Drought relief fund: ರೈತರಿಗೆ ಭರ್ಜರಿ ಗುಡ್ನ್ಯೂಸ್: ರಾಜ್ಯ ಸರ್ಕಾರದಿಂದ ಬೆಳೆ ಪರಿಹಾರ ಹಣ ಬಿಡುಗಡೆ
Karnataka government released drought relief fund for total 31 districts latest news
Drought Relief Fund: ಅಕಾಲಿಕ ಮಳೆ, ಬರಗಾಲ ಪರಿಸ್ಥಿತಿಯಿಂದಾಗಿ ರೈತರು ಕಂಗಾಲಾಗಿದ್ದಾರೆ. ಒಟ್ಟಿನಲ್ಲಿ ಮಳೆ ಬೆಳೆ ಇಲ್ಲದೇ ರಾಜ್ಯದೆಲ್ಲೆಡೆ ತೀವ್ರ ಬರ ಆವರಿಸಿದೆ. ಈ ಹಿನ್ನೆಲೆ ಇದೀಗ ರಾಜ್ಯ ಸರ್ಕಾರ ಬರ ಪರಿಹಾರ ಹಣ ಬಿಡುಗಡೆ ಮಾಡುವ ಮೂಲಕ ರೈತರಿಗೆ ಸಿಹಿ ಸುದ್ದಿ ನೀಡಿದೆ.
ಸದ್ಯ ರಾಜ್ಯ ಸರ್ಕಾರ ಬರ ಪರಿಹಾರ ಹಣ (Drought relief fund ) ಬಿಡುಗಡೆ ಮಾಡಿದ್ದು, 31 ಜಿಲ್ಲೆಗಳ ಬೆಳೆ ನಷ್ಟ ಆಧರಿಸಿ ಎಸ್.ಡಿ.ಆರ್.ಎಫ್ ಅಡಿಯಲ್ಲಿ ಇಂದು ಅಂದರೆ ನವೆಂಬರ್ 03 ರಂದು 324 ಕೋಟಿ ರೂಪಾಯಿ ಅನುದಾನ ಬಿಡುಗಡೆ ಮಾಡಿದೆ.
ಕೆಲವು ರೈತರು ಬೆಳೆ ಬೆಳೆದಿದ್ದರೂ ನೀರಿನ ಕೊರತೆಯಿಂದ ಬೆಳೆ ಒಣಗಿ ಹೋಗಿವೆ. ಇದರಿಂದ ರೈತರು ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ. ಒಟ್ಟಿನಲ್ಲಿ ರೈತರಿಗೆ ಮುಂಗಾರು ವೈಫಲ್ಯದಿಂದ ಬೆಳೆ ಬೆಳೆಯಲು ಸಾಧ್ಯವಾಗಿಲ್ಲ. ಇದರಿಂದ ಹಲವು ರೈತ ಸಂಘಟನೆಗಳು ಬೆಳೆ ಪರಿಹಾರ ಘೋಷಣೆ ಮಾಡಬೇಕೆಂದು ಆಗ್ರಹಿಸಿದ್ದವು. ಈ ಹಿನ್ನೆಲೆ ಇದೀಗ ರಾಜ್ಯ ಸರ್ಕಾರ ಬೆಳೆ ಪರಿಹಾರಕ್ಕೆ ಅನುದಾನ ರಿಲೀಸ್ ಮಾಡಿದ್ದು, ಬೆಳೆ ಕಳೆದುಕೊಂಡು ಕಂಗಾಲಾಗಿರುವ ಅರ್ಹ ರೈತರಿಗೆ ಸರ್ಕಾರದ ಈ ಬರ ಪರಿಹಾರ ಹಣ ಸಿಗಲಿದೆ.
ಇದನ್ನೂ ಓದಿ: ಮಹಿಳೆಯರೇ ಇತ್ತ ಗಮನಿಸಿ, ಗೃಹಲಕ್ಷ್ಮಿ ಹಣದ ನಿರೀಕ್ಷೆಯಲ್ಲಿರುವವರಿಗೆ ಸಿಎಂ ನೀಡಿದ್ರು ಸಿಹಿ ಸುದ್ದಿ!!