Heart Attack: ಗರ್ಭಿಣಿಯರೇ ಹೃದಯಾಘಾತದಿಂದ ಪಾರಾಗಲು ಇರಲಿ ಈ ಎಚ್ಚರಗಳು !!
Heart Attack: ಇತ್ತೀಚಿನ ದಿನಗಳಲ್ಲಿ (Now A Days) ಹೃದಯಾಘಾತ (Heart Attack) ಮತ್ತು ಹೃದಯ ಸ್ತಂಭನ (Cardiac Arrest) ಕಾಯಿಲೆ ಜನರನ್ನು ಹೆಚ್ಚು ಕಾಡುತ್ತಿದೆ. ವಯಸ್ಕರಲ್ಲಿ ಮಾತ್ರ ಹೃದಯ ಸ್ತಂಭನ ಸಂಭವಿಸುತ್ತಿಲ್ಲ ಬದಲಾಗಿ ಚಿಕ್ಕ ಚಿಕ್ಕ ಮಕ್ಕಳು(Childerns)ಹೃದಯ ಸ್ತಂಭನದಿಂದಾಗಿ ಸಾವನ್ನಪ್ಪುತ್ತಿರುವವರ (Death)ಸಂಖ್ಯೆ ಹೆಚ್ಚಾಗುತ್ತಿದೆ. ಇದರ ಜೊತೆಗೆ, ಗರ್ಭಿಣಿಯರಿಗೂ ಕೂಡ ಹೃದಯಾಘಾತ ಸಂಭವಿಸುತ್ತಿರುವುದುರುವುದು ಆತಂಕಕಾರಿ ಬೆಳವಣಿಗೆಯಾಗಿದೆ.
ಗರ್ಭಾವಸ್ಥೆಯ ಸಂದರ್ಭದಲ್ಲಿ ಮಹಿಳೆಯರಲ್ಲಿ ಅನೇಕ ರೀತಿಯ ದೈಹಿಕ ಹಾಗೂ ಮಾನಸಿಕ ಬದಲಾವಣೆಗಳಾಗುತ್ತವೆ. ಅನೇಕ ರೀತಿಯ ಶಾರೀರಕ ಸಮಸ್ಯೆಗಳು ಕೂಡ ಎದುರಿಸಬೇಕಾಗುತ್ತದೆ. ಗರ್ಭಾವಸ್ಥೆಯಲ್ಲಿ ಹಾರ್ಟ್ ಅಟ್ಯಾಕ್ ಆಗುವ ಸಂಭವ ಹೆಚ್ಚೆಂದು ವೈದ್ಯರು ಹೇಳುತ್ತಾರೆ. ಗರ್ಭಾವಸ್ಥೆಯಲ್ಲಿ ಇಲ್ಲವೇ ಹೆರಿಗೆಯ ಬಳಿಕ 6 ವಾರಗಳವರೆಗೆ ಪ್ರತಿಶತ 25 ರಷ್ಟು ಮಹಿಳೆಯರು ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಇದನ್ನು ಹೆಚ್ಚಿನ ಜನರು ಗಂಭೀರವಾಗಿ ಪರಿಗಣಿಸುವುದಿಲ್ಲ. ಈ ಸಮಯದಲ್ಲಿ ಕಾಣುವ ಎದೆನೋವು, ಬ್ಲೋಟಿಂಗ್ ಸಮಸ್ಯೆ, ಅಜೀರ್ಣ ಮುಂತಾದ ತೊಂದರೆಗಳನ್ನು ನಿರ್ಲಕ್ಷಿಸುತ್ತಾರೆ.
ಗರ್ಭಾವಸ್ಥೆಯಲ್ಲಿ ಹೃದಯದ ತೊಂದರೆಗಳು ಉಂಟಾದಾಗ ಮಹಿಳೆಯರು ಹೆಚ್ಚು ಗಾಬರಿಗೊಳಗಾಗುತ್ತಾರೆ. ಅವರ ದೇಹದಲ್ಲಿ ಊತ, ತಲೆ ತಿರುಗುವಿಕೆ, ಮೂರ್ಛೆ, ಆಯಾಸ, ಅತಿಯಾದ ಹೃದಯ ಬಡಿತ, ರಾತ್ರಿ ಸಮಯದಲ್ಲಿ ಆಗಾಗ ಮೂತ್ರ ವಿಸರ್ಜನೆ ಮಾಡುವುದು, ನಿರಂತರ ಕೆಮ್ಮು, ಉಸಿರಾಟದ ತೊಂದರೆ ಹಾಗೂ ಪಾದ, ಕೈ, ಕಾಲು ಮತ್ತು ಭುಜಗಳಲ್ಲಿ ಊತ ಕಾಣಿಸಿಕೊಳ್ಳುವುದು ಮುಂತಾದ ಕೆಲವು ಮುನ್ಸೂಚನೆಗಳು ನೀಡುತ್ತವೆ. ಈ ರೀತಿಯ ಮುನ್ಸೂಚನೆಗಳು ಕಂಡುಬಂದಾಗ ವೈದ್ಯರನ್ನು ಸಂಪರ್ಕಿಸಿದರೆ ಹೃದಯಾಘಾತವನ್ನು ತಪ್ಪಿಸಬಹುದಾಗಿದೆ.
ಗರ್ಭಾವಸ್ಥೆಯಲ್ಲಿ ಹಿಮೊಗ್ಲೋಬಿನ್ ಕಡಿಮೆಯಿದ್ದರು ಕೂಡ ಹೃದಯಾಘಾತ ಸಂಭವಿಸುತ್ತದೆ. ಇದರ ಹೊರತಾಗಿ ವಂಶಪಾರಂಪರ್ಯವಾಗಿ ಏನಾದರೂ ಹೃದಯದ ತೊಂದರೆಯಿದ್ದ ಸಂದರ್ಭದಲ್ಲಿ ಇಲ್ಲವೇ ಮೊದಲ ಗರ್ಭಾವಸ್ಥೆಯಲ್ಲಿ ಕ್ಲಾಟ್ ಸಮಸ್ಯೆ ಎದುರಾದಾಗ ಅಂತವರು ಹೆಚ್ಚು ಜಾಗ್ರತೆ ವಹಿಸಬೇಕು. ಬೇರೆ ಖಾಯಿಲೆಗೆ ಔಷಧಿ ತೆಗೆದುಕೊಳ್ಳುತ್ತಿದ್ದರೆ ಅಥವಾ ಕಿಡ್ನಿ, ಥೈರಾಯ್ಟ್ ಸಮಸ್ಯೆಗಳನ್ನು ಹೊಂದಿರುವ ಗರ್ಭಿಣಿಯರು ಎದೆನೋವನ್ನು ಕಡೆಗಣಿಸಬಾರದು.
ಇದನ್ನು ಓದಿ: ಇನ್ಮುಂದೆ 100 ರೂಪಾಯಿ ಕೊಟ್ರೆ ಸಾಕು, ರೈಲ್ವೇ ನಿಲ್ದಾಣದಲ್ಲಿ ನೀವು ರೂಂ ಬುಕ್ ಮಾಡಿ ಉಳಿಯಬಹುದು!