Dharmasthala: ಕುಕ್ಕೆ ಸುಬ್ರಹ್ಮಣ್ಯ ಹಾಗೂ ಧರ್ಮಸ್ಥಳದ ಭಕ್ತರಲ್ಲೊಂದು ವಿಶೇಷ ಮನವಿ
Dharmasthala news vijayapura Mangalore trian schedule change request for Kukke Subramanya and Dharmsthala latest news
Dharmasthala: ಧರ್ಮಸ್ಥಳ(Dharmasthala), ಕುಕ್ಕೆ ಸುಬ್ರಹ್ಮಣ್ಯ (Kukke Subramanya)ಭಕ್ತಾದಿಗಳಿಗೆ ಇಲ್ಲೊಂದು ವಿಶೇಷ ಮನವಿ ಮಾಡಲಾಗಿದೆ. ವಿಜಯಪುರ-ಮಂಗಳೂರು ರೈಲಿನ ವೇಳಾಪಟ್ಟಿ ಪರಿಷ್ಕರಣೆ ಮಾಡಬೇಕಾಗಿದ್ದು, ಈ ರೈಲನ್ನು ಮಂಗಳೂರು ಸೆಂಟ್ರಲ್ ತನಕ ವಿಸ್ತರಣೆ ಮಾಡಬೇಕು ಎಂದು ಬೇಡಿಕೆ ಮುಂದಿಟ್ಟುಕೊಂಡು ಆನ್‌ಲೈನ್ ಸಹಿ ಅಭಿಯಾನ ನಡೆಸಲಾಗುತ್ತಿದೆ. ಈ ಕುರಿತು ಫೇಸ್‌ಬುಕ್ ಪೋಸ್ಟ್ ಕೂಡ ಹಾಕಲಾಗಿದೆ.
ಆನ್‌ಲೈನ್ ಸಹಿ ಅಭಿಯಾನಕ್ಕೆ ಬೆಂಬಲ ನೀಡುವಂತೆ ಕುಕ್ಕೆ ಸುಬ್ರಮಣ್ಯ ಮತ್ತು ಧರ್ಮಸ್ಥಳಕ್ಕೆ ಆಗಮಿಸುವ ಭಕ್ತರಿಗೆ ಮನವಿ ಮಾಡಲಾಗಿದೆ. ಈ ಕುರಿತು ಫೇಸ್‌ಬುಕ್ ಪೋಸ್ಟ್ ಹಾಕಲಾಗಿದ್ದು,ಸಹಿ ಮಾಡಲು ಲಿಂಕ್ ಕೂಡ ನೀಡಲಾಗಿದೆ. ಈ ಫೇಸ್‌ಬುಕ್ ಪೋಸ್ಟ್ನಲ್ಲಿ ಕುಕ್ಕೆ ಶ್ರೀ ಸುಬ್ರಹ್ಮಣ್ಯ ಹಾಗೂ ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ವಿಜಯಪುರ, ಗದಗ, ಬಾಗಲಕೋಟೆ, ಹುಬ್ಬಳ್ಳಿ, ಹಾವೇರಿ, ದಾವಣಗೆರೆ, ಚಿಕ್ಕಮಗಳೂರು, ಹಾಸನ ಸೇರಿ ನೆರೆ ಜಿಲ್ಲೆಗಳ ಭಾಗಗಳಿಂದ ರೈಲಿನಲ್ಲಿ ಬರುವ ಭಕ್ತಾದಿಗಳ ಬಳಿ ನಮ್ಮದೊಂದು ಮನವಿ ಎಂದು ತಿಳಿಸಲಾಗಿದೆ.ಪ್ರಸ್ತುತ ವಿಜಯಪುರ-ಮಂಗಳೂರು ರೈಲು ಉತ್ತರ ಕರ್ನಾಟಕ ಹಾಗೂ ಕರಾವಳಿ ಕರ್ನಾಟಕದ ಮಧ್ಯೆ ರೈಲು ಸಂಪರ್ಕ ಕಲ್ಪಿಸುತ್ತಿದೆ.
ಈ ರೈಲು ಸುಬ್ರಹ್ಮಣ್ಯ ರೋಡ್ ನಿಲ್ದಾಣಕ್ಕೆ ಬೆಳಗ್ಗೆ 10:10ಕ್ಕೆ ಬಂದು ಅಲ್ಲಿಂದ ಸುಬ್ರಹ್ಮಣ್ಯ ತಲುಪುವಾಗ 11 ಗಂಟೆ ಯಾಗುತ್ತದೆ. ಆ ಬಳಿಕ ದೇವರ ದರ್ಶನ ಪಡೆದು ಸೇವೆಗಳನ್ನು ಮಾಡಿಸಿ ಸಂಜೆ 4:45ಕ್ಕೆ ಸುಬ್ರಹ್ಮಣ್ಯ ರೋಡ್ ರೈಲು ನಿಲ್ದಾಣ ತಲುಪಬೇಕಾದರೆ ಸಂಜೆ 4 ಗಂಟೆಗೆ ಹೊರಟು ಬರುವುದು ಕಷ್ಟವಾಗುತ್ತದೆ. ಈ ರೈಲಿನ ವೇಳಾಪಟ್ಟಿ ಪ್ರಯಾಣಿಕರಿಗೆ ಅನುಕೂಲವಾಗಿರದ ಹಿನ್ನೆಲೆ ರೈಲಿನ ವೇಳಾಪಟ್ಟಿಯನ್ನು ಪರಿಷ್ಕರಿಸಬೇಕು ಎಂದು ಮನವಿ ಮಾಡಲಾಗಿದೆ. ಈ ಕುರಿತು ನೈರುತ್ಯ ರೈಲ್ವೆ ವಲಯ ಮತ್ತು ದಕ್ಷಿಣ ರೈಲ್ವೆ ವಲಯಕ್ಕೆ ಮನವಿ ಸಲ್ಲಿಸುವ ನಿಟ್ಟಿನಲ್ಲಿ ಹಾಗೂ ಪ್ರಯಾಣಿಕರ ಬೇಡಿಕೆಯ ಕುರಿತು ಮನವರಿಕೆ ಮಾಡಲು ಈ ಸಹಿ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ.
ಇದನ್ನು ಓದಿ: Communal Hatredness: ದೇವಾಲಯಕ್ಕೆ ನುಗ್ಗಿ ಶಿವಲಿಂಗದೆದದುರು ಮೂತ್ರ ಮಾಡಿದ ಮುಸ್ಲಿಂ ವ್ಯಕ್ತಿ !!