Gruha Lakshmi Yojana Updates: 2ನೇ ಕಂತಿನ ಗೃಹಲಕ್ಷ್ಮೀ ಹಣ ಬರದವರಿಗೆ ಸರ್ಕಾರದಿಂದ ಗುಡ್ ನ್ಯೂಸ್ !!
Karnataka news Congress guarantee good news from govt those who don't recieve Gruhalakshmi Yojana money
Gruhalakshmi Yojana money: ಕರ್ನಾಟಕ ರಾಜ್ಯದಲ್ಲಿ ಗೃಹಲಕ್ಷ್ಮೀ ಯೋಜನೆಯ (Gurha Lakshmi Yojana)ಮೂಲಕ ಪ್ರತೀ ಮನೆಯ ಯಜಮಾನಿಗೆ ಪ್ರತೀ ತಿಂಗಳು 20000 ರೂಪಾಯಿ ಹಣವನ್ನು ಬ್ಯಾಂಕ್ ಖಾತೆಗೆ ನೇರ ವರ್ಗಾವಣೆ (DBT)ಜಮೆ ಮಾಡಲಾಗುತ್ತಿದೆ. ಆದರೆ, ಈ ನಡುವೆ, ಹೆಚ್ಚಿನ ಮಂದಿಗೆ ಎರಡನೇ ಕಂತಿನ ಹಣ( Gruhalakshmi Yojana money) ಜಮೆ ಆಗಿಲ್ಲ. ಇದೀಗ, ಹಣ ಜಮೆ ಆಗದವರಿಗೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ (Lakshmi Hebbalkar) ಸಿಹಿ ಸುದ್ದಿ ನೀಡಿದ್ದಾರೆ.
ಗೃಹಲಕ್ಷ್ಮೀ ಯೋಜನೆಯ ಬಗ್ಗೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರು ಮಾತನಾಡಿದ್ದು, ಎರಡನೇ ಕಂತಿನ ಹಣವನ್ನು ಅಕ್ಟೋಬರ್ 17 ರಿಂದಲೇ ಗೃಹಿಣಿಯರ ಬ್ಯಾಂಕ್ ಖಾತೆಗಳಿಗೆ ನೇರವಾಗಿ ವರ್ಗಾವಣೆ ಮಾಡಲಾಗುತ್ತಿದೆ.ಗೃಹಲಕ್ಷ್ಮೀ ಯೋಜನೆಯ(Gruha Lakshmi Yojana Updates) ಹಣ ತಲುಪಿಲ್ಲವೆಂದು ಚಿಂತಿಸುವ ಅಗತ್ಯವಿಲ್ಲ . ಫಲಾನುಭವಿಗಳ ಖಾತೆಗೆ ಹಣವು ನೇರವಾಗಿ ವರ್ಗಾವಣೆ ಆಗಲಿದೆ. ಆದರೆ ಫಲಾನುಭವಿಗಳು ಖಾತೆಯಲ್ಲಿ ಏನಾದರು ಸಮಸ್ಯೆ ಇದೆಯೇ ಎಂಬುದನ್ನು ಪರಿಶೀಲಿಸಿಕೊಳ್ಳಬೇಕು ಎಂದು ತಿಳಿಸಿದ್ದಾರೆ.
ಗೃಹ ಲಕ್ಷ್ಮೀ ಯೋಜನೆಯ ಮನೆಯ ಯಜಮಾನಿ ಮಹಿಳೆಯರಿಗೆ ಜೊತೆಯಾಗಿ ಎರಡು ತಿಂಗಳ ಹಣ 4000 ರೂಪಾಯಿ ಜಮೆ ಆಗುವ ಸಂಭವವಿದೆ. ಹೀಗಿದ್ದರೂ ಕೂಡ ಮನೆಯ ಯಜಮಾನಿಯರು ಒಮ್ಮೆ ಬ್ಯಾಂಕ್‌ನ ಶಾಖೆಗೆ ಭೇಟಿ ನೀಡಿ ವಿಚಾರಿಸುವುದು ಒಳ್ಳೆಯದು. ತಾಂತ್ರಿಕ ದೋಷದಿಂದಲೇ ಗೃಹಲಕ್ಷ್ಮೀ ಯೋಜನೆಯ ಹಣ ಬ್ಯಾಂಕ್ ಖಾತೆಗೆ ನೇರವಾಗಿ ವರ್ಗಾವಣೆ ಆಗಿಲ್ಲವೇ ಎಂಬುದನ್ನು ಖಾತ್ರಿ ಪಡಿಸಿಕೊಳ್ಳಿ. ರೇಷನ್ ಕಾರ್ಡ್ (Ration Card), ಬ್ಯಾಂಕ್ ಖಾತೆಯ ಲಿಂಕ್ ( Bank SB Account) ಜೊತೆಗೆ ಆಧಾರ್ ಲಿಂಕ್( aadhaar Link) ಆಗದೇ ಹೋದರೂ ಕೂಡ ನಿಮ್ಮ ಖಾತೆಗೆ ಹಣ ಜಮೆ ಆಗುವುದಿಲ್ಲ. ಈ ಸಮಸ್ಯೆ ಬಗೆ ಹರಿಸುವುದು ಒಳ್ಳೆಯದು. ಇದರ ಜೊತೆಗೆ ಮಹಿಳೆಯರು ತಮ್ಮ ಬ್ಯಾಂಕ್ ಖಾತೆ ಇರುವ ಬ್ಯಾಂಕ್‌ಗಳಿಗೆ ತೆರಳಿ ವಿಚಾರಿಸಿಕೊಳ್ಳುವುದು ಉತ್ತಮ.