Ration Card Updates: ರೇಷನ್ ಕಾರ್ಡ್’ಗೆ ಅರ್ಜಿ ಹಾಕಿದವರಿಗೆ ಮಹತ್ವದ ಮಾಹಿತಿ – ಹೊಸ ಕಾರ್ಡ್ ಪಡೆಯಲು ಹೀಗೆ ಮಾಡಿ !!

BPL Card Holder latest updates regarding applying for new ration card news

BPL Card Updates: ರಾಜ್ಯ ಸರಕಾರ ಗ್ಯಾರಂಟಿ ಯೋಜನೆ ಜಾರಿಯಾದ ಬಳಿಕ ಬಿಪಿಎಲ್‌ ಕಾರ್ಡ್‌ (BPL Card Holder) ಹೊಂದಿರುವವರ ಸಂಖ್ಯೆ ಹೆಚ್ಚಾಗಿದೆ. ಬಡತನ ರೇಖೆಗಿಂತ ಕೆಳಗಿರುವ (BPL )ಕಾರ್ಡ್ ಪ್ರಾಮುಖ್ಯತೆಯನ್ನು ಪಡೆದುಕೊಂಡಿದೆ. ಈ ರೇಷನ್ ಕಾರ್ಡ್ (Ration Card) ಮೂಲಕ ಬಿಪಿಎಲ್‌ ಕಾರ್ಡ್ ಅನ್ನಭಾಗ್ಯ ಮತ್ತು ಗೃಹ ಲಕ್ಷ್ಮಿಯಂತಹ ಯೋಜನೆಗಳ ಪ್ರಯೋಜನ ಪಡೆಯಲು ಸಾಧ್ಯವಾಗುತ್ತದೆ. ಕೇಂದ್ರ ಸರ್ಕಾರ ( Central government) ಬಿಪಿಎಲ್ ಕಾರ್ಡ್ ( BPL card) ಇಲ್ಲವೇ ಎಪಿಎಲ್ ಕಾರ್ಡ್ (APL Card) ವಿತರಣೆ ಮಾಡಲು ಕೆಲವು ನಿಯಮಗಳನ್ನು ಮಾಡಿದೆ.

ಈಗಾಗಲೇ ರಾಜ್ಯ ಸರ್ಕಾರದಲ್ಲಿ ಕೇಂದ್ರ ಸರ್ಕಾರದ ಅಂಕಿ ಅಂಶಗಳ ಪ್ರಕಾರ ಬಿಪಿಎಲ್ ಕಾರ್ಡ್ ವಿತರಣೆ (BPL Ration Card) ಮಾಡಿದೆ. ಈ ನಡುವೆ, ಹೊಸ ಪಡಿತರ ಚೀಟಿ ಪಡೆಯಲು ಕೆಲವರು ಪ್ರಯತ್ನಿಸುತ್ತಿದ್ದಾರೆ. ಈ ನಿಟ್ಟಿನಲ್ಲಿ ಎರಡುವರೆ ವರ್ಷಗಳ ಹಿಂದೆ ಸಲ್ಲಿಸಲಾಗಿದ್ದ ಅರ್ಜಿಗಳನ್ನು ಪರಿಶೀಲಿಸಿ ಅಂತವರಿಗೆ ರೇಷನ್ ಕಾರ್ಡ್ ನೀಡಲು ಸರ್ಕಾರ ಸಿದ್ದತೆ ನಡೆಸಿದೆ.

ಇತ್ತೀಚೆಗೆ ಗ್ಯಾರಂಟಿ ಯೋಜನೆಗಳ ಪ್ರಯೋಜನ ಪಡೆಯಲು ಸುಳ್ಳು ಮಾಹಿತಿ ನೀಡಿ ಪಡಿತರ ಚೀಟಿ ಪಡೆಯುವವರ ಸಂಖ್ಯೆ ಹೆಚ್ಚಾಗಿದೆ. ಈ ಮೂಲಕ ವಂಚನೆ (fraud cases) ಮಾಡುತ್ತಿರುವುದು ಸರ್ಕಾರದ ಗಮನಕ್ಕೆ ಬಂದಿದೆ. ಹೀಗಾಗಿ, ಹೊಸ ಪಡಿತರ ಚೀಟಿ ವಿತರಣೆ ಮಾಡುವ ಮೊದಲು n ವಂಚನೆಯ ರೇಷನ್ ಕಾರ್ಡ್ (Ration Card) ಅನ್ನು ಮೊದಲು ರದ್ದು ಪಡಿಸಲಾಗುವುದು ಎಂದು ಕೆ.ಹೆಚ್ ಮುನಿಯಪ್ಪ (K.H Muniyappa) ತಿಳಿಸಿದ್ದಾರೆ.

ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಕೆಎಚ್ ಮುನಿಯಪ್ಪ, ರೇಷನ್ ಕಾರ್ಡ್ ವಿತರಣೆಯ ಬಗ್ಗೆ ಮಾಹಿತಿ ನೀಡಿದ್ದಾರೆ. ರಾಜ್ಯದಲ್ಲಿ ಮೂರು ಲಕ್ಷಕ್ಕೂ ಅಧಿಕ ಬಿಪಿಎಲ್ ಕಾರ್ಡ್ ಹೊಂದಿರುವವರು ಕಳೆದ ಆರು ತಿಂಗಳಿನಿಂದ ಪಡಿತರ ವಸ್ತುಗಳನ್ನೂ ಪಡೆದುಕೊಂಡಿಲ್ಲ. ಈ ನಿಟ್ಟಿನಲ್ಲಿ ಅಂತವರ ರೇಷನ್ ಕಾರ್ಡ್ ತಕ್ಷಣವೇ ರದ್ದಾಗಲಿದೆ. ಪಡಿತರ ಚೀಟಿಯಲ್ಲಿ ವಂಚನೆಯನ್ನು ತಡೆಗಟ್ಟಲು ಈ ಕೆವೈಸಿ (KYC) ಮಾಡಿಸಿಕೊಳ್ಳುವುದು ಕಡ್ಡಾಯವಾಗಿದೆ. ಒಂದು ವೇಳೆ ಕೆವೈಸಿ ಲಿಂಕ್ ಮಾಡಿಕೊಳ್ಳದೆ ಇದ್ದಲ್ಲಿ ಅಂತಹ ಕಾರ್ಡ್ ಕೂಡ ಆಹಾರ ಇಲಾಖೆ ನಿಷೇಧಿಸಲಿದೆ.

ಬಿಜೆಪಿ ಸರ್ಕಾರ (BJP government) ಅಧಿಕಾರದಲ್ಲಿ ಇರುವ ಸಂದರ್ಭ ಹೊಸ ರೇಷನ್ ಕಾರ್ಡ್ ವಿತರಣೆಯನ್ನು ಸ್ಥಗಿತಗೊಳಿಸಲಾಗಿದೆ. ಹೀಗಾಗಿ, ಆಹಾರ ಇಲಾಖೆಯ ಬಳಿ 2.96 ಲಕ್ಷ ರೇಷನ್ ಕಾರ್ಡ್ ಅರ್ಜಿಗಳಿದ್ದು, ಇವುಗಳನ್ನು ಪರಿಶೀಲನೆ ಮಾಡಿ ಫಲಾನುಭವಿಗಳಿಗೆ ಸದ್ಯದಲ್ಲಿಯೇ ರೇಷನ್ ಕಾರ್ಡ್ ವಿತರಣೆ ಮಾಡಲಾಗುವುದು ಎಂದು ಆಹಾರ ಸಚಿವ ಮುನಿಯಪ್ಪ ತಿಳಿಸಿದ್ದಾರೆ. ಆದರೆ ಪಡಿತರ ವಸ್ತುಗಳನ್ನ ಪಡೆಯದೇ ಕೇವಲ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಅಥವಾ ಸರ್ಕಾರದ ಇನ್ನಿತರ ಪ್ರಯೋಜನ ಪಡೆದುಕೊಳ್ಳುವುದಕ್ಕಾಗಿ ಬಿಪಿಎಲ್ ಕಾರ್ಡ್ ಬಳಸಿಕೊಳ್ಳುತ್ತಿರುವವರ ವಿರುದ್ಧ ಕ್ರಮ ಕೈಗೊಳ್ಳಲಾಗುವ ಕುರಿತು ಎಚ್ಚರಿಕೆ ನೀಡಿದ್ದಾರೆ.

ಇದನ್ನು ಓದಿ: Dharmasthala: ಕುಕ್ಕೆ ಸುಬ್ರಹ್ಮಣ್ಯ ಹಾಗೂ ಧರ್ಮಸ್ಥಳದ ಭಕ್ತರಲ್ಲೊಂದು ವಿಶೇಷ ಮನವಿ

Leave A Reply

Your email address will not be published.