Tiger Claw Pendent: ಹುಲಿ ಉಗುರು ಮಾತ್ರವಲ್ಲ, ಇನ್ಮುಂದೆ ಈ ಥರದ ಪೆಂಡೆಂಟ್ ಕೂಡ ಹಾಕೋ ಹಾಗಿಲ್ಲ – ಅರಣ್ಯ ಇಲಾಖೆಯಿಂದ ಬಂತು ಟಫ್ ರೂಲ್ಸ್
Tiger claw pendant case government implemented tough rules from now on
Tiger Claw Pendent: ಬಿಗ್ ಬಾಸ್ ಸ್ಪರ್ಧಿ ವರ್ತೂರು ಸಂತೋಷ್ ಅವರ ಮೂಲಕ ಆರಂಭವಾದ ಹುಲಿ ಉಗುರಿನ(Tiger Claw) ಪ್ರಕರಣ ಸದ್ಯ, ಸ್ಯಾಂಡಲ್‌ವುಡ್ (sandalwood)ಮತ್ತು ರಾಜಕೀಯ(Politics)ಅಂಗಳಕ್ಕೆ ತಲುಪಿದೆ. ಹುಲಿ ಉಗುರು ಪೆಂಡೆಂಟ್(Tiger Claw Pendent) ಧರಿಸಿ ಶೋಕಿ ಮಾಡುವವರಿಗೆ ಅರಣ್ಯ ಇಲಾಖೆ ಬಿಗ್ ಶಾಕ್ ನೀಡಿದ್ದು, ಇನ್ನೂ ಮುಂದೆ ಅರಣ್ಯ ಇಲಾಖೆ ಮತ್ತಷ್ಟು ಟಫ್ ರೂಲ್ಸ್ ತರಲು ಮುಂದಾಗಿದೆ.
ಒಂದು ವೇಳೆ ಈ ರೂಲ್ಸ್ ಬ್ರೇಕ್ ಮಾಡಿದರೆ, ಸೆರೆಮನೆವಾಸ ಗ್ಯಾರಂಟಿ!! ವನ್ಯಜೀವಿ ಸಂರಕ್ಷಣಾ ಕಾಯ್ದೆ 1972 ರ ಕಾನೂನಿನ ನಿಯಮಗಳು ಮತ್ತಷ್ಟು ಕಠಿಣ ನಿಯಮ ಜಾರಿಗೆ ತರಲು ತೀರ್ಮಾನ ಕೈಗೊಳ್ಳಲಾಗಿದೆ. ಒಂದು ವಾರದೊಳಗೆ ಸಮಗ್ರ ವರದಿ ಸಿದ್ದಪಡಿಸಲು ಅರಣ್ಯ ಇಲಾಖೆ ಮುಂದಾಗಿದೆ. ಹುಲಿ ಉಗುರು ಬಳಸುವವರ ಮೇಲೆ ಹದ್ದಿನ ಕಣ್ಣು ಇಡಲು ಇಲಾಖೆ ನಿರ್ಧಾರ ಮಾಡಿದ್ದು, ಹುಲಿ ಉಗುರು ಬಳಕೆ ಮಾಡುವವರ ಪತ್ತೆಗೆ ವಿಶೇಷ ತಂಡ ರಚನೆ ಮಾಡಲಾಗಿದೆ. ಅಪರ ಪ್ರಧಾನ ಮುಖ್ಯ ಸಂರಕ್ಷಣಾಧಿಕಾರಿ ನೇತೃತ್ವದಲ್ಲಿ ವರದಿ ಸಿದ್ದ ಪಡಿಸಲಾಗಿದೆ. ಎಲ್ಲೆಡೆ ಹುಲಿ ಚರ್ಮ, ಉಗುರು,ಕೊರಳಿನಲ್ಲಿ ಹಾಕಿಕೊಂಡು ಶೋಕಿ ಮಾಡುವವರ ಸಂಖ್ಯೆ ಹೆಚ್ಚಾಗಿದೆ. ಹೀಗಾಗಿ ರಫ್ & ಟಫ್ ರೂಲ್ಸ್ ಜಾರಿಗೆ ಅರಣ್ಯ ಇಲಾಖೆ ಸಿದ್ದತೆ ನಡೆಸಿದ್ದು, ರೂಲ್ಸ್ ಬ್ರೇಕ್ ಮಾಡುವವರ ವಿರುದ್ದ ಕಠಿಣ ನಿಯಮಗಳನ್ನು ಮಾಡಲು ತೀರ್ಮಾನ ಕೈಗೊಳ್ಳಲಾಗಿದೆ.
ಇದನ್ನೂ ಓದಿ: Water Scarcity: ಭಾರತದ ಅಂತರ್ಜಲದ ಕುರಿತು ಶಾಕಿಂಗ್ ವರದಿ ಬಿಡುಗಡೆ ಮಾಡಿದ ವಿಶ್ವ ಸಂಸ್ಥೆ !!