Post Office Scheme: ‘ಪೋಸ್ಟ್ ಆಫೀಸ್’ನ ಈ ಯೋಜನೆಯಡಿ ಬರೀ 5,000 ಹೂಡಿಕೆ ಮಾಡಿ – ಕೆಲವೇ ದಿನಗಳಲ್ಲಿ ನಿಮ್ಮ ಕೈ ಸೇರುತ್ತೆ 8.5 ಲಕ್ಷ ಹಣ !!
Business news post office new scheme invest 5000 get rs 8 lakhs in this scheme
Post Office Scheme: ಸಾಮಾನ್ಯವಾಗಿ ಪ್ರತಿಯೊಬ್ಬರು ಯಾವುದಾದರೂ ಒಂದು ಕ್ಷೇತ್ರದಲ್ಲಿ ಹೂಡಿಕೆ ಮಾಡೋದು ಸಹಜ. ಸರ್ಕಾರಿ (Governament) ಮತ್ತು ಖಾಸಗಿ ವಲಯದ ಬ್ಯಾಂಕ್‌ಗಳು (Private Bank) ಖಾತೆಗಳ ಇಲ್ಲವೇ ಪೋಸ್ಟ್ ಆಫೀಸ್(Post Office), ಇನ್ಸೂರೆನ್ಸ್ ಕಂಪನಿಗಳಲ್ಲಿ ಇಲ್ಲವೇ ಇನ್ನಿತರ ಹಣಕಾಸಿನ ವ್ಯವಹಾರಗಳಲ್ಲಿ ಠೇವಣಿ(Deposit) ಇಟ್ಟು ನಿಶ್ಚಿತ ಲಾಭ ಪಡೆಯುವ ಸೌಲಭ್ಯ ಪಡೆಯಬಹುದಾಗಿದೆ. ನೀವು ಸಣ್ಣ ಉಳಿತಾಯ (small savings plan) ಯೋಜನೆಯಲ್ಲಿ ಹೂಡಿಕೆ ಮಾಡಲು ಬಯಸಿದ್ದರೆ ನಿಮಗೆ ಮುಖ್ಯ ಮಾಹಿತಿ ಇಲ್ಲಿದೆ.
ಅಂಚೆ ಕಚೇರಿ ತನ್ನ ಮರುಕಳಿಸುವ ಠೇವಣಿಯ (PORD) ಬಡ್ಡಿ ದರವನ್ನು ಹೆಚ್ಚಿಸಿದ್ದು ನೀವು ತಕ್ಷಣವೇ ಹೂಡಿಕೆ ಮಾಡಿದರೆ ಹೆಚ್ಚಿನ ಲಾಭ ಗಳಿಸಬಹುದು. ಪೋಸ್ಟ್ ಆಫೀಸ್ ಸ್ಕೀಮ್ (post office scheme) ಮೂಲಕ ದೀರ್ಘಾವಧಿಯ ಹೂಡಿಕೆಯನ್ನು ಮಾಡಬಹುದು. 2023 ಅಕ್ಟೋಬರ್- ಡಿಸೆಂಬರ್ ತ್ರೈಮಾಸಿಕ ಮರುಕಳಿಸುವ ಠೇವಣಿಯ ಮೇಲೆ ಪೋಸ್ಟ್ ಆಫೀಸ್ ಬಡ್ಡಿ ದರವನ್ನು ಹೆಚ್ಚಿಸಿದೆ. 20 ಬೇಸಿಸ್ ಪಾಯಿಂಟ್ (basis point) ಗಳಿಗೆ ಆರ್‌ಡಿ ಬಡ್ಡಿ ದರ ಹೆಚ್ಚಳವಾಗಿದೆ. ಸದ್ಯ, ಆರ್ ಡಿ ಮೇಲಿನ ವಾರ್ಷಿಕ ಬಡ್ಡಿ (yearly interest) 6.5% ನಿಂದ 6.7% ಗೆ ಹೆಚ್ಚಳವಾಗಿದೆ. ಯೋಜನೆಯಲ್ಲಿ ತ್ರೈಮಾಸಿಕದ ಆಧಾರದ ಮೇಲೆ ಬಡ್ಡಿ ವಿತರಣೆ ಮಾಡಲಾಗುತ್ತದೆ.
ಸಣ್ಣ ಉಳಿತಾಯ ಮಾಡಲು ಪೋಸ್ಟ್ ಆಫೀಸ್ ನ ಉಳಿತಾಯ ಯೋಜನೆಗಳು ಅತ್ಯುತ್ತಮ ಆಯ್ಕೆಗಳಾಗಿದ್ದು, ಅಂಚೆ ಕಚೇರಿಯ ಮರುಕಳಿಸುವ ಠೇವಣಿಯಲ್ಲಿ ಹೂಡಿಕೆ ಮಾಡಿದರೆ ಕೆಲವು ವರ್ಷಗಳಲ್ಲಿ ದುಪ್ಪಟ್ಟು ಲಾಭ ಪಡೆಯಬಹುದು.ಪೋಸ್ಟ್ ಆಫೀಸ್ನ ಮರುಕಳಿಸುವ ಠೇವಣಿ ಯೋಜನೆಯಲ್ಲಿ ಕನಿಷ್ಠ 100 ರೂಪಾಯಿಗಳಿಂದ ಹೂಡಿಕೆ ಆರಂಭ ಮಾಡಬಹುದು. ಇದಕ್ಕೆ ಗರಿಷ್ಠ ಮಿತಿಯಿಲ್ಲ. ಒಂದು ವೇಳೆ ನೀವು ಉಳಿತಾಯ ಖಾತೆಯನ್ನು ಕ್ಲೋಸ್ ಮಾಡುವುದಾದರೆ, ಮೂರು ವರ್ಷಗಳ ಅವಧಿಗೆ ಪ್ರೀ ಕ್ಲೋಸರ್ (pre closure) ಅವಕಾಶವಿರಲಿದೆ. ಆರ್ ಡಿ ಯಲ್ಲಿ. ನೀವು 12 ತಿಂಗಳ ವರೆಗೆ ಹಣ ಪಾವತಿ ಮಾಡಿದ್ದರೆ ನೀವು ಹಣ ಪಾವತಿ ಮಾಡಿದ್ದಕ್ಕೆ 50% ನಷ್ಟು ಸಾಲ (Loan) ಸೌಲಭ್ಯವನ್ನು ಪಡೆಯಬಹುದು.
ಪೋಸ್ಟ್ ಆಫೀಸ್ನ ಆರ್‌ಡಿ ಯಲ್ಲಿ 5000ಗಳನ್ನು ಹೂಡಿಕೆ ಮಾಡಿದರೆ, ಕೇವಲ ಐದು ವರ್ಷಗಳಲ್ಲಿ 5,000 ಹೂಡಿಕೆಗೆ 3,56,830 ರೂಪಾಯಿಗಳನ್ನು ಪಡೆಯಬಹುದು. ಇದರಲ್ಲಿ ನಿಮ್ಮ ಹೂಡಿಕೆ ಮೂರು ಲಕ್ಷ ರೂಪಾಯಿ ಆಗಿದ್ದರೆ 56,830 ರೂಪಾಯಿಗಳನ್ನು ಪೋಸ್ಟ್ ಆಫೀಸ್ನ ಬಡ್ಡಿಯಾಗಿ ಪಡೆಯಬಹುದು.ಒಬ್ಬ ವ್ಯಕ್ತಿ ಎಷ್ಟು ಖಾತೆಯನ್ನು ಬೇಕಾದರೂ ತೆರೆಯಬಹುದು. ವೈಯಕ್ತಿಕ ಖಾತೆ ಮಾತ್ರವಲ್ಲದೆ ಮೂರು ಜನ ಸೇರಿ ಜಂಟಿ ಖಾತೆಯನ್ನು (joint account) ತೆರೆಯಲು ಕೂಡ ಅವಕಾಶವಿದೆ. ಅಂದರೆ ಅಪ್ರಾಪ್ತ ವಯಸ್ಸಿನ ಮಕ್ಕಳಿಗೆ ಗಾರ್ಡಿಯನ್ ಆಗಿ ನಿಮ್ಮ ಹೆಸರಿನಲ್ಲಿ ಖಾತೆ ತೆರೆಯಬಹುದು.