Moon: ಚಂದ್ರನನ್ನು ‘ಮಾಮಾ’ ಎನ್ನುತ್ತೀರೆ?! ಆದ್ರೆ ಆತ 446 ಕೋಟಿ ವರ್ಷಗಳ ‘ಹಿರಿಯಜ್ಜ’ ಅನ್ನೋದು ನಿಮಗೆ ಗೊತ್ತೇ ?!

Scientists revealed the secret and important facts about moon's birth

Moon: ಇರುಳಲ್ಲಿ ಬೆಳಕು ಹರಿಸುವ ಚಂದಿರ(Moon)ಎಂದರೇ ಎಲ್ಲರಿಗೂ ಅಚ್ಚುಮೆಚ್ಚು. ಹೆಚ್ಚಿನ ಮಂದಿ ಚಂದ್ರನನ್ನು ‘ ಚಂದ ಮಾಮಾ’ ಎನ್ನುತ್ತಾರೆ.ಆದ್ರೆ ಈ ಚಂದಿರ 446 ಕೋಟಿ ವರ್ಷಗಳ ‘ಹಿರಿಯಜ್ಜ’ ಅನ್ನೋದು ನಿಮಗೆ ಗೊತ್ತೇ ?!

ಹೌದು!!! 1992ರಲ್ಲಿ ಚಂದ್ರನ ಮೇಲಿಳಿದ ಅಪೊಲೊ ಯಾನಿಗಳು, ಒಂದಷ್ಟು ಹರಳುಗಳನ್ನು ಭೂಮಿಗೆ ತಂದಿದ್ದು, ಇದರ ಬಳಕೆ ಮೂಲಕ ಚಂದ್ರನ ಆಯಸ್ಸನ್ನು ಪತ್ತೆ ಹಚ್ಚುವ ಕಾರ್ಯ ನಡೆಯುತ್ತಿದೆ. ಚಂದ್ರನಿಗೆ 446 ಕೋಟಿ ವರ್ಷವಾಗಿದ್ದು, ಹಿಂದಿನ ಅಂದಾಜುಗಳಿಗಿಂತ 4.6 ಕೋಟಿ ವರ್ಷಗಳು ಹೆಚ್ಚಾಗಿದೆಯೆಂದು “ಜಿಯೋಕೆಮಿಕಲ್‌ ಪಸ್ಪೆಕ್ಟಿವ್ಸ್‌ ಲೆಟರ್ಸ್‌” ಎಂಬ ನಿಯತಕಾಲಿಕೆಯಲ್ಲಿ ಪ್ರಕಟವಾದ ಸಂಶೋಧನ ಲೇಖನದಲ್ಲಿ ಬರೆಯಲಾಗಿದೆ.

400 ಕೋಟಿಗೂ ಹೆಚ್ಚು ವರ್ಷಗಳ ಹಿಂದೆ ಸೌರವ್ಯೂಹದ ನಡುವೆ ಭೂಮಿ ಬೆಳವಣಿಗೆ ಆಗುತ್ತಿತ್ತು. ಈ ಸಂದರ್ಭ ಭೂಮಿಗೆ ಮಂಗಳನ ಗಾತ್ರದ ಬೃಹತ್‌ ಕಾಯವೊಂದು ಅಪ್ಪಳಿಸಿ, ಆಗ ಭೂಮಿಯಿಂದ ಹೊರಹಾರಿದ ದೊಡ್ಡ ತುಂಡೊಂದು ಚಂದ್ರನಾಗಿ ರೂಪಿತವಾಗಿದೆ. ಈ ವೇಳೆ ಸೃಷ್ಟಿ ಆದ ಗಟ್ಟಿ ಹರಳುಗಳನ್ನು ಚಂದ್ರಯಾನಿಗಳು ಭೂಮಿಗೆ ತಂದಿದ್ದರು. ಈ ಹರಳುಗಳ ಆಧಾರ ದಲ್ಲೇ ಚಂದ್ರನ ಆಯಸ್ಸನ್ನು ಪತ್ತೆಹಚ್ಚಲು ವಿಜ್ಞಾನಿಗಳು ಶ್ರಮಿಸಲಾಗಿತ್ತಿರುವ ಕುರಿತು ಶಿಕಾಗೊ ವಿವಿ ಪ್ರೊ| ಫಿಲಿಪ್‌ ಹೆಕ್‌ ಮಾಹಿತಿ ನೀಡಿದ್ದಾರೆ ಎನ್ನಲಾಗಿದೆ.

 

ಇದನ್ನು ಓದಿ: Moon: ಚಂದ್ರನನ್ನು ‘ಮಾಮಾ’ ಎನ್ನುತ್ತೀರೆ?! ಆದ್ರೆ ಆತ 446 ಕೋಟಿ ವರ್ಷಗಳ ‘ಹಿರಿಯಜ್ಜ’ ಅನ್ನೋದು ನಿಮಗೆ ಗೊತ್ತೇ ?!

Leave A Reply

Your email address will not be published.