Ramalinga Reddy : KSRTC ಪ್ರಯಾಣಿಕರಿಗೆ ಬೆಳ್ಳಂಬೆಳಗ್ಗೆಯೇ ಭರ್ಜರಿ ಗುಡ್ ನ್ಯೂಸ್ !!

Karnataka news Ramalinga Reddy give good news for KSRTC travelers government app for transportation

Ramalinga Reddy: ರಾಜ್ಯ ಸಾರಿಗೆ ಇಲಾಖೆಯು ತನ್ನ ಪ್ರಯಾಣಿಕರಿಗೆ ಇತ್ತೀಚಿನ ದಿನಗಳಲ್ಲಿ ಉಚಿತ ಪ್ರಯಾಣ, ಹೊಸ ಬಸ್ ಖರೀದಿ, ಹಬ್ಬದ ಸಂದರ್ಭದಲ್ಲಿ ಹೆಚ್ಚು ಬಸ್ ವ್ಯವಸ್ಥೆ, ಎಲೆಕ್ಟ್ರಿಕ್ ಬಸ್ ಸೌಲಭ್ಯ ಸೇರಿದಂತೆ ಹಲವಾರು ವಿಚಾರಗಳ ಮೂಲಕ ಸಂತದ ಸುದ್ದಿಗಳನ್ನು ನೀಡುತ್ತಿದೆ. ಅಂತೆ ಇದೀಗ KSRTC ಸಂಸ್ಥೆಯು ಮತ್ತೊಂದು ಹೊಸ ಸುದ್ದಿಯ ಮೂಲಕ ತಮ್ಮೆಲ್ಲ ಪ್ರಯಾಣಿಕರಿಗೂ ಭರ್ಜರಿ ಗುಡ್ ನ್ಯೂಸ್ ನೀಡಿದೆ.

ಬೆಂಗಳೂರುಗಳಂತಹ ಮಹಾ ನಗರಗಳಲ್ಲಿರುವ ಓಲಾ, ಉಬರ್ ಸೌಲಭ್ಯಗಳ ಬಗ್ಗೆ ನಿಮಗೆಲ್ಲಾ ತಿಳಿದೇ ಇದೆ. ಈ ಸಂಸ್ಥೆಗಳು ಕಲ್ಪಿಸೋ ವ್ಯವಸ್ಥೆ, ನೀಡೋ ಸೇವೆ ಜನರಿಗೆ ತುಂಬಾ ಫೇವರಿಟ್. ಅಂತೆಯೇ ಇವುಗಳ ಈ ತ್ವರಿತ ಸೇವೆ, ಸೌಲಭ್ಯಗಳನ್ನು ಮನಗಂಡ ನಮ್ಮ ನೆಚ್ಚಿನ, ದೇಶದಲ್ಲೇ ನಂಬರ್ -1 ಎನಿಸಿರುವ ಹೆಮ್ಮೆಯ KSRTC ಸಂಸ್ಥೆಯು ಓಲಾ, ಉಬರ್‌ ರೀತಿಯಲ್ಲೇ ಆ್ಯಪ್‌ ಪರಿಚಯಿಸಲು ಮುಂದಾಗಿದೆ.

ಹೌದು, ಓಲಾ, ಉಬರ್‌ ರೀತಿಯಲ್ಲಿ ಶೀಘ್ರದಲ್ಲೇ ಸಾರಿಗೆ ಇಲಾಖೆಯಿಂದ ಆ್ಯಪ್‌ ಪರಿಚಯಿಸಲಾಗುತ್ತದೆ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ(Ramalinga Reddy) ಭರವಸೆ ನೀಡಿದ್ದು KSRTC ಪ್ರಯಾಣಿಕರಿಗೆ ಖುಷಿ ನೀಡಿದೆ. ಅಂದಹಾಗೆ ಈ ಬಗ್ಗೆ ಮಾತನಾಡಿರುವ ಅವರು ಇದು ಆನ್‌ಲೈನ್‌ ಕಾಲವಾಗಿರುವುದರಿಂದ ಆ್ಯಪ್ ಅಗತ್ಯ ಹೆಚ್ಚಿದೆ. ಆದಷ್ಟು ಬೇಗ ಅಥವಾ ಸ್ವಲ್ಪ ತಡವಾಗಿಯಾದರೂ ಆ್ಯಪ್ ಪರಿಚಯಿಸಲಾಗುತ್ತದೆ. ಅದಕ್ಕಾಗಿ ಯೋಜನೆಯನ್ನು ರೂಪಿಸಿದ್ದೇವೆ’ ಎಂದು ತಿಳಿಸಿದ್ದಾರೆ. ಇದು ಏನಾದರೂ ಬೇಗ ಬಳಕೆಗೆ ಬಂದರೆ KSRTC ಪ್ರಯಾಣಿಕರಿಗೆ ತುಂಬಾ ಅನುಕೂಲವಾಗಲಿದೆ.

ಇದನ್ನೂ ಓದಿ: H D Devegowda: ಲೋಕಸಭಾ ಚುನಾವಣೆ- BJP ಯಿಂದ ಎಚ್ ಡಿ ದೇವೇಗೌಡ ಸ್ಪರ್ಧೆ ?!

Leave A Reply

Your email address will not be published.