E Pan Card: ಪಾನ್ ಕಾರ್ಡ್ ಕಳೆದು ಹೋದ್ರೆ ಟೆನ್ಷನ್ ಬೇಡ- ಕೂತಲ್ಲೇ ಆನ್ಲೈನ್ ಅಲ್ಲಿ ಸುಲಭವಾಗಿ ಡೌನ್ ಲೋಡ್ ಮಾಡಿ
If your PAN card lost here is how to download e pan card in online
E Pan Card: ಭಾರತೀಯ ನಾಗರಿಕರಿಗೆ ಆಧಾರ್ ಕಾರ್ಡ್ ಮತ್ತು ಪ್ಯಾನ್ ಕಾರ್ಡ್ ಎಂಬ ಎರಡು ಪ್ರಮುಖ ದಾಖಲೆ ಅಗತ್ಯ. ಪ್ಯಾನ್ , ಅಥವಾ ಶಾಶ್ವತ ಖಾತೆ ಸಂಖ್ಯೆ, ಕೇಂದ್ರೀಯ ನೇರ ತೆರಿಗೆಗಳ ಮಂಡಳಿಯ ಮೇಲ್ವಿಚಾರಣೆಯಡಿಯಲ್ಲಿ ಆದಾಯ ತೆರಿಗೆ ಇಲಾಖೆಯು ಪ್ರತಿ ತೆರಿಗೆದಾರರಿಗೆ ನೀಡಲಾದ ವಿಶಿಷ್ಟವಾದ 10-ಅಂಕಿಯ ಆಲ್ಫಾನ್ಯೂಮರಿಕ್ ಗುರುತಾಗಿದೆ. ಇನ್ನು ಇ-ಪ್ಯಾನ್ (E Pan Card) ಎಂದರೆ ಆದಾಯ ತೆರಿಗೆ ಇಲಾಖೆಯಿಂದ ಅಥವಾ ಡಿಜಿಟಲ್ ರೂಪದಲ್ಲಿ ನೀಡಲಾದ ಡಿಜಿಟಲ್ ಸಹಿ ಪ್ಯಾನ್ ಕಾರ್ಡ್ ಆಗಿದೆ.
ಪ್ರತಿಯೊಂದು ಸಣ್ಣ ಹಣಕಾಸಿನ ಅಗತ್ಯಕ್ಕೂ ಪ್ಯಾನ್ ಕಾರ್ಡ್ ಕಡ್ಡಾಯವಾಗಿದೆ. ಬ್ಯಾಂಕಿನಿಂದ ಹಣವನ್ನು ಹಿಂಪಡೆಯುವುದರಿಂದ ಹಿಡಿದು ಆಸ್ತಿಗಳನ್ನು ಖರೀದಿಸುವವರೆಗೆ, ನೀವು ಪ್ಯಾನ್ ಕಾರ್ಡ್ ಹೊಂದಿರಬೇಕು. ಪ್ಯಾನ್ ಕಾರ್ಡ್ ಅನ್ನು ಗುರುತಿನ ಚೀಟಿಯಾಗಿಯೂ ಪರಿಗಣಿಸಲಾಗುತ್ತದೆ. ಆದ್ದರಿಂದ ಪ್ಯಾನ್ ಕಾರ್ಡ್ ಲಭ್ಯವಿಲ್ಲದಿದ್ದರೆ ಏನು ಮಾಡಬೇಕು? ತಕ್ಷಣವೇ ಪ್ಯಾನ್ ಕಾರ್ಡ್ ಅಗತ್ಯವಿದ್ದರೆ ಏನು ಮಾಡಬೇಕು? ಎಂದು ಇಲ್ಲಿ ತಿಳಿಸಲಾಗಿದೆ. ಹೌದು, ಒಂದು ವೇಳೆ ನಿಮ್ಮ ಬಳಿ ಪ್ಯಾನ್ ಕಾರ್ಡ್ ಇಲ್ಲದಿದ್ದರೆ, ನೀವು 10 ನಿಮಿಷಗಳಲ್ಲಿ ಇ-ಕಾರ್ಡ್ ಪಡೆಯಬಹುದು. ಇದಕ್ಕಾಗಿ ಒಂದು ರೂಪಾಯಿ ಖರ್ಚು ಮಾಡುವ ಅಗತ್ಯವಿಲ್ಲ.
ಪ್ಯಾನ್ ಕಾರ್ಡ್ ಅನ್ನು ಕಳೆದುಕೊಂಡವರಿಗೆ ಪ್ಯಾನ್ ಹಾನಿಗೊಳಗಾದವರಿಗೆ ಇ-ಪ್ಯಾನ್ ಪಡೆಯಲು ಆದಾಯ ತೆರಿಗೆ ಇಲಾಖೆ ಸಾಧ್ಯವಾಗಿಸಿದೆ. ಸಾಮಾನ್ಯವಾಗಿ, ಆಫ್ ಲೈನ್ ಮೋಡ್ನಲ್ಲಿ ಪ್ಯಾನ್ ಕಾರ್ಡ್ ಪಡೆಯಲು, ನೀವು ಅರ್ಜಿ ಸಲ್ಲಿಸಬೇಕಾಗುತ್ತದೆ. ಇಡೀ ಪ್ರಕ್ರಿಯೆ ಮುಗಿಯಲು ಮತ್ತು ಪ್ಯಾನ್ ಕಾರ್ಡ್ ಕೈಯಲ್ಲಿರಲು ಕನಿಷ್ಠ ಎರಡು ವಾರಗಳು ಬೇಕಾಗುತ್ತದೆ. ಅಲ್ಲಿಯವರೆಗೆ ಇ-ಪ್ಯಾನ್ ನೀವು ಬಳಸಬಹುದು.
ಸದ್ಯ ಇ-ಪ್ಯಾನ್ ಡೌನ್ಲೋಡ್ ಮಾಡಲು, ನೀವು ಆಧಾರ್ ಕಾರ್ಡ್ ಹೊಂದಿರಬೇಕು. ಅಲ್ಲದೆ, ನಿಮ್ಮ ಆಧಾರ್ ಕಾರ್ಡ್ ಅನ್ನು ನಿಮ್ಮ ಮೊಬೈಲ್ ಸಂಖ್ಯೆಯೊಂದಿಗೆ ನೋಂದಾಯಿಸಬೇಕು. ಇ-ಪ್ಯಾನ್ ಕಾರ್ಡ್ ಅನ್ನು ಕೇವಲ ಒಂದು ಆಧಾರ್ ಕಾರ್ಡ್ ಇದ್ದಲ್ಲಿ ಸುಲಭವಾಗಿ ಡೌನ್ಲೋಡ್ ಮಾಡಬಹುದು. ಇ-ಪ್ಯಾನ್ ಡಿಜಿಟಲ್ ಸಹಿಯೊಂದಿಗೆ ಇರುತ್ತದೆ. ಆನೈನ್ನಲ್ಲಿ ಡೌನ್ಸ್‌ಡ್ ಮಾಡಿದ ಪ್ಯಾನ್ ಕಾರ್ಡ್ ಅನ್ನು ಸಾಮಾನ್ಯ ಪ್ಯಾನ್ ಕಾರ್ಡ್ನಂತೆ ಬಳಸಬಹುದು.
ಇ-ಪ್ಯಾನ್ ಕಾರ್ಡ್ ಡೌನ್ಲೋಡ್ ಮಾಡುವ ವಿಧಾನ:
ಇದಕ್ಕಾಗಿ, ನೀವು ಮೊದಲು ಆದಾಯ ತೆರಿಗೆಯ ಅಧಿಕೃತ ವೆಬ್ ಸೈಟ್ ಗೆ ಹೋಗಬೇಕಾಗುತ್ತದೆ. ನಂತರ ಮುಖಪುಟದಲ್ಲಿ ಕಾಣಿಸಿಕೊಳ್ಳುವ ಇನ್ಸ್ಟಾಗ್ ಇ-ಪ್ಯಾನ್ ಆಯ್ಕೆಯ ಮೇಲೆ ಕ್ಲಿಕ್ ಮಾಡಿ. ನಂತರ ಇ-ಪ್ಯಾನ್ ಪುಟದಲ್ಲಿ ಹೊಸ ಇ- ಪ್ಯಾನ್ ಆಯ್ಕೆ ಕಾಣಿಸಿಕೊಳ್ಳುತ್ತದೆ. ಅದನ್ನು ಕ್ಲಿಕ್ ಮಾಡಬೇಕು. ನಂತರ, ತೆರೆದ ಇ-ಪ್ಯಾನ್ ಪುಟದಲ್ಲಿ ಆಧಾರ್ ಸಂಖ್ಯೆಯನ್ನು ನಮೂದಿಸಿ ಮತ್ತು ಕಾನ್ಫ್ ಮೇಲೆ ಕ್ಲಿಕ್ ಮಾಡಿ.
ಈಗ ನಿಮ್ಮ ಆಧಾರ್ ಕಾರ್ಡ್ ಜೊತೆಗೆ ಲಿಂಕ್ ಮಾಡಲಾದ ಮೊಬೈಲ್ ನಂಬರಿಗೆ ಒಟಿಪಿ ಬರುತ್ತದೆ.
ಅಲ್ಲಿ ಯುಐಡಿಎಐನೊಂದಿಗೆ ಆಧಾರ್ ವಿವರಗಳನ್ನು ಪರಿಶೀಲಿಸಲು, ಚೆಕ್ ಬಾಕ್ಸ್ ಆಯ್ಕೆ ಮಾಡಿ ಮತ್ತು ಮುಂದುವರಿಯುವ ಆಯ್ಕೆಯನ್ನು ಕ್ಲಿಕ್ ಮಾಡಿ.
ಆಧಾರ್ ವಿವರಗಳ ಪುಟದಲ್ಲಿ, ಚೆಕ್ ಬಾಕ್ಸ್ ಅಗ್ರಿಯನ್ನು ಆಯ್ಕೆ ಮಾಡಿ ಮತ್ತು ಮುಂದುವರಿಯುವ ಆಯ್ಕೆಯನ್ನು ಕ್ಲಿಕ್ ಮಾಡಿ.
ತಕ್ಷಣ, ನಿಮ್ಮ ಮೊಬೈಲ್ ಸಂಖ್ಯೆಯು ಯಶಸ್ಸಿನ ಸಂದೇಶವನ್ನು ಸ್ವೀಕರಿಸುತ್ತದೆ. ಇದು ಐಡಿಯನ್ನು ಒಳಗೊಂಡಿದೆ.
ಕೊನೆಗೆ ನಿಮ್ಮ ಬಳಕೆದಾರ ಐಡಿ ಮತ್ತು ಪಾಸ್ ವರ್ಡ್ ನೊಂದಿಗೆ ನೀವು ಈ ಫೈಲಿಂಗ್ ಪೋರ್ಟಲ್ ಗೆ ಲಾಗ್ ಇನ್ ಆಗಬೇಕು. ನಂತರ ಡ್ಯಾಶ್ ಬೋರ್ಡ್ ನಲ್ಲಿ ಇ-ಪ್ಯಾನ್ ವೀಕ್ಷಣೆ ಅಥವಾ ಡೌನ್ಲೋಡ್ ಆಯ್ಕೆಯನ್ನು ಕ್ಲಿಕ್ ಮಾಡಿ. ಅಲ್ಲಿ ನಿಮ್ಮ ಆಧಾರ್ ಸಂಖ್ಯೆ 12 ಸಂಖ್ಯೆಗಳನ್ನು ನೀವು ತಕ್ಷಣ ನಮೂದಿಸಬೇಕು. ಈ ಸಂಖ್ಯೆಯನ್ನು ನಮೂದಿಸಿ ಮತ್ತು ಮುಂದುವರಿಸು ಕ್ಲಿಕ್ ಮಾಡಿ. ತಕ್ಷಣವೇ ನಿಮ್ಮ ಮೊಬೈಲ್ ಸಂಖ್ಯೆಗೆ ಒಟಿಪಿ ಕಳುಹಿಸಲಾಗುತ್ತದೆ. ಒಟಿಪಿಯನ್ನು ನಮೂದಿಸಿದ ನಂತರ ನಿಮ್ಮ ಪ್ಯಾನ್ ಕಾರ್ಡ್ ಅನ್ನು ನೀವು ಡೌನ್ಲೋಡ್ ಮಾಡಬಹುದು.
ಇದನ್ನೂ ಓದಿ: ಮಹಿಳೆಯರೇ, ಈ ತರದ ಗರ್ಭನಿರೋಧಕ ತಗೊಂಡ್ರೆ ಅಪಾಯ ಕಟ್ಟಿಟ್ಟ ಬುತ್ತಿ – ಗುಣವಾಗದ ಖಾಯಿಲೆ ನಿಮಗಂಟಬಹುದು !!