Bank of Baroda: ಬ್ಯಾಂಕ್ ಆಫ್ ಬರೋಡಾದಲ್ಲಿ ಖಾತೆ ಹೊಂದಿರೋರಿಗೆ ಸಿಹಿ ಸುದ್ದಿ – ದೀಪಾವಳಿ ವೇಳೆ ಹೊಸ ಯೋಜನೆ ಆರಂಭ
Zero Balance Svings Account: ಗ್ರಾಹಕರಿಗೆ ದೀಪಾವಳಿ ಗಿಫ್ಟ್ ಆಗಿ ಬ್ಯಾಂಕ್ ಆಫ್ ಬರೋಡಾ ವಿಶೇಷ ಕೊಡುಗೆ ಒಂದನ್ನು ನೀಡಿದೆ. ಹೌದು, ಜೀವಮಾನಪರ್ಯಂತ ಶೂನ್ಯ ಬ್ಯಾಲೆನ್ಸ್ (Zero Balance Svings Account)ಸೌಲಭ್ಯದ ಬಿಒಬಿ ಲೈಟ್ ಉಳಿತಾಯ ಖಾತೆ ಪ್ರಾರಂಭಿಸಿದೆ. ಯಾವುದೇ ಬ್ಯಾಲೆನ್ಸ್ ಅಗತ್ಯವಿಲ್ಲದೆ ಗ್ರಾಹಕರು ಈ ಖಾತೆ ಮೂಲಕ ಎಲ್ಲ ಬ್ಯಾಂಕಿಂಗ್ ಸೇವೆಗಳನ್ನು ಪಡೆಯಬಹುದು.
ಮುಖ್ಯವಾಗಿ ಬ್ಯಾಂಕ್ ಆಫ್ ಬರೋಡಾ ಬ್ಯಾಂಕ್ ನ ಜೀವಮಾನ ಶೂನ್ಯ ಬ್ಯಾಲೆನ್ಸ್ ಖಾತೆ ತೆರೆಯುವ ಗ್ರಾಹಕರು ಉಚಿತ ರುಪೇ ಪ್ಲಾಟಿನಂ ಡೆಬಿಟ್ ಕಾರ್ಡ್ ಕೂಡ ಪಡೆಯಬಹುದು. ಇದನ್ನು ಪಡೆಯಲು ನೀವು ಖಾತೆಯಲ್ಲಿ ನಿರ್ದಿಷ್ಟ ತ್ರೈಮಾಸಿಕ ಸರಾಸರಿ ಬ್ಯಾಲೆನ್ಸ್ (ಕ್ಯುಎಬಿ) ನಿರ್ವಹಣೆ ಮಾಡಬೇಕು. ಇನ್ನು ಅರ್ಹ ಖಾತೆದಾರರು ಜೀವಮಾನ ಉಚಿತ ಕ್ರೆಡಿಟ್ ಕಾರ್ಡ್ ಕೂಡ ಪಡೆಯಬಹುದು.
ಇನ್ನು ಹಬ್ಬದ ಸಮಯದಲ್ಲಿ ಬಿಒಬಿ ಲೈಟ್ ಉಳಿತಾಯ ಖಾತೆಗಳು ವಿವಿಧ ಆಫರ್ ಗಳನ್ನು ಹೊಂದಿರುತ್ತವೆ. ಎಲೆಕ್ಟ್ರಾನಿಕ್ಸ್ , ಗೃಹೋಪಕರಣಗಳು, ಪ್ರವಾಸ, ಆಹಾರ, ಫ್ಯಾಷನ್, ಮನೋರಂಜನೆ, ಜೀವನಶೈಲಿ, ದಿನಸಿ ಹಾಗೂ ಆರೋಗ್ಯ ಕಾಳಜಿ ಉತ್ಪನ್ನಗಳ ಜೊತೆಗೆ ಬ್ಯಾಂಕ್ ಸಹಭಾಗಿತ್ವ ಹೊಂದಿದೆ. ಬ್ಯಾಂಕ್ ಆಫ್ ಬರೋಡಾ ಕಾರ್ಡ್ ದಾರರು ರಿಲಯನ್ಸ್ ಡಿಜಿಟಲ್, ಕ್ರೋಮಾ, ಮೇಕ್ ಮೈ ಟ್ರಿಪ್, ಅಮೆಜಾನ್, ಬುಕ್ ಮೈ ಶೋ, ಮೈಂತ್ರಾ, ಸ್ವಿಗ್ಗಿ, ಝೊಮ್ಯಾಟೋ ಹಾಗೂ ಇನ್ನೂ ಅನೇಕ ಬ್ರ್ಯಾಂಡ್ ಗಳಿಂದ ವಿಶೇಷ ಆಫರ್ ಹಾಗೂ ಡಿಸ್ಕೌಂಟ್ಸ್ ಹೊಂದಿವೆ. ಈ ಹಬ್ಬದ ಆಂದೋಲನ 2023ರ ಡಿಸೆಂಬರ್ 31ರ ತನಕ ನಡೆಯಲಿದೆ.
ಬಿಒಬಿ ಲೈಟ್ ಉಳಿತಾಯ ಖಾತೆಯ ವಿಶೇಷತೆಗಳೇನು? ಯಾರು ಈ ಖಾತೆ ತೆರೆಯಬಹುದು ಎಂಬುದು ಇಲ್ಲಿ ತಿಳಿಯಿರಿ.
ಬಿಒಬಿ ಲೈಟ್ ಉಳಿತಾಯ ಖಾತೆ ವಿಶೇಷತೆಗಳು:
10 ವರ್ಷ ಮೇಲ್ಪಟ್ಟ ಯಾವುದೇ ಭಾರತೀಯ ನಾಗರಿಕ ಈ ಖಾತೆ ತೆರೆಯಬಹುದು.
ಜೀವಮಾನ ಶೂನ್ಯ ಬ್ಯಾಲೆನ್ಸ್ ಉಳಿತಾಯ ಖಾತೆ.
ಜೀವನಪರ್ಯಂತ ಉಚಿತ ರುಪೇ ಪ್ಲಾಟಿನಂ ಡೆಬಿಟ್ ಕಾರ್ಡ್ ಪಡೆಯಬಹುದು. ಆದರೆ, ಇದನ್ನು ಪಡೆಯಲು ನಿರ್ದಿಷ್ಟ ತ್ರೈಮಾಸಿಕ ಸರಾಸರಿ ಬ್ಯಾಲೆನ್ಸ್ (ಕ್ಯುಎಬಿ) ಇರೋದು ಅಗತ್ಯ.
ಮೆಟ್ರೋ/ನಗರ ಶಾಖೆಗೆ: 3,000ರೂ.
ಅರೆ-ನಗರ ಶಾಖೆಗೆ: 2,000ರೂ.
ಗ್ರಾಮೀಣ ಶಾಖೆಗೆ : 1,000ರೂ.
ಬ್ಯಾಂಕ್ ಆಪ್ ಬರೋಡಾದ ಡೆಬಿಟ್ ಹಾಗೂ ಕ್ರೆಡಿಟ್ ಕಾರ್ಡ್ ಗಳ ಮೇಲೆ ಆಕರ್ಷಕ ಡಿಸ್ಕೌಂಟ್ಸ್ ಕೂಡ ಸಿಗಲಿದೆ.
ಅಗತ್ಯವಿರುವ ಕೆವೈಸಿ ದಾಖಲೆಗಳು
ಚಾಲನಾ ಪರವಾನಗಿ ಜೊತೆಗೆ ಫೋಟೋ,ಪಾಸ್ ಫೋರ್ಟ್, ಮತದಾರರ ಚೀಟಿ, ಎನ್ ಆರ್ ಇಜಿಎ ಉದ್ಯೋಗ ಚೀಟಿ,ಮುನ್ಸಿಪಲ್ ಅಥವಾ ಆಸ್ತಿ ತೆರಿಗೆ ರಸೀದಿ, ಯುಟಿಲಿಟಿ ಬಿಲ್, ಫಲಾನುಭವಿ ಹೆಸರು ಹಾಗೂ ವಿಳಾಸ ಹೊಂದಿರುವ ರಾಷ್ಟ್ರೀಯ ಜನಸಂಖ್ಯಾ ನೋಂದಣಿ ಪಟ್ಟಿಯಿಂದ ಕಾಗದ.
ವಿದ್ಯಾರ್ಥಿಗಳಿಗೆ ಈ ದಾಖಲೆ ಅಗತ್ಯ:
ಕಾಲೇಜು ಅಥವಾ ಸಂಸ್ಥೆ ಐಡಿ, ಕಾಲೇಜು ಅಥವಾ ಸಂಸ್ಥೆಯಿಂದ ದಾಖಲಾತಿ ಪತ್ರ, ಕಾಲೇಜು ಅಥವಾ ಸಂಸ್ಥೆಯಿಂದ ಪಡೆದ ಪತ್ರ
ವಿದೇಶಿಗರಿಗೆ ಈ ದಾಖಲೆ ಅಗತ್ಯ
ಪಾಸ್ ಪೋರ್ಟ್, ಅರ್ಹ ಭಾರತೀಯ ವೀಸಾ, ವಿದೇಶಿ ಚಾಲನಾ ಪರವಾನಗಿ ಸೇರಿದಂತೆ ವಿದೇಶದಲ್ಲಿನ ಪ್ರಸಕ್ತ ವಿಳಾಸದ ದಾಖಲೆ.
ವಿದೇಶಿ ವಿದ್ಯಾರ್ಥಿಗಳಿಗೆ ಈ ದಾಖಲೆ ಅಗತ್ಯ: ಪಾಸ್ ಪೋರ್ಟ್, ವಿದೇಶದಲ್ಲಿನ ವಿಳಾಸ ದೃಢೀಕರಿಸುವ ಪತ್ರ, ಅರ್ಹ ಭಾರತೀಯ ವೀಸಾ, ಪ್ಯಾನ್ ಕಾರ್ಡ್, ಫಾರ್ಮ್ 60 ಬೇಕಾಗುತ್ತದೆ.
ಇದನ್ನು ಓದಿ: ಈ ಸಾಲ ಪಡೆಯಲು ನಿಮಗೆ ಯಾವುದೇ ದಾಖಲೆ ಬೇಡ- ಬಡ್ಡಿಯಂತೂ ತುಂಬಾ ಕಡಿಮೆ