YouTube: ಯೂಟ್ಯೂಬ್ ನಲ್ಲಿ ವಿಡಿಯೋ ನೋಡೋರಿಗೆ ಬಂತು ಹೊಸ ರೂಲ್ಸ್ !!
New Rules for YouTube Video Viewers
Youtube: ಸಾಮಾಜಿಕ ಜಾಲತಾಣಗಳಾದ ಫೇಸ್ಬುಕ್, ಯೂಟ್ಯೂಬ್, ಇನ್ಸ್ಟಾಗ್ರಾಮ್ ಗಳಲ್ಲಿ ವಿಡಿಯೋಗಳನ್ನು ನೋಡುವ ಸಂದರ್ಭದಲ್ಲಿ ಎಡೆ ಎಡೆಯಲ್ಲಿ ಬರುವ ಅಡ್ವರ್ಟೈಸ್ಮೆಂಟ್ ಗಳು ಎಂತವರಿಗೂ ಕಿರಿಕಿರಿಯನ್ನು ಉಂಟುಮಾಡುತ್ತದೆ. ಏನಾದರೂ ಒಂದನ್ನು ಕುತೂಹಲಕಾರಿಗಿ ನೋಡುವಾಗ ಮಧ್ಯ ಬಂದು ಮೂಗು ತೂರಿಸುವ ಜಾಹೀರಾತುಗಳು ಹಲವರಿಗೆ ಸಿಟ್ಟನ್ನು ತರಿಸುತ್ತದೆಹ ಆದರೆ ಇದೀಗ ಈ ಕುರಿತು youtube ಒಂದು ಹೊಸ ನಿಯಮವನ್ನು ಜಾರಿಗೆ ತಂದಿದೆ.
ಹೌದು, ಯೂಟ್ಯೂಬ್ ವೀಕ್ಷಣೆ ಹಲವು ದೇಶಗಳಲ್ಲಿ ಇನ್ನು ದುಬಾರಿಯಾಗಲಿದೆ. ಯಾಕೆಂದರೆ ಯೂಟ್ಯೂಬ್‌ನ ಮಾತೃಸಂಸ್ಥೆಯಾಗಿರುವ ಗೂಗಲ್ ಯೂಟ್ಯೂಬ್ ತನ್ನ ಪ್ರೀಮಿಯಂ ಸೇವೆ ಶುಲ್ಕವನ್ನು ಅನೇಕ ದೇಶಗಳಲ್ಲಿ ಏರಿಸಿದೆ. ಈಗಾಗಲೇ YouTube Premium ಬಳಸುತ್ತಿರುವ ಗ್ರಾಹಕರಿಗೆ ಕಂಪನಿಯು ಅವರಿಗೆ ಮೂರು ತಿಂಗಳ ಕಾಲಾವಕಾಶ ನೀಡಿದೆ. ಇದರ ನಂತರ ಅವರು ಹೊಸ ಮಾಸಿಕ ಚಂದಾದಾರಿಕೆಯನ್ನು ತೆಗೆದುಕೊಳ್ಳಬೇಕಾಗುತ್ತದೆ. ಯೂಟ್ಯೂಬ್ ಪ್ರೀಮಿಯಂ ಸೇವೆ ಹೊಂದಿರುವವರಿಗೆ ಯಾವುದೇ ಜಾಹೀರಾತುಗಳು ನಡು ನಡುವೆ ಪ್ರಸಾರವಾಗೋದಿಲ್ಲ. ಅದರೊಂದಿಗೆ ಇತರ ಅನೇಕ ಪ್ರಯೋಜನಗಳನ್ನೂ ಇದು ನೀಡುತ್ತದೆ.
YouTube ಪ್ರೀಮಿಯಂನ ಪ್ರಯೋಜನಗಳು:
• ಬಳಕೆದಾರರು ಯೂಟ್ಯೂಬ್ ಮ್ಯೂಸಿಕ್‌ಗೆ ಪ್ರವೇಶವನ್ನು ಪಡೆಯುತ್ತಾರೆ. ಈ ಪ್ಲಾಟ್‌ಫಾರ್ಮ್‌ನಲ್ಲಿ ನೀವು ಹಿನ್ನೆಲೆ ಸಂಗೀತ ವೈಶಿಷ್ಟ್ಯವನ್ನು ಸಹ ಬಳಸಲು ಸಾಧ್ಯವಾಗುತ್ತದೆ.
• ಉತ್ತಮ ಫುಲ್ HD ವೀಡಿಯೊ ಸ್ಟ್ರೀಮಿಂಗ್ ಸೇವೆಯನ್ನು ಕೂಡ ಪಡೆಯಬಹುದಾಗಿದೆ.
• ಹೊಸ ಮಾಸಿಕ ಚಂದಾದಾರಿಕೆ ನವೆಂಬರ್ 1 ರಿಂದ ಜಾರಿಗೆ ಬಂದಿವೆ. ಕಂಪನಿಯು ಅರ್ಜೆಂಟೀನಾ, ಆಸ್ಟ್ರೇಲಿಯಾ, ಆಸ್ಟ್ರಿಯಾ, ಚಿಲಿ, ಜರ್ಮನಿ, ಪೋಲೆಂಡ್ ಮತ್ತು ಟರ್ಕಿಯಲ್ಲಿ ತನ್ನ ಪ್ರೀಮಿಯಂ ಯೋಜನೆಗಳ ಬೆಲೆಗಳನ್ನು ಹೆಚ್ಚಿಸುವ ಸಂದೇಶವನ್ನು ಕಳುಹಿಸಿದೆ.
ಭಾರತೀಯರಿಗೆ ಯಾವುದೇ ಪರಿಣಾಮವಿಲ್ಲ !!
ಭಾರತದಲ್ಲಿ ಯೂಟ್ಯೂಬ್ ಪ್ರೀಮಿಯಂ ಯೋಜನೆಗಳು ರೂ 129 ರಿಂದ ಪ್ರಾರಂಭವಾಗುತ್ತವೆ. ಈ ಬೆಲೆ ಮಾಸಿಕ ಯೋಜನೆಗೆ ಇರುತ್ತದೆ. ಆದರೆ, ಈ ಬೆಲೆ ಪ್ರಾಯೋಗಿಕ ಅವಧಿಯದ್ದಾಗಿದೆ. ಇದರ ನಂತರ, ಬಳಕೆದಾರರು ರೂ 139 ರ ಮಾಸಿಕ ಶುಲ್ಕದಲ್ಲಿ ಸೇವೆಯನ್ನು ಪಡೆಯುತ್ತಾರೆ. ಕಂಪನಿಯು ರೂ 399 ಗೆ ಮೂರು ತಿಂಗಳ ಚಂದಾದಾರಿಕೆಯನ್ನು ನೀಡುತ್ತದೆ. ಒಂದು ವರ್ಷದ ಚಂದಾದಾರಿಕೆಗೆ 1290 ರೂಪಾಯಿ ಖರ್ಚು ಮಾಡಬೇಕಾಗುತ್ತದೆ.
ಇದನ್ನು ಓದಿ: Aadhar Card: ಆಧಾರ್ ಕಾರ್ಡ್ ತಿದ್ದುಪಡಿ ಕುರಿತು ಬಂತು ಬಿಗ್ ಅಪ್ಡೇಟ್- ಹೆಸರನ್ನು ಎಷ್ಟು ಸಲ ಬದಲಾವಣೆ ಮಾಡ್ಬೋದು ?!