BJP Leader: ಬಿಜೆಪಿ ನಾಯಕಿಯಿಂದ ವಿದ್ಯಾರ್ಥಿಗಳಿಗೆ ಥಳಿತ!

national news tamil nadu bjp leader ranjana nachiyar thrashes students hanging on footpath of bus

Share the Article

ಸರಕಾರಿ ಬಸ್‌ನಲ್ಲಿ ಫುಟ್‌ಬೋರ್ಡ್‌ನಲ್ಲಿ ನೇತಾಡುತ್ತ ಪ್ರಯಾಣ ಮಾಡುತ್ತಿದ್ದ ವಿದ್ಯಾರ್ಥಿಗಳನ್ನು ನಾಯಿಗಳು ಎಂದು ಅವಾಚ್ಯವಾಗಿ ನಿಂದಿಸಿರುವ ಘಟನೆಯೊಂದು ನಡೆದಿದೆ. ತಮಿಳು ನಾಡಿನ ಬಿಜೆಪಿ ನಾಯಕಿ (Tamil Nadu BJP Leader) ಹಾಗೂ ನಟಿ ರಂಜನಾ ನಾಚಿಯಾರ್‌ ( Actress Ranjana Nachiyar) ಅವರನ್ನು ಬಂಧಿಸಲಾಗಿದೆ ಎಂದು ವರದಿಯಾಗಿದೆ.

ಬಿಜೆಪಿ ನಾಯಕಿ ವಿದ್ಯಾರ್ಥಿಗಳನ್ನು ನಿಂದಿಸುತ್ತಿರುವುದು, ಅವರ ಮೇಲೆ ಹಲ್ಲೆ ಮಾಡುತ್ತಿರುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದ್ದು, ಒಬ್ಬ ರಾಜಕಾರಣಿಯಾಗಿ ಅವರು ನಡೆದುಕೊಂಡ ನಡೆಗೆ ತೀವ್ರ ಆಕ್ಷೇಪ ವ್ಯಕ್ತವಾಗಿದೆ.

ರಂಜನಾ ಅವರು ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಸಂದರ್ಭದಲ್ಲಿ ಬಸ್‌ನ ಫುಟ್‌ಪಾತ್‌ನಲ್ಲಿ ವಿದ್ಯಾರ್ಥಿಗಳು ನೇತಾಡುವುದನ್ನು ನೋಡಿದ್ದಾರೆ. ಆಕೆ ಬಸ್‌ ಅಡ್ಡ ಹಾಕಿ ವಿದ್ಯಾರ್ಥಿಗಳತ್ತ ಹೋಗುತ್ತಿರುವುದು, ವಿದ್ಯಾರ್ಥಿಗಳ ವರ್ತನೆಗೆ ಬಸ್‌ ಡ್ರೈವರ್‌ ಅನ್ನು ತರಾಟೆಗೆ ತೆಗೆದುಕೊಳ್ಳುತ್ತಾರೆ. ತೀವ್ರ ವಾದ ಮಾಡುತ್ತಾರೆ. ಬಳಿಕ ಫುಟ್‌ಬೋರ್ಡ್‌ನಲ್ಲಿ ನೇತಾಡುತ್ತಿದ್ದ ವಿದ್ಯಾರ್ಥಿಗಳ ಮೇಲೆ ಕೂಗಾಡುತ್ತಾರೆ, ಬಸ್‌ನಿಂದ ಇಳಿಯುವಂತೆ ಆದೇಶ ಮಾಡುತ್ತಾರೆ. ಬಸ್‌ನ ಹಿಂಭಾಗಕ್ಕೆ ಹೋಗಿ ಅವಾಚ್ಯವಾಗಿ ವಿದ್ಯಾರ್ಥಿಗಳಿಗೆ ನಿಂದಿಸಿರುವುದು, ಹಲ್ಲೆ ಮಾಡಿರುವುದು ಕಂಡು ಬಂದಿದೆ.

ಈ ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಇದೀಗ ರಂಜನಾ ಅವರನ್ನು ಬಂಧಿಸಿದ್ದಾರೆ ಎಂದು ತಿಳಿದು ಬಂದಿದೆ. ಐಪಿಸಿಯ ಐದು ವಿಭಾಗಗಳ ಅಡಿಯಲ್ಲಿ ನಾಯಕಿಯ ಮೇಲೆ ಕ್ರಮ ಕೈಗೊಳ್ಳಲಾಗಿದೆ. ಅಪ್ರಾಪ್ತರಿಗೆ ಕಪಾಳ ಮೋಕ್ಷ, ನಿಂದಿಸಿರುವುದು, ಸರಕಾರಿ ಸಿಬ್ಬಂದಿಗಳಿಗೆ ಕರ್ತವ್ಯವೆಸಗಲು ಅಡ್ಡಿ ಮಾಡಿರುವ ಆರೋಪದ ಮೇಲೆ ಬಂಧನ ಮಾಡಲಾಗಿದೆ ಎಂದು ವರದಿಯಾಗಿದೆ. ಬಂಧನ ಮಾಡಲು ಹೋದ ಸಮಯದಲ್ಲಿ ಕೂಡಾ ರಂಜನಾ ಅವರು ಮಹಿಳಾ ಅಧಿಕಾರಿಯ ಮೇಲೂ ಕಠೋರವಾಗಿ ವರ್ತಿಸಿದ್ದಾರೆ ಎಂದು ವರದಿಯಾಗಿದೆ.

 

ಇದನ್ನು ಓದಿ: Ratan Dubey: ಚುನಾವಣೆಗೆ ಮೂರು ದಿನ ಬಾಕಿ ಇರುವಾಗಲೇ ಬಿಜೆಪಿ ನಾಯಕನ ಭೀಕರ ಹತ್ಯೆ!!

Leave A Reply