Chikkamagalure: ಅಧಿಕಾರಕ್ಕಾಗಿ BJP-SDPI ಮೈತ್ರಿ !! ಚಿಕ್ಕಮಗಳೂರಲ್ಲೊಂದು ಅಚ್ಚರಿಯ ಬೆಳವಣಿಗೆ

Chikkamagalure: ರಾಜಕೀಯ ಲಾಭಕ್ಕೋಸ್ಕರ ರಾಜಕೀಯ ಪಕ್ಷಗಳು ಏನು ಬೇಕಾದರೂ ಮಾಡುತ್ತವೆ ಎಂಬುದು ಜನಜನಿತ ಮಾತು. ಈ ರೀತಿಯ ಸಾಕಷ್ಟು ಉದಾಹರಣೆಗಳನ್ನೂ ನಾವು ನೋಡಿದ್ದೇವೆ. ಇದೀಗ ಇಂತದ್ದೇ ಅಚ್ಚರಿಯಲ್ಲಿ ಅಚ್ಚರಿಯಾದ ಮತ್ತೊಂದು ಬೆಳವಣಿಗೆ ಆಗಿದ್ದು, ಚಿಕ್ಕಮಗಳೂರಿನ (Chikkamagalure) ನಗರಸಭೆಯಲ್ಲಿ ಅಧಿಕಾರಕ್ಕಾಗಿ ಎಸ್ಡಿಪಿಐ ಮತ್ತು ಬಿಜೆಪಿ ಮೈತ್ರಿ ಮಾಡಿಕೊಂಡಿದೆ. ಅವಿಶ್ವಾಸ ನಿರ್ಣಯಕ್ಕೆ BJPಯು SDPI ಬೆಂಬಲ ಪಡೆದು ಭಾರೀ ಸಂಚಲನ ಸೃಷ್ಟಿಸಿದೆ.

ಹೌದು, ತತ್ವ-ಸಿದ್ಧಾಂತಗಳಲ್ಲಿ, ಪರಸ್ಪರ ಭಿನ್ನವಾಗಿರುವ, ಸಾಕಷ್ಟು ವಿಚಾರಗಳಲ್ಲಿ ಭಿನ್ನಾಭಿಪ್ರಾಯವಿರುವ SDPI ಮತ್ತು BJP ಪಕ್ಷಗಳು ರಾಜಕೀಯವಾಗಿ ಬದ್ಧ ವೈರಿಗಳು ಎನ್ನಬಹುದು. ಆದರೆ ಇದೀಗ ಚಿಕ್ಕಮಗಳೂರಿನ ನಗರಸಭೆಯಲ್ಲಿ ಹಾಲಿ ಅಧ್ಯಕ್ಷರನ್ನು ಕೆಳಗಿಸಲು ಬಿಜೆಪಿಯು SDPI ಜೊತೆ ಕೈ ಜೋಡಿಸಿದೆ. ಇದೀಗ ರಾಜ್ಯ ರಾಜಕೀಯದಲ್ಲಿ ಮತ್ತೊಂದು ಸಂಚಲನ ಸೃಷ್ಟಿಸಿದೆ.

ಅಂದಹಾಗೆ ಬಿಜೆಪಿಯಿಂದಲೇ ನಗರಸಭೆ ಅಧ್ಯಕ್ಷರಾಗಿರುವ ವರಸಿದ್ಧಿ ವೇಣುಗೋಪಾಲ್ ಅವರನ್ನು ಪಕ್ಷ ಅಮಾನತು ಮಾಡಿದೆ. ಆದರೆ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಯದ, ರಾಜಿನಾಮೆ ನೀಡದ ವೇಣುಗೋಪಾಲ್ ಅವರನ್ನು ಬಿಜೆಪಿ ಅವಿಶ್ವಾಸ ನಿರ್ಣಯದಿಂದ ಕೆಳಗಿಳಿಸುವ ಸಂಚು ಮಾಡಿದೆ. ಇದಕ್ಕೆ SDPI ಹಾಗೂ JDS ಬೆಂಬಲ ಕೋರಿದೆ. ಈಗಾಗಲೇ ಬಿಜೆಪಿಯ ಸಭೆಯಲ್ಲಿ ಈ ಎರಡೂ ಪಕ್ಷಗಳು ಭಾಗಿಯಾಗಿವೆ.

ಪಕ್ಷದ ಆಂತರಿಕ ಕಲಹದಿಂದ ವರಸಿದ್ಧಿ ನಗರಸಬೆಯ ಅಧ್ಯಕ್ಷರು, ಸಿ ಟಿ ರವಿ ಅವರ ಪರಮಾಪ್ತರಾಗಿದ್ದ ವೇಣುಗೋಪಾಲ್ ಅವರನ್ನು ಪಕ್ಷದಿಂದ ಅಮಾನತ್ತು ಮಾಡಲಾಗಿತ್ತು. ಹೀಗಾಗಿ 3 ತಿಂಗಳಿಂದಲೂ ಅವರನ್ನು ಖುರ್ಚಿಯಿಂದ ಕೆಳಗಿಳಿಸುವ ತಂತ್ರ ಹೆಣೆಯಲಾಗಿದ್ದು, ಕೊನೆಗೂ ಬಿಜೆಪಿ ಮಾಸ್ಟರ್ ಪ್ಲಾನ್ ಮಾಡಿ, ಎಲ್ಲಾ ಭಿನ್ನಾಭಿಪ್ರಾಯ ಬಿಟ್ಟು SDPI ಬೆಂಬಲ ಕೋರಿದೆ. ಅದೂ ಅಲ್ಲದೆ ಬಿಜೆಪಿ ಭದ್ರ ಕೋಟೆಯಾಗಿರುವ ಚಿಕ್ಕಮಗಳೂರಿನಲ್ಲಿ, ಹಿಂದುತ್ವದ ನಾಯಕ ಎಂದು ಗುರುತಿಸಿಕೊಂಡಿರು ಸಿ ಟಿ ರವಿ ಇರುವ ಊರಲ್ಲಿ ಈ ಮಹತ್ವದ ಬೆಳವಣಿಗೆ ನಡೆದಿರುವುದು ನಿಜಕ್ಕೂ ಅಚ್ಚರಿ!!

ಚಿಕ್ಕಮಗಳೂರ ನಗರಸಭೆಯು 35 ಸದಸ್ಯರ ಸಂಖ್ಯಾಬಲವನ್ನು ಹೊಂದಿದೆ. ಇದರಲ್ಲಿ ಬಿಜೆಪಿ 18, ಕಾಂಗ್ರೆಸ್ 13, ಜೆಡಿಎಸ್ 3 ಹಾಗೂ ಎಸ್ಡಿಪಿಐ 1 ಸದಸ್ಯರನ್ನು ಹೊಂದಿವೆ.

 

ಇದನ್ನು ಓದಿ: Bangalore Murder: ಗಣಿ-ಭೂವಿಜ್ಞಾನ ಇಲಾಖೆಯ ಮಹಿಳಾ ಅಧಿಕಾರಿಯ ಕೊಚ್ಚಿ ಕೊಂದ ನರಹಂತಕರು !! ಕಾರಣ ಕೇಳಿದ್ರೆ ಶಾಕ್ ಆಗ್ತೀರಾ

Leave A Reply

Your email address will not be published.