪ್ರಯಾಣಿಕರಿಗೆ KSRTC ವಿಶೇಷ ಬಸ್ ಸೇವೆಗಳನ್ನು ಪ್ರಾರಂಭ ಮಾಡಿದೆ. KSRTC ವಿಶೇಷ ಬಸ್‌ಗಳು ನವೆಂಬರ್ 10 ರಿಂದ 12 ರವರೆಗೆ ಬೆಂಗಳೂರಿನಿಂದ ವಿವಿಧ ಊರುಗಳಿಗೆ ಸಂಚರಿಸಲಿವೆ.ಕೆಂಪೇಗೌಡ ಬಸ್ ನಿಲ್ದಾಣದಿಂದ ಧರ್ಮಸ್ಥಳ, ಕುಕ್ಕೆ ಸುಬ್ರಹ್ಮಣ್ಯ, ಶಿವಮೊಗ್ಗ, ಹಾಸನ, ಮಂಗಳೂರು, ಕುಂದಾಪುರ, ಶೃಂಗೇರಿ, ಹೊರನಾಡು, ದಾವಣಗೆರೆ, ಹುಬ್ಬಳ್ಳಿ, ಧಾರವಾಡ, ಕಲಬುರಗಿ, ಬಳ್ಳಾರಿ, ಕೊಪ್ಪಳ, ಯಾದಗಿರಿ, ಬೀದರ್ ಮುಂತಾದೆಡೆಗೆ ವಿಶೇಷ ಬಸ್‌ಗಳು ಕಾರ್ಯನಿರ್ವಹಿಸಲಿವೆ. ಇದಲ್ಲದೇ, ನವೆಂಬರ್ 14 ರಿಂದ 15 ರವರೆಗೆ ವಿವಿಧ ಊರುಗಳಿಂದ ಮತ್ತು ಅಂತರ್ ರಾಜ್ಯಗಳಿಂದ ಬೆಂಗಳೂರಿಗೆ ವಾಪಸ್ ಬಸ್ ಸೇವೆ ಇರಲಿದೆ ಎಂದು KSRTC ಮಾಹಿತಿ ನೀಡಿದೆ.

 

ಇದನ್ನು ಓದಿ: Diwali holiday: ದೀಪಾವಳಿ ಹಬ್ಬದ ರಜೆ ನವೆಂಬರ್‌ 12 ಕ್ಕೆ ಅಲ್ಲ, ರಜೆ ದಿನಾಂಕ ಬದಲಾವಣೆ- ಸರಕಾರದ ಆದೇಶ

Leave A Reply

Your email address will not be published.