Kochi Blast: ಕೇರಳ ಕನ್ವೆನ್ಷನ್ ಸೆಂಟರ್‌ನಲ್ಲಿ ಭಾರೀ ಸ್ಫೋಟ! ಓರ್ವ ಮಹಿಳೆ ಸಾವು, 23 ಮಂದಿಗೆ ಗಾಯ; ಉಗ್ರರಿಂದ ದಾಳಿ ಶಂಕೆ!!
kochi kerala blast at zamra international convention centre during prayer one killed 23 injured
Kochi Blast: ಕೇರಳದ ಎರ್ನಾಕುಲಂನಲ್ಲಿರುವ ಕನ್ವೆನ್ಷನ್ ಸೆಂಟರ್ (Convention Center) ನಲ್ಲಿ ಭೀಕರ ಸ್ಫೋಟ (Kochi Blast) ಸಂಭವಿಸಿದ್ದು, ಓರ್ವ ಮಹಿಳೆ ಮೃತಪಟ್ಟಿದ್ದು, ಸುಮಾರು 23 ಜನರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಏಕಾಏಕಿ ಸ್ಫೋಟ ಸಂಭವಿಸಿದ್ದು, ಸ್ಥಳದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣಗೊಂಡಿದೆ. ಇದೊಂದು ಉಗ್ರದ ದಾಳಿಯ ಶಂಕೆ ವ್ಯಕ್ತವಾಗಿದೆ.
ಈ ಘಟನೆ ಎರ್ನಾಕುಲಂನ ಕಲಮಶ್ಶೇರಿಯಲ್ಲಿರುವ ಜಾಮ್ರಾ ಇಂಟರ್‌ನ್ಯಾಷನಲ್ ಸಭಾಭವನದಲ್ಲಿ ನಡೆದಿದೆ. ಇಲ್ಲಿ ಬೆಳಗ್ಗಿನ ಪ್ರಾರ್ಥನೆಗಾಗಿ ನೂರಾರು ಜನ ಸೇರಿದ್ದು, ಸರಿ ಸುಮಾರು 9.45ಕ್ಕೆ ಈ ಘಟನೆ ನಡೆದಿದೆ. ಸತತವಾಗಿ ಮೂರು ಸ್ಫೋಟ ಸಂಭವಿಸಿದೆ. ಸ್ಫೋಟದಿಂದ ಉಂಟಾದ ಬೆಂಕಿ ಹೊತ್ತುತ್ತಲೇ ನೂರಾರು ಜನ ಹೊರಗೆ ಓಡಿ ಬಂದಿದ್ದಾರೆ ಎಂದು ವರದಿಯಾಗಿದೆ.
ಅಲ್ಲಿನ ಪ್ರತ್ಯಕ್ಷದರ್ಶಿಗಳ ಪ್ರಕಾರ, ಕೆಲವೇ ಕೆಲವು ನಿಮಿಷಗಳಲ್ಲಿ ಐದು ಸ್ಫೋಟ ಸಂಭವಿಸಿದ್ದು, ಸತತ ಸ್ಫೋಟಗೊಂಡಿರುವುದನ್ನು ನೋಡಿದರೆ ಇದು ಉಗ್ರರ ದಾಳಿ ಇರಬಹುದು ಎಂದು ಶಂಕೆ ವ್ಯಕ್ತಪಡಿಸಿದ್ದಾರೆ. ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದು, ನಿಖರ ಮಾಹಿತಿ ದೊರಕುತ್ತಿಲ್ಲ. ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ, ಪೊಲೀಸರು ಆಗಮಿಸಿದ್ದು, ಬೆಂಕಿ ನಂದಿಸುವ ಕೆಲಸ ನಡೆಯುತ್ತಿದೆ ಎಂದು ವರದಿಯಾಗಿದೆ.
Kerala: Blast at convention centre during Christian prayer meeting in Kalamaserry, Kochi.
– One lady killed in blast
– Atleast 23 injured
– Explosion in a convention of Jehovah’s Witnesses
– Explosion at center of the hall
– Around 5 explosions according to witnesses
– Injured… pic.twitter.com/I6rensiS4q— Megh Updates ™ (@MeghUpdates) October 29, 2023
ಇದನ್ನೂ ಓದಿ: HIV ಇದೆ ಎಂದು ಹೇಳದ ರೋಗಿಗೆ ಮನಸೋ ಇಚ್ಛೆ ಥಳಿಸಿದ ವೈದ್ಯ! ವೀಡಿಯೋ ವೈರಲ್, ಕೊನೆಗೇನಾಯ್ತು?