November financial Rules Changes: ಹಣಕಾಸು ನಿಯಮಗಳಲ್ಲಿ ಮಹತ್ವದ ಬದಲಾವಣೆ- ನವೆಂಬರ್’ನಲ್ಲಿ ಈ ಪ್ರಮುಖ ರೂಲ್ಸ್ ಗಳೆಲ್ಲಾ ಚೇಂಜ್ !!
National news these financial rules change from 1 November 2023 complete details is here
November financial Rules Changes: ನವೆಂಬರ್ ತಿಂಗಳು ಹಣಕಾಸು ಕ್ಷೇತ್ರದಲ್ಲಿ ಹಲವು ಬದಲಾವಣೆಗಳಾಗಿವೆ (November financial Rules Changes). ಜನಸಾಮಾನ್ಯರಿಗೆ ಮತ್ತು ಉದ್ಯಮಗಳಿಗೆ ಆರ್ಥಿಕವಾಗಿ ಪರಿಣಾಮ ಬೀರಲಿದ್ದು, ನವೆಂಬರ್ 1ರಿಂದ ಹೊಸ ಹಣಕಾಸು ನಿಯಮಗಳು ಜಾರಿಗೆ ಬರಲಿವೆ.
ಅನಿಲ ದರ ಪರಿಷ್ಕರಣೆ:
ಪೆಟ್ರೋಲಿಯಂ ಮಾರ್ಕೆಟಿಂಗ್ ಕಂಪನಿಗಳು ಪ್ರತೀ ತಿಂಗಳ ಆರಂಭದಲ್ಲಿ ಗ್ಯಾಸ್ ಸಿಲಿಂಡರ್ಗಳ ಬೆಲೆ ಪರಿಷ್ಕರಿಸುತ್ತವೆ. ಇದೀಗ ನವೆಂಬರ್ 1ರಂದು ಕಮರ್ಷಿಯಲ್ ಗ್ಯಾಸ್ ಸಿಲಿಂಡರ್ ಬೆಲೆ 101.50 ರೂನಷ್ಟು ಹೆಚ್ಚಾಗಿದೆ.
ಲ್ಯಾಪ್ಸ್ ಆದ ಎಲ್ಐಸಿ ಪಾಲಿಸಿಗಳಿಗೆ ಮರುಜೀವ:
ಎಲ್ಐಸಿ ಪಾಲಿಸಿಯ ಪ್ರೀಮಿಯಮ್ ಅನ್ನು ನಿರ್ದಿಷ್ಟ ಅವಧಿಯವರೆಗೆ ಕಟ್ಟದೇ ಹೋದರೆ ಅವುಗಳು ಲ್ಯಾಪ್ಸ್ ಆಗುತ್ತವೆ. ಇವುಗಳ ರಿನಿವಲ್ಗೆ ಸರ್ಕಾರ ಅವಕಾಶ ಕೊಟ್ಟಿತ್ತು. ಅಕ್ಟೋಬರ್ 31ರವರೆಗೂ ಇದಕ್ಕೆ ಅವಕಾಶ ಇತ್ತು. ಈಗ ಈ ಡೆಡ್ಲೈನ್ ಮುಗಿದಿದೆ.
ಷೇರುಪೇಟೆಯಲ್ಲಿ ವಹಿವಾಟು ಶುಲ್ಕ:
ಭಾರತದ ಎರಡು ಪ್ರಮುಖ ಷೇರು ವಿನಿಮಯ ಕೇಂದ್ರಗಳಲ್ಲಿ ಒಂದಾದ ಬಾಂಬೆ ಸ್ಟಾಕ್ ಎಕ್ಸ್ಚೇಂಜ್ ನವೆಂಬರ್ 1ರಿಂದ ಈಕ್ವಿಟಿ ಡಿರೈವೇಟಿಂಗ್ ಸೆಗ್ಮೆಂಟ್ನಲ್ಲಿ ಟ್ರಾನ್ಸಾಕ್ಷನ್ ಶುಲ್ಕವನ್ನು ಹೆಚ್ಚಿಸಿದೆ. ಅಕ್ಟೋಬರ್ 20ರಂದು ಈ ನಿಟ್ಟಿನಲ್ಲಿ ಬಿಎಸ್ಇಯಿಂದ ಘೋಷಣೆಯಾಗಿತ್ತು.
ಇ-ಚಲನ್ ಪೋರ್ಟಲ್ಗೆ ಜಿಎಸ್ಟಿ ಚಲನ್ ಹಾಕುವುದು:
ಕನಿಷ್ಠ 100 ಕೋಟಿ ರೂಗೂ ಹೆಚ್ಚು ಮೌಲ್ಯದ ಸಂಸ್ಥೆಗಳು ಇ-ಚಲನ್ ಪೋರ್ಟಲ್ನಲ್ಲಿ ಜಿಎಸ್ಟಿ ಚಲನ್ ಅಪ್ಲೋಡ್ ಮಾಡಬೇಕು. ಬಿಲ್ ರಚನೆಯಾಗಿ 30 ದಿನದೊಳಗೆ ಅಪ್ಲೋಡ್ ಆಗಬೇಕು ಎಂದು ನ್ಯಾಷನಲ್ ಇನ್ಫಾರ್ಮ್ಯಾಟಿಕ್ಸ್ ಸೆಂಟರ್ (ಎನ್ಐಸಿ) ಹೇಳಿದೆ.
ಲ್ಯಾಪ್ಟಾಪ್ ಆಮದು ನಿರ್ಬಂಧ:
ಎಚ್ಎಸ್ಎನ್ 8741 ಕೆಟಗರಿ ಅಡಿಯಲ್ಲಿ ಲ್ಯಾಪ್ಟಾಪ್, ಪರ್ಸನಲ್ ಕಂಪ್ಯೂಟರ್, ಟ್ಯಾಬ್ಲೆಟ್ ಇತ್ಯಾದಿ ಏಳು ಉತ್ಪನ್ನಗಳ ಆಮದುಗಳ ಮೇಲೆ ಸರ್ಕಾರ ಆಗಸ್ಟ್ 3ರಂದು ನಿರ್ಬಂಧ ಹೇರಿತ್ತು. ಈಗ ನಿರ್ಬಂಧಿತ ಆಮದುಗಳಿಗೆ ಪರವಾನಿಗೆ ಹೊಂದಿದ್ದರೆ ಈ ಏಳು ಉತ್ಪನ್ನಗಳ ಆಮದು ಮಾಡಲು ಅವಕಾಶ ಕೊಡಲಾಗಿದೆ.
ಇದನ್ನೂ ಓದಿ: ಮಹಿಳೆಯರೇ, ಮುಟ್ಟಿನ ನೋವಿನಿಂದ ಪಾರಾಗಲು ಇಲ್ಲಿದೆ ಸುಲಭವಾದ ಉಪಾಯ !!