Rahul Gandhi Announcement: ಶಾಲಾ ಕಾಲೇಜುಗಳಲ್ಲಿ ಉಚಿತ ಶಿಕ್ಷಣ, ರೈತರ ಸಾಲ ಮನ್ನ- ಕಾಂಗ್ರೆಸ್ ನಿಂದ ಮಹತ್ವದ ಘೋಷಣೆ
Politics news Congress new guarantees Rahul Gandhi announces free education latest news
Rahul Gandhi Announcement: ಈಗಾಗಲೇ ಛತ್ತೀಸಗಡದಲ್ಲಿ ಆಡಳಿತ ನಡೆಸುತ್ತಿರುವ ಕಾಂಗ್ರೆಸ್ ಪಕ್ಷವು ಮತ್ತೊಮ್ಮೆ ಅಧಿಕಾರಕ್ಕೆ ಬಂದರೆ ಜನರಿಗೆ ಹೊಸ ಭರವಸೆ ಒಂದನ್ನು ಕಾಂಗ್ರೆಸ್ ಸಂಸದರು ನೀಡಿದ್ದಾರೆ. ಹೌದು, ಮತ್ತೊಮ್ಮೆ ಛತ್ತೀಸಗಡದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಕೆಜಿಯಿಂದ ಪಿಜಿಯವರೆಗೆ ಶುಲ್ಕರಹಿತ ಶಿಕ್ಷಣ ನೀಡುವುದಾಗಿ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಘೋಷಣೆ (Rahul Gandhi Announcement)ಮಾಡಿದ್ದಾರೆ. ಮತ್ತು ಇತರೆ ರಾಜ್ಯಗಳಲ್ಲಿ ಮಾಡಿರುವಂತೆ ಛತ್ತೀಸಗಡದಲ್ಲಿಯೂ ರೈತರ ಸಾಲ ಮನ್ನಾ ಮಾಡುವುದಾಗಿ ಭರವಸೆ ನೀಡಿದ್ದಾರೆ.
ಕಂಕೇರ್ ಜಿಲ್ಲೆಯಲ್ಲಿ ಚುನಾವಣಾ ರಾಲಿ ಉದ್ದೇಶಿಸಿ ಶನಿವಾರ ಮಾತನಾಡಿದ ರಾಹುಲ್, ” ಕೆಜಿಯಿಂದ ಪಿಜಿವರೆಗೆ ಶುಲ್ಕರಹಿತ ಶಿಕ್ಷಣ ನೀಡುವ ಗುರಿ ನಮ್ಮದು. ಅದನ್ನು ನಮ್ಮ ಸರಕಾರವು ಈಡೇರಿಸಲಿದೆ. ಆದರೆ, ಒಬಿಸಿ ಸಮುದಾಯದ ಪರವಾಗಿ ಭಾಷಣಗಳಲ್ಲಿ ಮಾತನಾಡುವ ಪ್ರಧಾನಿ ಮೋದಿ ದೇಶಾದ್ಯಂತ ಜಾತಿ ಗಣತಿಗೆ ಮಾತ್ರ ಹಿಂದೇಟು ಹಾಕುತ್ತಿದ್ದಾರೆ. ಹೀಗಾದಲ್ಲಿ ಹಿಂದುಳಿದ ಸಮುದಾಯಕ್ಕೆ ಯೋಜನೆಗಳ ಪೂರ್ಣ ಲಾಭ ಹೇಗೆ ಸಿಗಲಿದೆ,” ಎಂದು ಪ್ರಶ್ನಿಸಿದ್ದಾರೆ.
ಮತ್ತು ಬುಡಕಟ್ಟು ಸಮುದಾಯದ ಜನರು ಬಹುಸಂಖ್ಯಾತರಾಗಿರುವ ಛತ್ತೀಸ್‌ಗಢದ ಬಸ್ತಾರ್ ಪ್ರಾಂತ್ಯವನ್ನು ಗುರಿಯಾಗಿಸಿ ಮಹತ್ತರ ಭರವಸೆ ನೀಡಿದ ರಾಹುಲ್ ಗಾಂಧಿ, ” ಬೀಡಿಗಳನ್ನು ಕಟ್ಟಲು ಬಳಸುವ ಎಲೆಗಳನ್ನು ಸಂಗ್ರಹಿಸುವವರಿಗೆ ವಾರ್ಷಿಕ 4 ಸಾವಿರ ರೂ. ಪ್ರೋತ್ಸಾಹ ಧನ ನೀಡಲಾಗುವುದು,” ಎಂದು ಘೋಷಿಸಿದರು
”ಬಿಜೆಪಿ ನೇತೃತ್ವದ ಕೇಂದ್ರ ಸರಕಾರವು ಎಲ್ಲರ ಬ್ಯಾಂಕ್ ಖಾತೆಗೆ 15 ಲಕ್ಷ ರೂ. ಹಾಕುವ ಸುಳ್ಳು ಭರವಸೆಯನ್ನು ಪ್ರಧಾನಿ ಮೋದಿ ಮಾಡಿದ್ದರು. ಅಂಥ ಸುಳ್ಳು ಭರವಸೆ ನಾನು ಕೊಡಲ್ಲ,” ಎಂದು ರಾಹುಲ್ ಕುಟುಕಿದ್ದಾರೆ. ಇನ್ನು ಮೂವರು ಉದ್ಯಮಿಗಳಿಗೆ ಲಾಭ ಮಾಡಿಕೊಡಲು ಬಿಜೆಪಿ ಕೆಲಸ ಮಾಡುತ್ತಿದೆ. ಆದರೆ, ರೈತರು, ಆದಿವಾಸಿಗರು, ಕಾರ್ಮಿಕರಿಗೆ ಲಾಭ ಮಾಡಿಕೊಡಲು ಕಾಂಗ್ರೆಸ್ ಶ್ರಮಿಸುತ್ತಿದೆ” ಎಂದು ಹೇಳಿದ್ದಾರೆ.
ಇದನ್ನೂ ಓದಿ: ಡೈವೋರ್ಸ್ ಪಡೆದ ಮಹಿಳೆಯರಿಗೂ ಭರ್ಜರಿ ಗುಡ್ ನ್ಯೂಸ್ – ಸರ್ಕಾರದಿಂದ ನಿಮಗೂ ಸಿಗಲಿದೆ ತಿಂಗಳ ಮಾಸಾಶನ