Mangaluru Corridor Travel Time Reduced: ಕರಾವಳಿಗರಿಗೆ ಸಂತಸದ ಸುದ್ದಿ : ಸದ್ಯದಲ್ಲೇ ಬೆಂಗಳೂರು- ಮಂಗಳೂರು ಕಾರಿಡಾರ್ ನಿರ್ಮಾಣ !! ಗೃಹಸಚಿವರಿಂದ ಮಹತ್ವದ ಘೋಷಣೆ
Mangaluru Corridor Travel Time Reduced Important announcement by Home Minister
Mangaluru Corridor Travel Time Reduced: ಬೆಂಗಳೂರಲ್ಲಿ ನೆಲೆಸಿರುವ ಮಂಗಳೂರಿನ ಜನತೆಗೆ ಗುಡ್ ನ್ಯೂಸ್ ಇಲ್ಲಿದೆ. ಮಂಗಳೂರಿನ ಪ್ರತಿ ಸಲ ಊರಿಗೆ ತೆರಳಲು ಕಾರು, ಬಸ್, ರೈಲಿನಲ್ಲಿ ಪ್ರಯಾಣಿಸಲು 5 ರಿಂದ 12 ಗಂಟೆ ಬೇಕಾಗುತ್ತದೆ. ಇದನ್ನು ಮೂರುವರೆ ಗಂಟೆಗೆ ಇಳಿಸಲಾಗುವ(Mangaluru Corridor Travel Time Reduced) ಕುರಿತು ಸರ್ಕಾರ ಚಿಂತನೆ ನಡೆಸುತ್ತಿದೆ. ಉಡುಪಿಯ ಅಮ್ಮಣ್ಣಿ ರಾಮಣ್ಣ ಶೆಟ್ಟಿ ತೆರೆದ ಮೈದಾನದ ಕನ್ಯಾನ ಸದಾಶಿವ ಶೆಟ್ಟಿ ವೇದಿಕೆಯಲ್ಲಿ ಭಾನುವಾರ ನಡೆದ ವಿಶ್ವ ಬಂಟರ ಸಾಂಸ್ಕೃತಿಕ ವೈಭವ ಸಮಾರೋಪದಲ್ಲಿ ಗೃಹ ಸಚಿವ ಡಾ. ಜಿ ಪರಮೇಶ್ವರ್(Home Minister Dr G Parameshwar) ಸಿಹಿ ಸುದ್ದಿ ನೀಡಿದ್ದಾರೆ. ”ಬೆಂಗಳೂರು-ಮಂಗಳೂರು ಕಾರಿಡಾರ್ ನಿರ್ಮಾಣದಿಂದ ಪ್ರಯಾಣದ ಅವಧಿ ಮೂರೂವರೆ ಗಂಟೆಗೆ ಇಳಿಯಲಿದೆ” ಎಂದು ಡಾ. ಜಿ. ಪರಮೇಶ್ವರ್ ತಿಳಿಸಿದ್ದಾರೆ.
”ದಕ್ಷಿಣ ಕನ್ನಡ ವೇಗವಾಗಿ ಬೆಳವಣಿಗೆ ಆಗುತ್ತಿದೆ. 20 ವರ್ಷದ ಹಿಂದೆ ಉನ್ನತ ಶಿಕ್ಷಣ ಸಚಿವನಾಗಿದ್ದ ಸಂದರ್ಭ ಮಂಗಳೂರು ರಾಜ್ಯದ ಎರಡನೇ ನಗರವಾಗಿ ಬೆಳೆಯಬಹುದೆನ್ನುವ ನಿರೀಕ್ಷೆ ನಿಜವಾಗುತ್ತಿದೆ “ಎಂದು ಸಚಿವರು ಹೇಳಿದ್ದಾರೆ. ಇದೇ ವೇಳೆ, ಬೆಂಗಳೂರು-ಮಂಗಳೂರು ಕಾರಿಡಾರ್ ನಿರ್ಮಾಣದ ಉದ್ದೇಶವಿರುವ ಕುರಿತು ಗೃಹ ಸಚಿವ ಡಾ ಜಿ ಪರಮೇಶ್ವರ್( Dr G Parameshwar) ಮಾಹಿತಿ ನೀಡಿದ್ದಾರೆ.