Traffic Rules: ಸಂಚಾರಿ ನಿಯಮ ಉಲ್ಲಂಘನೆ- ದಂಡ ವಸೂಲಾತಿಗೆ ರಾಜ್ಯಾದ್ಯಂತ ಹೊಸ ರೂಲ್ಸ್ !!
Karnataka news traffic rules break new rules for collection of fines across the state
Traffic Rules break: ಬೆಂಗಳೂರಿನಲ್ಲಿ ಸಂಚಾರಿ ಪೋಲೀಸರು ನಗರದ ವಾಹನ ಚಾಲಕರು ಸಂಚಾರಿ ನಿಯಮ ಉಲ್ಲಂಘನೆ (Traffic Rules Break)ಮಾಡುವುದನ್ನು ತಪ್ಪಿಸಲು ಹೆಚ್ಚಿನ ಪ್ರಮಾಣದಲ್ಲಿ ತಂತ್ರಜ್ಞಾನದ(Technology )ಕಡೆಗೆ ಮೊಗ ಮಾಡುತ್ತಿದ್ದಾರೆ. ಹೀಗಾಗಿ, ಟ್ರಾಫಿಕ್ ರೂಲ್ಸ್ ಬ್ರೇಕ್ ಮಾಡುವವರನ್ನು ಹಿಡಿಯುವುದು ಪೋಲೀಸರಿಗೆ(Police)ಕೊಂಚ ಮಟ್ಟಿಗೆ ಸುಲಭವಾಗಿದೆ.
ಈ ನಡುವೆ, ಸಂಚಾರ ನಿಯಮ ಉಲ್ಲಂಘನೆ ಪ್ರಕರಣದಲ್ಲಿ ಬೆಂಗಳೂರು ನಗರದಲ್ಲಿ ಜಾರಿಯಲ್ಲಿರುವ ಇ- ಚಲನ್ ಸೇವೆಯನ್ನು ರಾಜ್ಯ ವಿಸ್ತರಿಸಲು ಪೊಲೀಸ್ ಇಲಾಖೆ ಚಿಂತನೆ ನಡೆಸಿದೆ. ಸಂಚಾರ ನಿಯಮಗಳ ಉಲ್ಲಂಘನೆ ಪ್ರಕರಣಗಳಲ್ಲಿ ಸ್ಥಳದಲ್ಲೇ ದಂಡ ವಸೂಲಿ, ಪಾರದರ್ಶಕತೆ ತರುವ ಉದ್ದೇಶದಿಂದ ಇ- ಚಲನ್ ಸೇವೆಯನ್ನು ಜಾರಿಗೆ ತರಲಾಗಿದೆ. ಈ ನಿಟ್ಟಿನಲ್ಲಿ ಎಲ್ಲಾ ಪೊಲೀಸ್ ಠಾಣೆಗಳಿಗೆ ಪರ್ಸನಲ್ ಡಿಜಿಟಲ್ ಅಸಿಸ್ಟೆಂಟ್ ಉಪಕರಣಗಳನ್ನು ವಿತರಣೆ ಕಾರ್ಯ ನಡೆಯುತ್ತಿದೆ.
ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ಪೊಲೀಸ್ ಠಾಣೆಗಳಿಗೆ ತಲಾ ಎರಡು, ಸಂಚಾರ ಪೊಲೀಸ್ ಠಾಣೆಗಳಿಗೆ ತಲಾ ಐದು ಪರ್ಸನಲ್ ಡಿಜಿಟಲ್ ಅಸಿಸ್ಟೆಂಟ್ ಉಪಕರಣಗಳನ್ನು ವಿತರಣೆ ಮಾಡಲಾಗುತ್ತಿದೆ.ಇದರ ಬಳಕೆಯಿಂದ ಸ್ಥಳದಲ್ಲಿಯೇ ವಾಹನ ಸವಾರರು, ಚಾಲಕರು ದಂಡಪಾವತಿಸಿ ರಶೀದಿ ಪಡೆದುಕೊಳ್ಳಬಹುದು. ಸಂಚಾರಿ ನಿಯಮ ಉಲ್ಲಂಘನೆ ಮಾಡುವವರು ಕ್ರೆಡಿಟ್ ಕಾರ್ಡ್, ಡೆಬಿಟ್ ಕಾರ್ಡ್, ಯುಪಿಐ ಮೂಲಕ ದಂಡ ಕಟ್ಟಬಹುದು.ಇದರ ಜೊತೆಗೆ ಯಾವ ಸ್ಥಳದಿಂದ ದಂಡ ವಿಧಿಸಲಾಗಿದೆ ಎನ್ನುವುದು ಕೂಡ ಲಿಂಕ್ ಮೂಲಕ ತಿಳಿಯಲಿದೆ.
ಇದನ್ನೂ ಓದಿ: SSLC, Second Puc ವಾರ್ಷಿಕ ಪರೀಕ್ಷೆಯ ಸಂಭವನೀಯ ವೇಳಾಪಟ್ಟಿ ಬಿಡುಗಡೆ!