Mangaluru: ಪೊಲೀಸ್ ಆಯುಕ್ತರ ಹೆಸರಲ್ಲಿ ಹಣಕ್ಕಾಗಿ ಬೇಡಿಕೆ!! ವಾಟ್ಸಪ್ ಕಾಲ್ ಮಾಡಿದಾತನ ಪತ್ತೆಗೆ ತನಿಖೆ ಚುರುಕು
Mangaluru news WhatsApp call in the name of Mangaluru police commissioner and demand for money
Mangaluru:ನಗರ ಪೊಲೀಸ್ ಆಯುಕ್ತರ ಹೆಸರಿನಲ್ಲಿ ವಾಟ್ಸಪ್ ಕಾಲ್, ಚಾಟ್ ಮೂಲಕ ಹಣಕ್ಕಾಗಿ ಬೇಡಿಕೆ ಇಟ್ಟು ವಂಚನೆಗೆ ಯತ್ನಿಸಿದ ಬಗ್ಗೆ ವರದಿಯಾಗಿದ್ದು(Mangaluru news), ಆರೋಪಿಯ ಪತ್ತೆಗೆ ತನಿಖೆ ಚುರುಕುಗೊಂಡಿದೆ.
ವ್ಯಕ್ತಿಯೋರ್ವ ತನ್ನ ವಾಟ್ಸಪ್ ಪ್ರೊಫೈಲ್ ನಲ್ಲಿ ನಗರ ಪೊಲೀಸ್ ಆಯುಕ್ತರಾದ ಅನುಪಮ್ ಅಗರ್ವಾಲ್ ಅವರ ಫೋಟೋ ಹಾಕಿದ್ದು, ಬಳಿಕ ಕೆಲವರಿಗೆ ಹಣಕ್ಕಾಗಿ ಮೆಸೇಜ್ ಹಾಕಿ ವಿನಂತಿಸಿದ್ದಾನೆ.
ತಾನು ಆಸ್ಪತ್ರೆಯಲ್ಲಿ ದಾಖಲಾಗಿದ್ದು,ತುರ್ತು ಹಣ ಬೇಕಾಗಿದೆ. ನನ್ನ ಯುಪಿಐ ವರ್ಕ್ ಆಗದೆ ದ್ದು, ಕೂಡಲೇ ಹಣ ಹಾಕಿ ಸಹಾಯ ಮಾಡಿ ಒಂದು ಗಂಟೆಯ ಒಳಗಾಗಿ ವಾಪಸ್ ಮಾಡುತ್ತೇನೆ ಎಂದು ಮೆಸೇಜ್ ಹಾಕಿದ್ದಾನೆ ಎನ್ನಲಾಗಿದೆ. ಮೆಸೇಜ್ ನೋಡಿ ರಿಪ್ಲೈ ಕೊಡದವರಿಗೆ ವಾಟ್ಸಪ್ ಮೂಲಕ ಕರೆ ಕೂಡಾ ಮಾಡಿದ್ದಾನೆ ಎನ್ನಲಾಗಿದ್ದು, ವಿಚಾರ ತಿಳಿಯುತ್ತಿದ್ದಂತೆ ಪೊಲೀಸ್ ಆಯುಕ್ತರು ಇದೊಂದು ವಂಚನೆಯ ಕೃತ್ಯ ಎಂದು ಸ್ಪಷ್ಟೀಕರಣ ನೀಡಿದ್ದಾರೆ.
ಸದ್ಯ ವಂಚನೆಯ ಜಾಲದ ಬಗ್ಗೆ ತನಿಖೆ ಆರಂಭಗೊಂಡಿದ್ದು, ವಾಟ್ಸಪ್ ಮೆಸೇಜ್ ಹಾಗೂ ಕಾಲ್ ಮೂಲಕ ಆಯುಕ್ತರ ಹೆಸರಿನಲ್ಲಿ ಹಣಕ್ಕಾಗಿ ಬೇಡಿಕೆ ಇಟ್ಟಾತನ ಪತ್ತೆಗೆ ಬಲೆ ಬೀಸಲಾಗಿದೆ.
ಇದನ್ನೂ ಓದಿ: Baba budan Darga: ದರ್ಗಾದ ಶಾಖಾದ್ರಿ ನಿವಾಸದಲ್ಲಿ ಪತ್ತೆಯಾಯ್ತು ಜಿಂಕೆ, ಚಿರತೆ ಚರ್ಮ ಪತ್ತೆ!!!