ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣ : ತಲೆಮರೆಸಿಕೊಂಡಿರುವ ಮೂವರ ಸುಳಿವು ನೀಡಿದವರಿಗೆ ಬಹುಮಾನ ಘೋಷಿಸಿದ ಎನ್.ಐ.ಎ.

NIA has announced that it will reward those give information about Praveen Nettar murder

Praveen Nettar  : ಬೆಳ್ಳಾರೆ ಸಮೀಪದ ಮಾಸ್ತಿಕಟ್ಟೆಯಲ್ಲಿ 2022ರ ಜು.26ರಂದು ನಡೆದ ಬಿಜೆಪಿ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಅವರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ತಲೆಮರೆಸಿಕೊಂಡಿರುವ ಮೂವರು ಆರೋಪಿಗಳ ಸುಳಿವು ನೀಡಿದವರಿಗೆ ಎರಡು ಲಕ್ಷ ರೂಪಾಯಿ ಘೋಷಣೆ ಮಾಡಿ ಬೆಂಗಳೂರು ಎನ್.ಐ.ಎ ಅಧಿಕಾರಿಗಳು ಸಾರ್ವಜನಿಕ ಪ್ರಕಟಣೆ ಹೊರಡಿಸಿದ್ದಾರೆ.

ಬಿಜೆಪಿ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಪ್ರಕರಣದಲ್ಲಿ ತಲೆಮರೆಸಿಕೊಂಡಿರುವ ಆರೋಪಿ ನಂಬರ್ ೨೩ ಆಗಿರುವ ಬೆಳ್ತಂಗಡಿ ತಾಲೂಕಿನ ಪಡಂಗಡಿ ಗ್ರಾಮದ ಪೊಯ್ಕೆಗುಡ್ಡೆ ನಿವಾಸಿ ನೌಷದ್ (೩೨) ಎಂಬಾತ ಕೊಲೆ ಮಾಡಿದ ಆರೋಪಿಗಳು ಪರಾರಿಯಾಗಲು ಸಹಕರಿಸಿದ ಹಿನ್ನೆಲೆಯಲ್ಲಿ ಎನ್.ಐ.ಎ ಅಧಿಕಾರಿಗಳು ಈ ಮೊದಲೇ ಬೆಳ್ತಂಗಡಿಯ ಪಡಂಗಡಿಯಲ್ಲಿರುವ ಮನೆಗೆ ದಾಳಿ ಮಾಡಿದ್ದರು.ಈ ವೇಳೆ ನೌಷದ್ ಪ್ರಕರಣ ನಡೆದ ಬಳಿಕ ನಾಪತ್ತೆಯಾಗಿರುವುದು ಬೆಳಕಿಗೆ ಬಂದಿತ್ತು. ಎನ್.ಐ.ಎ ಅಧಿಕಾರಿಗಳು ನೌಷಾದ್ ಬಗ್ಗೆ ನೋಟಿಸ್ ನೀಡಿ ಹೋಗಿದ್ದರು.

ಉಳಿದ ಆರೋಪಿಗಳಾದ ಸೋಮವಾರಪೇಟೆಯ ಕಲಕಂದೂರು ಅಬ್ದುಲ್ ರಹಿಮಾನ್, ಸೋಮವಾರಪೇಟೆಯ ಅಬ್ದುಲ್ ನಾಸಿರ್‌ ಕುರಿತು ಸುಳಿವು ನೀಡಿದವರಿಗೆ ಬೆಂಗಳೂರು ಎನ್.ಐ.ಎ.ಅಧಿಕಾರಿಗಳು ಮಾಹಿತಿ ನೀಡಿದವರ ವಿವರ ಗೌಪ್ಯವಾಗಿಟ್ಟು ಆ ವ್ಯಕ್ತಿಗೆ ಎರಡು ಲಕ್ಷ ರೂಪಾಯಿ ಬಹುಮಾನ ನೀಡುವುದಾಗಿ ಘೋಷಣೆ ಮಾಡಿರುವುದಾಗಿ ಎನ್.ಐ.ಎ ಪತ್ರಿಕಾ ಪ್ರಕಟಣೆ ಹೊರಡಿಸಿದ್ದಾರೆ.

 

ಇದನ್ನು ಓದಿ: Dog Facts: ರಾತ್ರಿ ಹೊತ್ತು ನಾಯಿಗಳು ಅಳುತ್ತಾ, ಊಳಿಡುವುದೇಕೆ ?! ಶ್ವಾನಗಳಿಗೆ ಆಗ ಕಾಣೋದಾದ್ರೂ ಏನು ?!

Leave A Reply

Your email address will not be published.