Cinnamon Water: ಮಹಿಳೆಯರಿಗೆ ಮುಟ್ಟಿನ ನೋವನ್ನು ಕಡಿಮೆ ಮಾಡುವುದರಿಂದ ಹಿಡಿದು ಇನ್ನೂ ಹತ್ತಾರು ರೀತಿಯ ಪ್ರಯೋಜನ ಇದರ ನೀರು !!
Lifestyle health news benefits of cinnamon water to control periods pain
Cinnamon Water: ದಾಲ್ಚಿನ್ನಿ (Cinnamon Water) ಅತ್ಯಂತ ರುಚಿಕರವಾದ ಮಸಾಲೆ ಪದಾರ್ಥವಾಗಿದೆ. ಸಾವಿರಾರು ವರ್ಷಗಳಿಂದ ಅದರ ಔಷಧೀಯ ಗುಣಗಳಿಂದ ಹೆಸರುವಾಸಿಯಾಗಿದೆ. ಸಿನಮೋಮಮ್ ಎಂದು ವೈಜ್ಞಾನಿಕವಾಗಿ ಕರೆಯಲ್ಪಡುವ ಮರಗಳ ಒಳ ತೊಗಟೆಯಿಂದ ದಾಲ್ಚಿನ್ನಿಯನ್ನು ಶೇಖರಿಸಲಾಗುತ್ತದೆ. ದಾಲ್ಚಿನ್ನಿಯಿಂದ ಅನೇಕ ಆರೋಗ್ಯಕರವಾದ ಪ್ರಯೋಜನಗಳನ್ನು ಕಾಣಬಹುದು. ಇದು ಮುಖ್ಯವಾಗಿ ಆಂಟಿವೈರಲ್, ಬ್ಯಾಕ್ಟೀರಿಯಾ ವಿರೋಧಿ ಮತ್ತು ಶಿಲೀಂಧ್ರ ವಿರೋಧಿ ಗುಣಗಳನ್ನು ಹೊಂದಿದೆ.
ದಾಲ್ಜಿನ್ನಿ ಸಾಂಪ್ರದಾಯಿಕ ಔಷಧಿಯಾಗಿ ಶತಮಾನಗಳಿಂದ ಬಳಸುತ್ತಿದ್ದಾರೆ. ಸಾಂಪ್ರದಾಯಿಕ ಚೀನಿ ಔಷಧದಲ್ಲಿ, ದಾಲ್ಚಿನ್ನಿಯನ್ನು ಶೀತ, ವಾಯು, ವಾಕರಿಕೆ, ಅತಿಸಾರ ಮತ್ತು ಮುಟ್ಟಿನ ನೋವುಗಳಿಂದ ಮುಕ್ತಿ ಪಡೆಯುವ ಸಲುವಾಗಿ ಬಳಸುತ್ತಿದ್ದರು. ಇದು ದೇಹದಲ್ಲಿ ಶಕ್ತಿ, ಚೈತನ್ಯ ಮತ್ತು ರಕ್ತ ಪರಿಚಲನೆಯನ್ನು ಸುಧಾರಿಸುತ್ತದೆ ಎಂದು ನಂಬಲಾಗಿದೆ.
ದಾಲ್ಚಿನ್ನಿ ಹಾರ್ಮೋನ್‌ಗಳನ್ನು ಸಮತೋಲನಗೊಳಿಸುತ್ತದೆ. ಇದು ಗರ್ಭಾಶಯಕ್ಕೆ ರಕ್ತದ ಹರಿವನ್ನು ಹೆಚ್ಚಿಸುವ ಮೂಲಕ ಋತುಚಕ್ರವನ್ನು ನಿಯಂತ್ರಿಸುತ್ತದೆ. ದಾಲ್ಚಿನ್ನಿ ನೀರು ಕುಡಿಯುವುದರಿಂದ ಅಸಹಜ ಮುಟ್ಟು, ಸಮಯಕ್ಕೆ ಸರಿಯಾಗಿ ಮುಟ್ಟಾಗದೇ ಇರುವುದು, ಮುಟ್ಟಿನ ಸಮಯದಲ್ಲಿ ನೋವು ಕಾಡುವುದು ಇಂತಹ ಹಲವು ಸಮಸ್ಯೆಗಳಿಗೆ ಪರಿಹಾರ ದೊರೆಯುತ್ತದೆ.
ದಾಲ್ಚಿನ್ನಿ (Cinnamon), ಅದರ ರುಚಿಕರವಾದ ಸುವಾಸನೆಗಾಗಿ ಬಳಸಲಾಗುವ ಸುವಾಸನೆ ಬರಿತ ಮಸಾಲೆ, ಅತಿಯಾದ ಶಾಖದಿಂದ (Heat) ಉಂಟಾಗುವ ಹೊಟ್ಟೆ ನೋವನ್ನು (Stomach ache) ಶಮನಗೊಳಿಸಲು ದಾಲ್ಚಿನ್ನಿ ಸಹಾಯ ಮಾಡುತ್ತದೆ. ಮಸಾಲೆಯುಕ್ತ ಆಹಾರಗಳು, ತಡರಾತ್ರಿಯ ಊಟ ಮತ್ತು ಜಠರ ಹುಣ್ಣುಗಳಂತಹ ವಿವಿಧ ಅಂಶಗಳು ಹೊಟ್ಟೆಯ ಶಾಖಕ್ಕೆ ಕಾರಣವಾಗುತ್ತವೆ. ಅನಿಯಂತ್ರಿತವಾಗಿ ಬಿಟ್ಟಾಗ, ಇದು ಅಸ್ವಸ್ಥತೆ ಮತ್ತು ಜೀರ್ಣಕಾರಿ ತೊಡಕುಗಳಿಗೆ ಕಾರಣವಾಗಬಹುದು.
ಇದನ್ನೂ ಓದಿ: Health Tips: ಬೆಳ್ಳಂಬೆಳಗ್ಗೆಯೇ ಖಾಲಿ ಹೊಟ್ಟೆಗೆ ಟೀ, ಕಾಫಿ ಕುಡಿಯುತ್ತೀರಾ ?! ಈ ಬಗ್ಗೆ ಸೈನ್ಸ್ ಹೇಳುತ್ತೆ ಗೊತ್ತಾ ?!