Darshan Pet Dog Attack: ದರ್ಶನ್ ಮನೆಯ ನಾಯಿಯಿಂದ ಮಹಿಳೆಗೆ ದಾಳಿ – ನಟನ ವಿರುದ್ಧ ಅಟೆಮ್ಟ್ ಟು ಮರ್ಡರ್ ಕೇಸ್ ದಾಖಲು ?!!

Share the Article

Darshan Pet Dog Attack: ಅಕ್ಟೊಬರ್ 28 ರಂದು ಅಮಿತಾ ಜಿಂದಾಲ್ (Amita Jindal) ಅನ್ನೋರ ಮೇಲೆ ದರ್ಶನ್ ಅವರ ಸಾಕು ನಾಯಿ ಅಟ್ಯಾಕ್ ( Darshan Pet Dog Attack) ಮಾಡಿದ್ದು ಇದೀಗ ಈ ಸುದ್ದಿ ಎಲ್ಲೆಡೆ ವೈರಲ್ ಆಗಿದೆ. ಹೌದು, ಅಮಿತಾ ಮೇಲೆ ನಾಯಿ ದಾಳಿ ಮಾಡೋವಾಗ ಅದನ್ನ ತಡಯೋ ಪ್ರಯ್ನವನ್ನೂ ಮಾಡಲಿಲ್ಲ. ಹಾಗೇನೆ ದುರುದ್ದೇಶದಿಂದಲೇ ನಾಯಿಯಿಂದಲೇ ಅಟ್ಯಾಕ್ ಮಾಡಿಸಲಾಗಿದೆ. ಇದು ಅಟೆಮ್ಟ್‌ ಟು ಮರ್ಡರ್ ಕೇಸ್ ಎಂದು ಅಮಿತಾ ಜಿಂದಾಲ್ ಹೇಳಿದ್ದಾರೆ.

ಆರ್.ಆರ್‌.ನಗರದ ದರ್ಶನ್ ಮನೆ ಬಳಿ ಬರ್ತಿರೋವಾಗ ದರ್ಶನ್ ಮನೆ ನಾಯಿ ಅಟ್ಯಾಕ್ ಮಾಡಿದೆ. ನನಗೆ ಗೊತ್ತೇ ಆಗಲಿಲ್ಲ. ಸಡನ್ ಆಗಿಯೇ ನಾಯಿ ಬಂದು ಅಟ್ಯಾಕ್ ಮಾಡಿಯೇ ಬಿಡ್ತು. ಆದರೆ, ದರ್ಶನ್ ಮನೆಯ ಯಾವುದೇ ಸದಸ್ಯರು ಹೊರಗೆ ಬರಲಿಲ್ಲ. ನಾಯಿಯನ್ನ ನೋಡಿಕೊಳ್ಳುವ ವ್ಯಕ್ತಿ ಕೂಡ ಅಟ್ಯಾಕ್ ಮಾಡಿದ ನಾಯಿಯನ್ನ ಹಿಡಿಯಲು ಮುಂದೆ ಬರಲಿಲ್ಲ. ನಾಯಿ ಅಟ್ಯಾಕ್ ಮಾಡಿದಾಗ, ಬೇಕು ಅಂತಲೇ ನಾಯಿಯನ್ನ ತಡೆಯೋ ಕೆಲಸ ಆ ವ್ಯಕ್ತಿ ಮಾಡಲೇ ಇಲ್ಲ. ಹಾಗಾಗಿಯೇ ಇದನ್ನ ನಾನು ಉದ್ದೇಶ ಪೂರ್ವಕವಾಗಿ ನಾಯಿ ದಾಳಿ ಎಂದು ಹೇಳುತ್ತೇನೆ.

ಅದಲ್ಲದೆ ನಾಯಿ ದಾಳಿ ಆದ್ಮೇಲೆ ಯಾವುದೇ ರೀತಿಯ ಮಾನವೀಯತೆಯನ್ನು ಕೂಡ ತೋರಿಸಲಿಲ್ಲ. ಆಸ್ಪತ್ರೆಗೆ ಕರೆದುಕೊಂದು ಹೋಗುವುದು ದೂರದ ಮಾತು ಅಂತಲೇ ಬೇಸರದಲ್ಲಿ ಅಮಿತಾ ಜಿಂದಾಲ್ ಬೇಸರ ವ್ಯಕ್ತಪಡಿಸಿದ್ದಾರೆ. ಇದೇ ಬೇಸರದಲ್ಲಿಯೇ ಅಂದು ಅಮಿತಾ ಜಿಂದಾಲ್ ಪೊಲೀಸರಿಗೆ ದೂರು ನೀಡಿದ್ದರು. ಮತ್ತು 307 ಸೆಕ್ಷನ್ ಹಾಕಿ ನನ್ನ ಮೇಲೆ ಬೇಕು ಅಂತಲೇ ಅಟ್ಯಾಕ್ ಮಾಡಿಸಿದ್ದಾರೆ ಅಂತಲೇ ಹೇಳಿದ್ದರು. ಆದರೆ ಆರ್.ಆರ್.ನಗರದ ಪೊಲೀಸರು IPC 289 ಸೆಕ್ಷನ್‌ ಅಡಿ ದರ್ಶನ್ ಮತ್ತು ನಾಯಿ ನೋಡಿಕೊಳ್ಳುವ ವ್ಯಕ್ತಿ ವಿರುದ್ಧ ಕೇಸ್ ದಾಖಲು ಮಾಡಿದೆ.

ಸದ್ಯ ನಾಯಿಂದ ದಾಳಿಗೊಳಪಟ್ಟ ಅಮಿತಾ ಜಿಂದಾಲ್ ಇನ್ನೂ ನೋವಿನಲ್ಲಿಯೇ ಇದ್ದಾರೆ. ಸಣ್ಣಗೆ ನೋವು ಇವರನ್ನ ಕಾಡುತ್ತಲೇ ಇದೆ. ಇದರಿಂದ ಅಮಿತಾ ಜಿಂದಾಲ್ ಭಯಗೊಂಡಿರುವುದಾಗಿ ಮಾಧ್ಯಮಕ್ಕೆ ತಿಳಿಸಿದ್ದಾರೆ.

Leave A Reply