Rose Plant Care: ಮನೆಯಲ್ಲಿ ಗುಲಾಬಿ ಗಿಡಗಳಿದ್ರೆ ಚಳಿಗಾಲದಲ್ಲಿ ಹೀಗೆ ಆರೈಕೆ ಮಾಡಿ – ವರ್ಷ ಪೂರ್ತಿ ಗಿಡದ ತುಂಬಾ ಹೂ ಇರುತ್ತವೆ

Rose Plant Care: ಚಳಿಗಾಲ ನಂತರ (Summer) ನಿಮ್ಮ ಹೂವಿನ ಉದ್ಯಾನವನ್ನು ಹಸಿರಾಗಿ ಮತ್ತು ಹೂಗಳಿಂದ ಕಂಗೊಳಿಸುವಂತೆ ಮಾಡಲು ಉದ್ಯಾನ ಅಥವಾ ಕೈ ತೋಟದ ಆರೈಕೆ (Rose Plant Care) ತುಂಬಾ ಮುಖ್ಯವಾಗಿರುತ್ತದೆ. ನಿಮ್ಮ ಮನೆಯಲ್ಲಿ ಒಮ್ಮೆ ಹೂವಿನ ಗಿಡಗಳನ್ನು ನೆಟ್ಟರೆ, ಸ್ವಲ್ಪ ಕಾಳಜಿ ವಹಿಸಿದರೆ, ಅವು ನಿಮ್ಮ ಉದ್ಯಾನದ ಸೌಂದರ್ಯವನ್ನು ಕಡಿಮೆ ಮಾಡುವುದಿಲ್ಲ. ಅದರಲ್ಲೂ ಚಳಿಗಾಲ ಮತ್ತು ಬೇಸಿಗೆಯಲ್ಲಿ ಗಿಡಗಳಿಗೆ ನೀರು ಹಾಕುವುದು, ಧೂಳು, ಬಿಸಿಲಿನಿಂದ ರಕ್ಷಣೆ, ಹೂಗಳು ಒಣಗದಂತೆ, ಸಸಿಗಳು ಬಾಡದಂತೆ ಜಾಗ್ರತೆ ವಹಿಸಬೇಕಾಗುತ್ತದೆ.

ನಿಮ್ಮ ಮನೆಯ ಮುಂದೆ, ಬಾಲ್ಕನಿಯಲ್ಲಿ ಬಣ್ಣ ಬಣ್ಣದ ಗುಲಾಬಿ ಹೂಗಳು ಅರಳಿ ನಿಂತರೆ ಎಷ್ಟು ಚೆಂದ. ಹಾಗಂತ ಗಿಡ ನೆಟ್ಟ ಕೂಡಲೇ ಗುಲಾಬಿ ಹೂ ಅರಳುವುದಿಲ್ಲ. ಗುಲಾಬಿ ಗಿಡ ಚೆನ್ನಾಗಿ ಹೂ ಬಿಡಲು ಸಾಕಷ್ಟು ತಯಾರಿ ಬೇಕು. ಅದಕ್ಕಾಗಿ ಗುಲಾಬಿ ಸಸ್ಯಗಳ ಆರೈಕೆಗೆ ಒಂದಿಷ್ಟು ಕೆಲಸಗಳನ್ನು ಮಾಡಬೇಕು.

ಹೌದು, ಚಳಿಗಾಲದಲ್ಲಿ ಗುಲಾಬಿ ಗಿಡಗಳ ಆರೈಕೆಗೆ ಎರಡು ಪ್ರಮುಖ ಕೆಲಸಗಳನ್ನು ಮಾಡಬೇಕು. ಒಂದು ಬುಡ ಬಿಡಿಸುವುದು, ಇನ್ನೊಂದು ತುದಿ ಕತ್ತರಿಸುವುದು. ಮಳೆಗಾಲದ ನಂತರ ತಾಪಮಾನ ಕಡಿಮೆಯಾಗುತ್ತಿದ್ದಂತೆ ಮಣ್ಣಿನಲ್ಲಿರುವ ಗುಲಾಬಿ ಗಿಡ ಪುನಃ ಶಕ್ತಿಯನ್ನು ಸಂಗ್ರಹಿಸಲು ಆರಂಭಿಸುತ್ತದೆ. ಅದಕ್ಕಾಗಿಯೇ ಮಳೆಗಾಲದ ನಂತರ ಗುಲಾಬಿ ಗಿಡದ ಬುಡದಲ್ಲಿರುವ ಮಣ್ಣನ್ನು ಬದಲಾಯಿಸುವುದು ಬಹಳ ಮುಖ್ಯ.

DAILY PRIZE DRAW
23:59:59
Daily Prize
Enter Now and Earn $50
View this ad to enter today's drawing
1,453 entries today

ಮುಖ್ಯವಾಗಿ ಕುಂಡ ಅಥವಾ ಹೂದೋಟದಲ್ಲಿರುವ ಗುಲಾಬಿ ಗಿಡದ ಬುಡದಿಂದ ಮಣ್ಣನ್ನು ಬಿಡಿಸಿ. ಸುಮಾರು ಎರಡು ಇಂಚಿನಷ್ಟು ದೂರಕ್ಕೆ ಮಣ್ಣನ್ನು ತೆಗೆಯಬೇಕು. ಈ ಪ್ರಕ್ರಿಯೆಯನ್ನು ಪ್ರಾರಂಭಿಸುವ ಮೊದಲು ಕನಿಷ್ಠ 6 ಗಂಟೆಗಳ ಕಾಲ ಗುಲಾಬಿ ಬೇರುಗಳ ಬಳಿ ನೀರು ನಿಲ್ಲಿಸಬೇಕು. ಇದರಿಂದ ಮಣ್ಣನ್ನು ತೆಗೆಯುವಾಗ ಬೇರುಗಳಿಗೆ ಹಾನಿಯಾಗುವುದನ್ನು ತಪ್ಪಿಸಬಹುದು.

ಮಣ್ಣನ್ನು ತೆಗೆದ ನಂತರ ಅರ್ಧದಷ್ಟು ಮಣ್ಣನ್ನು ತೆಗೆದುಕೊಂಡು ಸಗಣಿಯೊಂದಿಗೆ ಮಿಶ್ರಣ ಮಾಡಿ. ಇದಕ್ಕಾಗಿ ಸಗಣಿಯನ್ನು ಮೊದಲೇ ಬಿಸಿಲಿನಲ್ಲಿ ಒಣಗಿಸಿ ಪುಡಿ ಮಾಡಿಕೊಂಡಿರಬೇಕು ಅಥವಾ ಸಗಣಿ ನೀರನ್ನು ಮಿಶ್ರಣ ಮಾಡಿದರು ಆಗುತ್ತದೆ. ಈ ಮಣ್ಣಿಗೆ ಒಂದು ಟೀ ಚಮಚ ಬೇವಿನ ಹಿಂಡಿ ಅಥವಾ ಬೇವಿನಎಲೆ ಮತ್ತು ದಾಲ್ ಅನ್ನು ಸೇರಿಸಿ. 1/4 ಟೀ ಚಮಚ ಶಿಲೀಂಧ್ರನಾಶಕ ಮತ್ತು 2 ಟೀ ಚಮಚ ವರ್ಮಿ ಕಾಂಪೋಸ್ಟ್ ಮಿಶ್ರಣ ಮಾಡಿ. ಈ ಎಲ್ಲವನ್ನೂ ಚೆನ್ನಾಗಿ ಕಲಸಿ ಉಪಯೋಗಿಸಬೇಕು. ಇದನ್ನು ಈ ಮಣ್ಣಿನಿಂದ ಗುಲಾಬಿ ಗಿಡದ ಸುತ್ತಲೂ ಮಣ್ಣು ಮುಚ್ಚಬೇಕು.

ಮಣ್ಣನ್ನು ಬದಲಾಯಿಸಿದ ಕನಿಷ್ಠ 1 ವಾರದ ನಂತರ ತುದಿ ಕತ್ತರಿಸಿ. ತುದಿ ಕತ್ತರಿಸಲು ಬಹಳ ತೀಕ್ಷ್ಣವಾದ ಚಾಕು ಅಥವಾ ಕಟ್ಟರ್ ಉಪಕರಣದಿಂದ ಮಾಡಬೇಕು. ಅದರ ನಂತರ, ಗಿಡದ ಬುಡದಿಂದ 8 ಇಂಚುಗಳಿಗಿಂತ ಹೆಚ್ಚಿರುವ ಎಲ್ಲಾ ಕೊಂಬೆಗಳನ್ನು ಕತ್ತರಿಸಿ. ಆದರೆ ತುಂಬಾ ದಪ್ಪವಾದ ಕೊಂಬೆಗಳನ್ನು ಕತ್ತರಿಸದಿರುವುದು ಉತ್ತಮ. ತುದಿ ಕತ್ತರಿಸುವಿಕೆ ಮಾಡಿದ ತಕ್ಷಣ ಶಿಲೀಂಧ್ರನಾಶಕ ಪುಡಿಯನ್ನು ಸಿಂಪಡಿಸಬೇಕು. ಒಂದು ಗಿಡದಿಂದ ಇನ್ನೊಂದು ಗಿಡಕ್ಕೆ ಚಾಕು ಅಥವಾ ಕಟ್ಟರ್‌ ಬಳಸುವ ಮೊದಲು, ಅದನ್ನು ಕ್ರಿಮಿನಾಶಕಗೊಳಿಸಬೇಕು ಮತ್ತು ಮತ್ತೆ ಸೋಂಕುರಹಿತಗೊಳಸಲು ಮರೆಯಬಾರದು.

ನೆನಪಿರಲಿ,ಗುಲಾಬಿ ಸಸ್ಯದ ಆರೋಗ್ಯವನ್ನು ಕಾಪಾಡಿಕೊಳ್ಳಲು, 100 ಮಿಲಿ ಬೇವಿನೆಣ್ಣೆಯನ್ನು 5 ಲೀಟರ್ ನೀರಿನಲ್ಲಿ ಬೆರೆಸಿ ಪ್ರತಿ ವಾರ ಸೇರಿಸಬೇಕು. ಈ ರೀತಿ ಗಿಡಗಳಿಗೆ ಚಿಕಿತ್ಸೆ ನೀಡಿದರೆ ಅತೀ ಬೇಗನೆ ಗಿಡಗಳು ಹೂ ಬಿಡಲು ಆರಂಭಿಸುತ್ತವೆ.

 

ಇದನ್ನು ಓದಿ: 7ನೇ ವೇತನ ಆಯೋಗದ ಕುರಿತು ಇಲ್ಲಿದೆ ಬಿಗ್ ಅಪ್ಡೇಟ್ – ಸರ್ಕಾರ ಒಪ್ಪುತ್ತಾ ಈ ಸಲಹೆಗಳನ್ನು ?!

Leave A Reply

Your email address will not be published.