Home latest GST On Hostel Rent: ಹಾಸ್ಟೆಲ್ ಹಾಗೂ ಪಿಜಿಯಲ್ಲಿರೋ ಹುಡುಗಿಯರಿಗೆ ಭರ್ಜರಿ ಗುಡ್ ನ್ಯೂಸ್ ಕೊಟ್ಟ...

GST On Hostel Rent: ಹಾಸ್ಟೆಲ್ ಹಾಗೂ ಪಿಜಿಯಲ್ಲಿರೋ ಹುಡುಗಿಯರಿಗೆ ಭರ್ಜರಿ ಗುಡ್ ನ್ಯೂಸ್ ಕೊಟ್ಟ ಕೇಂದ್ರ ಸರ್ಕಾರ !!

GST On Hostel Rent

Hindu neighbor gifts plot of land

Hindu neighbour gifts land to Muslim journalist

GST On Hostel Rent: ಕೇಂದ್ರ ಸರ್ಕಾರ ಹಾಸ್ಟೆಲ್ ಹಾಗೂ ಪಿಜಿಯಲ್ಲಿರುವ ಹುಡುಗಿಯರಿಗೆ ಭರ್ಜರಿ ಗುಡ್ ನ್ಯೂಸ್ ನೀಡಲು ಮುಂದಾಗಿದೆ. ಹೌದು!! ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್(Nirmala Sitharaman) ನೇತೃತ್ವದ ಜಿಎಸ್ಟಿ ಮಂಡಳಿಯ ನಿರ್ಧಾರಕ್ಕೆ ಅನುಸಾರವಾಗಿ ಕೇಂದ್ರವು ಸದ್ಯದಲ್ಲೇ ಹಾಸ್ಟೆಲ್ ಗಳು ಮತ್ತು ಪೇಯಿಂಗ್ ಗೆಸ್ಟ್ (PG) ವಸತಿಗಳನ್ನು ಸರಕು ಮತ್ತು ಸೇವಾ ತೆರಿಗೆ (GST On Hostel Rent )ವ್ಯಾಪ್ತಿಯಿಂದ ವಿನಾಯಿತಿ ನೀಡುವ ಸಂಭವವಿದೆ.

ಸದ್ಯ, ಹಾಸ್ಟೆಲ್ ಗಳು ಮತ್ತು ಪಿಜಿ ಬಾಡಿಗೆಗೆ ಶೇಕಡಾ 12 ರಷ್ಟು ಜಿಎಸ್ಟಿ ವಿಧಿಸಲಾಗುತ್ತಿದ್ದು, ಮುಂದಿನ ಸಭೆಯಲ್ಲಿ ಹಾಸ್ಟೆಲ್ ಮತ್ತು ಪಿಜಿ ಬಾಡಿಗೆಯ ಮೇಲೆ ಜಿಎಸ್ಟಿ ವಿನಾಯಿತಿ ನೀಡುವ ಸಾಧ್ಯತೆಯಿದ್ದು, ಈ ಪ್ರಸ್ತಾಪವನ್ನು ಹಲವಾರು ರಾಜ್ಯಗಳು ಪ್ರಸ್ತಾಪ ಮಾಡಿದೆ. ಸಣ್ಣ ಪಿಜಿ ಮತ್ತು ಹಾಸ್ಟೆಲ್ ನಿರ್ವಾಹಕರಿಗೆ ಸಹಕರಿಸುವ ನಿಟ್ಟಿನಲ್ಲಿ ಕೇಂದ್ರ ಈ ಕ್ರಮ ಕೈಗೊಳ್ಳಲು ಮುಂದಾಗಿದೆ.ವಿದ್ಯಾರ್ಥಿಗಳಿಗೆ ನೆರವಾಗುವ ನಿಟ್ಟಿನಲ್ಲಿ ಕೌನ್ಸಿಲ್ ದಿನಕ್ಕೆ 1,000 ರೂ.ಗಳ ಹಾಸ್ಟೆಲ್ ಸುಂಕದ ಮೇಲೆ ಜಿಎಸ್ಟಿ ವಿನಾಯಿತಿಯನ್ನು ಪರಿಗಣಿಸುವ ಸಾಧ್ಯತೆಯಿದೆ.

ಬಾಡಿಗೆಯ ಮೇಲಿನ ಪ್ರಸ್ತುತ ಜಿಎಸ್ಟಿ ವಿನಾಯಿತಿಗಳು ಹೀಗಿವೆ:
ದಿನಕ್ಕೆ 1,000 ರೂ.ವರೆಗಿನ ಕೊಠಡಿಗಳಿಗೆ ಜಿಎಸ್ಟಿ ವಿನಾಯಿತಿ ನೀಡಲಾಗಿದ್ದು, ದಿನಕ್ಕೆ 10,000 ರೂ.ವರೆಗಿನ ಬಾಡಿಗೆಗೆ ಅಂಗಡಿಗಳು ಮತ್ತು ವ್ಯವಹಾರಗಳಿಗೆ ಜಿಎಸ್ಟಿಯಿಂದ ವಿನಾಯಿತಿ ನೀಡಲಾಗಿದೆ. ಅದೇ ರೀತಿ,ಸಮುದಾಯ ಭವನಗಳು ಇಲ್ಲವೇ ತೆರೆದ ಪ್ರದೇಶಗಳು ದಿನಕ್ಕೆ 10,000 ರೂ.ವರೆಗೆ ಬಾಡಿಗೆ ವಿಧಿಸಿದರೆ ಜಿಎಸ್ಟಿ ಪಾವತಿ ಮಾಡಬೇಕಾದ ಅವಶ್ಯಕತೆಯಿಲ್ಲ. ಶಾಶ್ವತ ವಸತಿ ಸೌಕರ್ಯಗಳ ಮೇಲಿನ ಜಿಎಸ್ಟಿಗೆ ಕೌನ್ಸಿಲ್ ವಿನಾಯಿತಿ ನೀಡುವುದು ಅನುಮಾನ. ಪ್ರಸ್ತುತ, ಬಾಡಿಗೆ ಆದಾಯವನ್ನು ಪಡೆಯುವವರು ಶೇಕಡಾ 18 ರಷ್ಟು ತೆರಿಗೆ ಪಾವತಿ ಮಾಡಬೇಕಾಗುತ್ತದೆ.

ಇದನ್ನೂ ಓದಿ:ಪೊಲೀಸ್‌ ಇಲಾಖೆ ಉದ್ಯೋಗಾಂಕ್ಷಿಗಳಿಗೆ ಭರ್ಜರಿ ಗುಡ್‌ನ್ಯೂಸ್;‌ ಬೆಳ್ಳಂಬೆಳಗ್ಗೆ ಸಚಿವರು ನೀಡಿದ್ರು ಸಿಹಿ ಸುದ್ದಿ!