BJP ticket deal case: ಬಿಜೆಪಿ ಟಿಕೆಟ್ ಡೀಲ್ ಪ್ರಕರಣಕ್ಕೆ ರೋಚಕ ಟ್ವಿಸ್ಟ್- ವಂಚನೆಯಲ್ಲಿ ಬಸವರಾಜ ಬೊಮ್ಮಾಯಿ, ಶ್ರೀ ರಾಮುಲು ಹೆಸರು ಮುನ್ನಲೆಗೆ
Karnataka politics news BJP ticket deal case accused said former cm bommai and sriramulu name
BJP ticket deal case: ಬಿಜೆಪಿಯ ಟಿಕೆಟ್ ಕೊಡಿಸುವುದಾಗಿ ಉದ್ಯಮಿ ಗೋವಿಂದ ಬಾಬು ಪೂಜಾರಿಯವರಿಗೆ ಕೋಟ್ಯಾಂತರ ರೂಪಾಯಿ ವಂಚಿಸಿದ ಚೈತ್ರ ಕುಂದಾಪುರ ಮತ್ತು ಹಾಲಶ್ರೀ ಶ್ರೀಗಳ ಪ್ರಕರಣ ಇಡೀ ರಾಜ್ಯದ್ಯಂತ ಬಾರಿ ಸದ್ದು ಮಾಡಿತ್ತು. ಈ ಬೆನ್ನಲ್ಲೇ ಇದೀಗ ವಿಜಯನಗರ ಜಿಲ್ಲೆಯ ಹಗರಿಬೊಮ್ಮನಹಳ್ಳಿ ಕ್ಷೇತ್ರದ ಬಿಜೆಪಿ ಟಿಕೆಟ್ ವಿಚಾರದಲ್ಲಿ ಕೂಡ ಕೋಟಿಗಟ್ಟಲೆ ವಂಚನೆ(BJP ticket deal case) ನಡೆದಿದ್ದು ಕೆಲವು ದಿನಗಳಿಂದ ಈ ವಿಚಾರವೂ ಸುದ್ದಿಯಲ್ಲಿದೆ. ಆದರೀಗ ಈ ಪ್ರಕರಣಕ್ಕೆ ರೋಚಕ ಟ್ವಿಸ್ಟ್ ಸಿಕ್ಕಿದ್ದು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಹಾಗೂ ಶ್ರೀ ರಾಮುಲು ಹೆಸರು ಕೇಳಿಬಂದಿದೆ.
ಹೌದು, ಬಿಜೆಪಿ ಟಿಕೆಟ್ ಡೀಲ್ ವಂಚನೆಯ ಜಾಲ ಬಹಳಷ್ಟು ದೊಡ್ಡದಿದೆ ಎನಿಸುತ್ತಿದೆ. ಯಾಕೆಂದರೆ ಇತ್ತೀಚಿನ ದಿನಗಳಲ್ಲಿ ಇಂತಹ ಪ್ರಕರಣಗಳು ಹೆಚ್ಚುತ್ತಿದ್ದು ಅದರಲ್ಲಿ ಬಿಜೆಪಿ ಹೆಸರೇ ಕೇಳಿಬರುತ್ತಿದೆ. ಅಂತೆಯೇ ಇದೀಗ ವಿಜಯಜನರ ಜಿಲ್ಲೆಯ ಹಗರಿಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಟಿಕೆಟ್ ಕೊಡಿಸೋದಾಗಿ ಹಣ ವಂಚಿಸಿದ ಪ್ರಕರಣ ಕೆಲ ದಿನಗಳಿಂದ ಸುದ್ದಿಯಲ್ಲಿದೆ. ಇದೀಗ ಈ ಪ್ರಕರಣಕ್ಕೆ ಹೊಸದೊಂದು ಟ್ವಿಸ್ಟ್ ಸಿಕ್ಕಿದ್ದು ಬಿಜೆಪಿಯಲ್ಲಿ ತಾನು ಪ್ರಬಲನಾಗಿದ್ದು, ಮಾಜಿ ಮುಖ್ಯಮಂತ್ರಿಗೂ ನಾನೇ ಟಿಕೆಟ್ ಕೊಡಿಸಿದ್ದು ಎಂದು ಆರೋಪಿ ರೇವಣಸಿದ್ದಪ್ಪ ಹೇಳಿಕೊಂಡಿದ್ದಾನೆ. ಟಿಕೆಟ್ ವಂಚನೆ ಕೇಸಲ್ಲಿ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಮಾಜಿ ಸಚಿವ ಬಿ. ಶ್ರೀರಾಮುಲು ಅವರ ಹೆಸರನ್ನೂ ಬಾಯಿಬಿಟ್ಟಿದ್ದಾನೆ.
ಅಂದಹಾಗೆ ಸದ್ಯ ಟಿಕೆಟ್ ಕೊಡಿಸಿರುವುದಾಗಿ ವಂಚಿರೋ ಆರೋಪಿ ರೇವಣಸಿದ್ದಪ್ಪ ತಾನು ಈ ಹಿಂದೆ ಹಲವು ಗಣ್ಯರಿಗೆ ಬಿಜೆಪಿ ಟಿಕೆಟ್ ಕೊಡಿದಿದ್ದೇನೆ ಎಂದು ಹೇಳಿದ್ದು ರಾಜ್ಯದಲ್ಲಿ 2013 ಹಾಗೂ 2018ರ ವಿಧಾನಸಭಾ ಚುನಾವಣೆಯ ವೇಳೆ ಮಾಜಿ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಹಾಗೂ ಮಾಜಿ ಸಚಿವ ಬಿ. ಶ್ರೀರಾಮುಲುಗೆ ತಾನೇ ಟಿಕೆಟ್ ಕೊಡಿಸಿದ್ದಾಗಿ ಹೇಳಿಕೊಂಡಿದ್ದಾನೆ. ಇದನ್ನು ನಂಬಿದ ನಿವೃತ್ತ ಇಂಜಿನಿಯರ್ ಶಿವಮೂರ್ತಿ ಕೋಟ್ಯಂತರ ಹಣ ಕೊಟ್ಟು ಟಿಕೆಟ್ ಸಿಗದೇ ವಂಚನೆಗೊಳಗಾಗಿದ್ದಾರೆ.
ಇನ್ನು ಈ ಬಗ್ಗೆ ವಂಚನೆಗೆ ಒಳಗಾಗಿರುವ ಶಿವಮೂರ್ತಿ ಪ್ರತಿಕ್ರಿಯಿಸಿ ಗಣ್ಯರಿಗೆ ಟಿಕೆಟ್ ಕೊಡಿಸಿರುವುದಾಗಿ ಹೇಳಿದ್ದರಿಂದ ನನಗೂ ಟಿಕೆಟ್ ಸಿಗುತ್ತದೆ, ಇವರು ಇದೇ ಕೆಲಸ ಮಾಡುತ್ತಾರೆ, ಮುಂದೆ ನನಗೆ ಕೂಡ ಟಿಕೆಟ್ ಸಿಕ್ಕೇ ಸಿಗುತ್ತದೆ ಎಂದು ನಂಬಿ ಹಣವನ್ನು ಕೊಟ್ಟೆ. ಆದರೆ ನಂತರದಲ್ಲಿ ಟಿಕೆಟ್ ನನಗೆ ಕೈ ತಪ್ಪಿದಾಗ ಹಣವನ್ನು ಮರಳಿ ಕೇಳಿದೆ. ಈ ಸಂದರ್ಭದಲ್ಲಿ ಅವರು ನನಗೆ ಜೀವ ಬೆದರಿಕೆ ಹಾಕಿದ್ದರು. ಆದರೆ ನಾನು ಕೂಡ ಒತ್ತಡವನ್ನು ಹಾಕಿದಾಗ ಅವರು ಬೇರೆ ಬೇರೆ ಚೆಕ್ಕುಗಳನ್ನು ಕೊಟ್ಟರು. ಆದರೆ ಅವರು ಕೊಟ್ಟ ಎಲ್ಲ ಚೆಕ್ ಗಳು ಬೌನ್ಸ್ ಆಗಿದೆ ಎಂದು ಮಾಡಲು ನೋಡಿಕೊಂಡಿದ್ದಾರೆ.
ಇದನ್ನೂ ಓದಿ: Bengalore: ಬೆಂಗಳೂರಿನ ಜನತೆಗೆ ಬಿಗ್ ಶಾಕ್- 4 ತಿಂಗಳು ಬಂದ್ ಆಗಲಿದೆ ನಗರದ ಈ ಪ್ರಮುಖ ರಸ್ತೆ