Tourism: ಇನ್ಮುಂದೆ ಈ ದೇಶಕ್ಕೆ ತೆರಳಲು ವೀಸಾ ಅಗತ್ಯವಿಲ್ಲ – ಭಾರತಕ್ಕೂ ಉಂಟಾ ಈ ರಿಯಾಯಿತಿ?!

International news sri lanka approves free Visa scheme for 7 counties tourism latest updates

Tourism: ಶ್ರೀಲಂಕಾ ಕಳೆದ ವರ್ಷ ಆರ್ಥಿಕ ಬಿಕ್ಕಟ್ಟಿನ ಸಮಸ್ಯೆಯನ್ನು ಎದುರಿಸಿದ್ದು, ಸದ್ಯ, ಅದರಿಂದ ಹೊರಬರಲು ಅನೇಕ ಕ್ರಮಗಳನ್ನು ಕೈಗೊಳ್ಳುತ್ತಿದೆ. ಇದೀಗ, ಶ್ರೀಲಂಕಾ(Sri Lanka) ತನ್ನ ಆರ್ಥಿಕತೆಯ ಸಮಸ್ಯೆಯಿಂದ ಪಾರಾಗಲು ಪ್ರವಾಸೋದ್ಯಮವನ್ನು (Tourism)ಉತ್ತೇಜಿಸಲು ಮುಂದಾಗಿದೆ.

ಭಾರತ ಸೇರಿದಂತೆ ಏಳು ದೇಶಗಳ ಪ್ರವಾಸಿಗರಿಗೆ ವೀಸಾ(Visa)ಇಲ್ಲದೆ ಪ್ರವಾಸಿ ಸ್ಥಳಗಳಿಗೆ (Tourism)ಭೇಟಿ ನೀಡಲು ಶ್ರೀಲಂಕಾ ಸಂಪುಟ ಅನುಮೋದನೆ ನೀಡಿದೆ. ಇದರ ಭಾಗವಾಗಿ ನೆರೆಯ ಭಾರತ ಸೇರಿದಂತೆ ಆರು ದೇಶಗಳಿಗೆ ಸಿಹಿ ಸುದ್ದಿ ನೀಡಿದೆ. ಇತ್ತೀಚೆಗೆ ಸಂಪುಟ ಸಭೆ ಸೇರಿದ್ದ ಶ್ರೀಲಂಕಾ ಕ್ಯಾಬಿನೆಟ್ ಚೀನಾ, ರಷ್ಯಾ, ಮಲೇಷ್ಯಾ, ಜಪಾನ್, ಇಂಡೋನೇಷ್ಯಾ ಮತ್ತು ಥೈಲ್ಯಾಂಡ್ ದೇಶಗಳಿಗೆ ಉಚಿತ ಪ್ರವಾಸಿ ವೀಸಾ ನೀಡಲು ತೀರ್ಮಾನ ಕೈಗೊಂಡಿದೆ. ಇದನ್ನು ಪ್ರಾಯೋಗಿಕ ಯೋಜನೆಯಾಗಿ ಪರಿಗಣಿಸುವ ಶ್ರೀಲಂಕಾದ ವಿದೇಶಾಂಗ ವ್ಯವಹಾರಗಳ ಸಚಿವ ಅಲಿ ಸಾಬ್ರಿ ಮಾಹಿತಿ ನೀಡಿದೆ.

ಶ್ರೀಲಂಕಾ ಸರ್ಕಾರ 2023ರ ವೇಳೆಗೆ 50 ಲಕ್ಷ ಪ್ರವಾಸಿಗರನ್ನು ಸೆಳೆಯುವ ಗುರಿ ಹೊಂದಿದ್ದು, ಇದರ ಭಾಗವಾಗಿ ವೀಸಾ ಮುಕ್ತಗೊಳಿಸಲು ತೀರ್ಮಾನ ಕೈಗೊಳ್ಳಲಾಗಿದೆ. ಈ ತೀರ್ಮಾನ ತಕ್ಷಣವೇ ಜಾರಿಗೆ ಬರಲಿದೆ ಎಂದು ಹೇಳಲಾಗಿದ್ದು, ಪ್ರಾಯೋಗಿಕ ಯೋಜನೆಯು ಮುಂದಿನ ವರ್ಷ ಮಾರ್ಚ್ 31 ರವರೆಗೆ ಮಾನ್ಯವಾಗಿರುತ್ತದೆ. ಮುಂದಿನ ವರ್ಷದ ಮಾರ್ಚ್ ನಂತರ ಈ ನಿರ್ಧಾರವನ್ನು ಪರಿಶೀಲಿಸಲಾಗುತ್ತದೆ ಎಂದು ಶ್ರೀಲಂಕಾ ಸರ್ಕಾರದ ಮೂಲಗಳು ತಿಳಿಸಿವೆ.

 

ಇದನ್ನು ಓದಿ: HSRP Number Plate Updates: HSRP ನಂಬರ್ ಪ್ಲೇಟ್ ಕುರಿತು ಮಹತ್ವದ ಆದೇಶ ಹೊರಡಿಸಿದ ಹೈಕೋರ್ಟ್ !!

Leave A Reply

Your email address will not be published.