Big Boss Varthur Santhosh: ವರ್ತೂರು ಸಂತೋಷ್ ಬಂಧನ ಪ್ರಕರಣ; FSL ವರದಿಯಲ್ಲಿದೆ ಕುತೂಹಲಕಾರಿ ಸಂಗತಿ, ಮುಂದೇನು?
Bigg Boss Kannada Varthur Santhosh: ಬಿಗ್‌ಬಾಸ್ ಸ್ಪರ್ಧಿ ವರ್ತೂರ್ ಸಂತೋಷ್ (Varthur Santhosh) ಬಂಧನ ಪ್ರಕರಣ ಭಾರೀ ಕುತೂಹಲದ ಘಟ್ಟ ಏರುತ್ತಿದೆ. ಈ ಪ್ರಕರಣಕ್ಕೆ ಸಂಬಂಧ ಪಟ್ಟಂತೆ ವನ್ಯಜೀವಿ ಕಾಯ್ದೆ 1972 (Wildlife Protection Act 1972) ಅಡಿಯಲ್ಲಿ ತನಿಖೆ ಚುರುಕು ಗೊಂಡಿದೆ. ಸಂತೋಷ್ ಅವರು ಧರಿಸಿದ್ದು ಹುಲಿಯ ಉಗುರು ಎಂದು ಎಫ್‌ಎಸ್‌ಎಲ್ ವರದಿ ಬಂದರೆ ವರ್ತೂರು ಸಂತೋಷ್‌ಗೆ ಸಂಕಷ್ಟ ಕಟ್ಟಿಟ್ಟ ಬುತ್ತಿ. ಇನ್ನೊಂದು ಆಯಾಮದಲ್ಲಿ ತನಿಖೆ ನಡೆಯಲಿದೆ.
ಎಷ್ಟು ವರ್ಷದ ಹುಲಿ ಉಗುರು, ಯಾವ ಜಾತಿಯ ಹುಲಿ? ಸೇರಿ ಹಲವು ಮಾಹಿತಿ ಲಭ್ಯವಾಗುತ್ತದೆ. ಈ ಎಲ್ಲಾ ಮಾಹಿತಿಗಳನ್ನು ಅರಣ್ಯಾಧಿಕಾರಿಗಳು ತನಿಖೆ ನಡೆಸಲಿದ್ದಾರೆ. ಕಗ್ಗಲಿಪುರ ಅರಣ್ಯಾಧಿಕಾರಿಗಳು ಕೇಂದ್ರ ಮತ್ತು ರಾಜ್ಯ ಹುಲಿ ಸಂರಕ್ಷಣಾ ಪ್ರಾಧಿಕಾರಗಳಿಗೆ ಎಫ್‌ಎಸ್‌ಎಲ್ ವರದಿ ಮತ್ತು ತಾವು ನಡೆಸಿದ ತನಿಖೆಯ ವರದಿಯನ್ನು ಕೊಡಲಿದ್ದಾರೆ. ಈ ವರದಿ ಆಧರಿಸಿ ಹುಲಿ ಸಂರಕ್ಷಿತ ಅರಣ್ಯ ಪ್ರದೇಶಗಳ ದತ್ತಾಂಶ ಪರಿಶೀಲನೆ ನಡೆಯಲಿದೆ.
ಐದು ವರ್ಷಗಳಲ್ಲಿ ಹುಲಿಗಳನ್ನು ಬೇಟೆಯಾಡಿರುವುದು, ಮೃತ ದೇಹದ ಪತ್ತೆ ಮಾಹಿತಿ ಸಂಗ್ರಹಿಸಲಾಗುತ್ತದೆ. ಅಂದ ಹಾಗೆ ತಮಿಳುನಾಡಿನ ಅಣ್ಣಾಮಲೈ, ಸತ್ಯಮಂಗಲ, ಕರ್ನಾಟಕದ ಕಾಳಿ ದಾಂಡೇಲಿ, ನಾಗರಹೊಳಗೆ ಭದ್ರಾ ಅರಣ್ಯ ಪ್ರದೇಶಗಳಲ್ಲಿ ದಾಖಲೆಗಳನ್ನು ಪರಿಶೀಲನೆ ನಡೆಸಲಾಗಿದೆ.