New Reservation Policy: ಈ ವರ್ಗದ ಜನರಿಗೆ ಬೊಂಬಾಟ್ ನ್ಯೂಸ್ – ಕೇಂದ್ರದಿಂದ ಹೊಸ ಮೀಸಲಾತಿ ಘೋಷಣೆ !!

National news central government to formulate a new reservation policy for this community

New Reservation Policy: ಕೇಂದ್ರ ಸರ್ಕಾರ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಹಿಂದುಳಿದವರಿಗಾಗಿ ಹೊಸ ಮೀಸಲಾತಿ ನೀತಿಯನ್ನು (New Reservation Policy)ರೂಪಿಸಲು ತಯಾರಿ ನಡೆಸಿದೆ.

ದೆಹಲಿಯಲ್ಲಿ ಗುರುವಾರ ಬಿಜೆಪಿಯ (BJP)ಹಿಂದುಳಿದ ನಾಯಕರ ಸಭೆ ನಡೆದಿದ್ದು, ಈ ಕುರಿತು ಚರ್ಚೆ ನಡೆಸಲಾಗಿದೆ. ಇದಲ್ಲದೇ, ಈ ವಿಚಾರವಾಗಿ ಇನ್ನೂ ಹೆಚ್ಚಿನ ಸಮಾಲೋಚನೆ ನಡೆಸಲು ನಿರ್ಧಾರ ಕೈಗೊಳ್ಳಲಾಗಿದೆ ಎಂದು ಬಿಜೆಪಿ ನಾಯಕ ಕೆ.ಎಸ್.ಈಶ್ವರಪ್ಪರವರು ಮಧ್ಯಮವೊಂದಕ್ಕೆ ಮಾಹಿತಿ ನೀಡಿದ್ದಾರೆ. ಈ ನಿಟ್ಟಿನಲ್ಲಿ ಸುಪ್ರೀಂಕೋರ್ಟ್ ತೀರ್ಪು(Supreme Court Judgement)ಮತ್ತು ಸಂವಿಧಾನದ ಆಶಯವನ್ನು ಗಮನದಲ್ಲಿರಿಸಿ ನೀತಿ ರೂಪಿಸಲಾಗುವ (Reservation)ಕುರಿತು ಸಚಿವರು ಮಾಹಿತಿ ನೀಡಿದ್ದಾರೆ.

ಈ ಸಭೆಯಲ್ಲಿ ಪಕ್ಷದ ಅಧ್ಯಕ್ಷ ಜೆ.ಪಿ.ನಡ್ಡಾ, ಗೃಹ ಸಚಿವ ಅಮಿತ್ ಶಾ, ಸಚಿವ ನಿತಿನ್ ಗಡ್ಕರಿ, ಬಿಜೆಪಿಯ ಹಿರಿಯರು ನಾಯಕರು ಸಮಾಲೋಚನೆಯಲ್ಲಿ ಭಾಗಿಯಾಗಿದ್ದರು ಎನ್ನಲಾಗಿದೆ. ಬದಲಾಗುತ್ತಿರುವ ಇಂದಿನ ವಿದ್ಯಮಾನ, ಜನಸಂಖ್ಯೆ ಮತ್ತು ಜನರ ಅಭಿಲಾಷೆಗಳಿಗೆ ಅನುಗುಣವಾಗಿ ಈ ನೀತಿಯನ್ನು ರೂಪಿಸಲಾಗುತ್ತದೆ. ಈ ನಿಟ್ಟಿನಲ್ಲಿ ಎಲ್ಲ ಹಿಂದುಳಿದ ವರ್ಗಗಳ ನಾಯಕರಿಂದ ಅಭಿಪ್ರಾಯ ಹಾಗೂ ಸಲಹೆ ಸೂಚನೆಗಳನ್ನು ಪಡೆಯಲಾಗಿದೆ ಎಂದು ಸಚಿವ ಈಶ್ವರಪ್ಪ ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: ಹೊಸ ರೇಷನ್ ಕಾರ್ಡ್’ಗೆ ಅರ್ಜಿ ಸಲ್ಲಿಸಿದವರ ಗಮನಕ್ಕೆ – ಸರ್ಕಾರದಿಂದ ನಿಮಗೆ ಭರ್ಜರಿ ಗುಡ್ ನ್ಯೂಸ್ !!

Leave A Reply

Your email address will not be published.