Rice Price Hike: ದೀಪಾವಳಿಗೆ ‘ದುಬಾರಿ’ ಗಿಫ್ಟ್ – ಈ ಆಹಾರ ಪದಾರ್ಥಗಳ ಬೆಲೆಯಲ್ಲಿ ಒಮ್ಮೆಲೆ ಏರಿಕೆ !!
Rice Price Hike: ದಿನಂಪ್ರತಿ ವಸ್ತುಗಳ ಬೆಲೆ ಏರಿಕೆಯಿಂದ ಕಂಗೆಟ್ಟ ಜನತೆಗೆ ಗಾಯದ ಮೇಲೆ ಬರೆ ಎಳೆದಂತ ಪರಿಸ್ಥಿತಿ ನಿರ್ಮಾಣವಾಗಿದೆ. ಈರುಳ್ಳಿ ದರ ಏರಿಕೆಯ ಬೆನ್ನಲ್ಲೇ ದೀಪಾವಳಿ ಹಬ್ಬದ ಮೊದಲೇ ಅಕ್ಕಿ, ಬೇಳೆ ದರ ಏರಿಕೆ ಕಂಡಿದೆ. ಈ ಬಾರಿ ಅಕ್ಕಿ-ಬೇಳೆ(Rice Price Hike)ಸೇರಿದಂತೆ ನಾನಾ ಧಾನ್ಯಗಳ ದರ ದುಬಾರಿಯಾಗಿದ್ದು, ಗ್ರಾಹಕರಿಗೆ ಹೊರೆಯಾಗಲಿದೆ.
ರಾಜಮುಡಿ ಅಕ್ಕಿಯನ್ನು ಬೇಡಿಕೆಗೆ ಅನುಗುಣವಾಗಿ ಬೆಳೆಯದ ಹಿನ್ನಲೆ ಅಕ್ಕಿಯ ಬೆಲೆ ವರ್ಷದಿಂದ ವರ್ಷಕ್ಕೆ ಏರಿಕೆ ಆಗುತ್ತಿದೆ. ಈ ನಡುವೆ, 35-40 ರೂ.ಗೆ ಸಿಗುತ್ತಿದ್ದ ಅಕ್ಕಿಯ ಬೆಲೆ ಇಂದು ಸಗಟು ದರದಲ್ಲಿ 85 ರೂ.ಗೆ ತಲುಪಿದೆ. ಚಿಲ್ಲರೆ ಮಾರುಕಟ್ಟೆಯಲ್ಲಿ 90-100 ರೂ.ವರೆಗೆ ಮಾರಾಟವಾಗುತ್ತಿದೆ. ಕೋಲಂ ರಾ ರೈಸ್ 62 ರೂ.ನಿಂದ 70 ರೂ. ಗೆ ಏರಿಕೆಯಾಗಿದ್ದು, ಕೋಲಂ ಸ್ಟೀಮ್ ರೈಸ್ 55 ರೂ.ನಿಂದ 58 ರೂ.ಗೆ ಹೆಚ್ಚಳ ಕಂಡಿದೆ.
ಸೋನಾ ಮಸೂರಿ ರಾ ರೈಸ್ 56 ರೂ. ನಿಂದ 58 ರೂ., ಸೋನಾಮಸೂರಿ ಸ್ಟೀಮ್ ರೈಸ್ 51 ರೂ.ನಿಂದ 53 ರೂ. ಆಗಿದೆ. ಅದೇ ರೀತಿ, ಉದ್ದಿನಬೇಳೆ ದರ 130 ರೂ.ನಿಂದ 136 ರೂ., ಹೆಚ್ಚಳವಾಗಿದೆ. ಇದಲ್ಲದೆ, ಹೆಸರು ಬೇಳೆ 115 ರೂ.ನಿಂದ 118 ರೂ. ಆಗಿದ್ದು, ಹೆಸರುಕಾಳು ದರ ಕೆಜಿಗೆ 113 ರೂ., ಕಡಲೆಕಾಳು 78 ರೂ., ಬೆಲ್ಲ 52 ರೂ.ಗೆ ಏರಿಕೆಯಾಗಿದೆ. ಸಗಟು ದರದಲ್ಲಿ ಈ ಹಿಂದೆ ತೊಗರಿಬೇಳೆ ಕೆ.ಜಿ. ಗೆ 160 ರೂ. ಇದ್ದ ದರ ಒಂದು ವಾರದಿಂದ ಮತ್ತೆ ಕೆ.ಜಿ. ಮೇಲೆ 10 ರೂ.ವರೆಗೆ ಹೆಚ್ಚಳವಾಗಿ 170ರೂಪಾಯಿ ಆಗಿದೆ.ಇದೀಗ ಸಗಟು ದರದಲ್ಲಿ ಕೆ.ಜಿ.ಗೆ ಬರೋಬ್ಬರಿ 170 ರೂ. ಆಗಿದೆ. ದೀಪಾವಳಿ ಹಬ್ಬದ ಮೊದಲೇ ಜನ ಸಾಮಾನ್ಯರ ಮೇಲೆ ದಿನಸಿ ವಸ್ತುಗಳ ಬೆಲೆ ಏರಿಕೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ.
ಇದನ್ನು ಓದಿ: Crime News: ಮಹಿಳೆಯ ಒಳ ಉಡುಪು ಕಳವು, ಅಶ್ಲೀಲ ಫೋಟೋ ಅಪ್ಲೋಡ್- ಯುವಕ ಅರೆಸ್ಟ್!!