Karkala: ಕಾರ್ಕಳ ಪರಶುರಾಮನ ಕಂಚಿನ ಪ್ರತಿಮೆ ವಿವಾದಕ್ಕೆ ರೋಚಕ ಟ್ವೀಸ್ಟ್ – ಅಘಾತಕಾರಿ ವಿಡಿಯೋ ವೈರಲ್

Dakshina Kannada news Karkala Parashurama Statue Controversy Case big twist video viral

Karkala Parashurama Statue Controversy: ಕರಾವಳಿಯ ಕಾರ್ಕಳದ(Karkala) ಪರಶುರಾಮ ಥೀಮ್ ಪಾರ್ಕಿನಲ್ಲಿರುವಂತಹ ಪರಶುರಾಮನ ಮೂರ್ತಿಯು ನಕಲಿಯೋ, ಅಸಲಿಯೋ ಎಂಬ ವಿಚಾರ( Karkala Parashurama Statue Controversy)ಹಲವು ದಿನಗಳಿಂದ ಬಾರಿ ಸದ್ದು ಮಾಡುತ್ತಿದೆ. ಅದರಲ್ಲಿಯೂ ಕೂಡ ಸ್ಥಳದಿಂದ ಮೂರ್ತಿ ತೆರವಾಗಿದೆ, ರಾತ್ರೋ ರಾತ್ರಿ ಇದನ್ನು ಬದಲಾಯಿಸಲಾಗಿದೆ ಎಂಬ ವಿಚಾರ ಬಹಳಷ್ಟು ಚರ್ಚೆಗೆ ಗ್ರಾಸವಾಗಿದ್ದು ಇದೀಗ ಅಘಾತಕಾರಿ ಎಂಬಂತೆ ಇದರ ಒಂದು ವಿಡಿಯೋ ತುಣುಕು ಸಾಮಾಜಿಕ ಜಾಲತಾಣಗಳಲ್ಲಿ ಬಹಳ ವೈರಲ್ ಆಗಿದೆ.

ಹೌದು, ಉಡುಪಿ ಜಿಲ್ಲೆ ಕಾರ್ಕಳ ತಾಲೂಕಿನ ಬೈಲೂರು ಸಮೀಪದ ಉಮಿಕಲ್ಲು ಬೆಟ್ಟದ ಮೇಲೆ ಬಸವರಾಜ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರ 8 ತಿಂಗಳ ಹಿಂದೆ, ಚುನಾವಣೆಯ ಹೊಸ್ತಿಲಲ್ಲಿ ಉದ್ಘಾಟನೆ ಮಾಡಿದ್ದ ಪರಶುರಾಮ ಥೀಮ್ ಪಾರ್ಕ್ ನ 33 ಅಡಿ ಎತ್ತರದ ಪರಶುರಾಮನ ಕಂಚಿನ ಮೂರ್ತಿ ಕಂಚಿನದ್ದಲ್ಲ, ಗ್ಲಾಸ್ ಫೈಬರ್ ಹಾಗೂ ಪಿಒಪಿಯಿಂದ ನಿರ್ಮಾಣ ಮಾಡಲಾಗಿತ್ತು ಎಂಬ ಆರೋಪ ಬಂದಿತ್ತು. ಈ ವಿಚಾರ ತೀವ್ರ ಚರ್ಚೆಗೆ ಒಳಗಾಗಿ ಭಾರೀ ವಿವಾದಕ್ಕೆ ಕಾರಣವಾಗಿತ್ತು. ಈ ವಿಚಾರಕ್ಕೆ ಇದೀಗ ಬಿಗ್ ಟ್ವಿಸ್ಟ್ ಸಿಕ್ಕಿದ್ದು ಕಂಚಿನ ಪ್ರತಿಮೆಯನ್ನು ಕ್ರೇನ್ ಮೂಲಕ ಸಲೀಸಾಗಿ ಎತ್ತುತ್ತಿರುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.

ಅಂದಹಾಗೆ ವೈರಲ್ ಆದ ಈ ವಿಡಿಯೋ ಪ್ರತಿಮೆ ಸ್ಥಾಪನೆಯ ಸಂದರ್ಭದಲ್ಲಿ ಚಿತ್ರೀಕರಣ ಮಾಡಿದ್ದೇ ಅಥವಾ ಪ್ರತಿಮೆ ತೆರವುಗೊಳಿಸುವಾಗ ಚಿತ್ರೀಕರಣ ಮಾಡಿದ್ದೆ? ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಆದ್ರೆ ಟನ್ ಗಟ್ಟಲೆ ತೂಕದ ಪ್ರತಿಮೆ ಎಷ್ಟು ಭಾರ ಇರಬೇಕು, ಇಲ್ಲಿ ಕ್ರೇನ್ ಬೆಲ್ಟ್ ನಲ್ಲಿ ಬೊಂಬೆ ಎತ್ತಿದಂತೆ ಕಾಣುತ್ತಿದೆ ಎಂದು ಜನರು ಅನುಮಾನ ವ್ಯಕ್ತಪಡಿಸಿದ್ದಾರೆ. ಪ್ರತಿಮೆ ಅಸಲಿಯೇ, ವೀಡಿಯೋ ಅಸಲಿಯೇ ತನಿಖೆಯಾಗಲಿ ಎಂದು ಆಗ್ರಹಿಸಿದ್ದಾರೆ. ವಿಡಿಯೋ ವೈರಲ್ ಆದ ಬೆನ್ನಲ್ಲೇ ಹತ್ತು ಹಲವು ಪ್ರಶ್ನೆಗಳು ಹುಟ್ಟಿಕೊಂಡಿದೆ.

 

 ಡೀಲ್ ಪ್ರಕರಣಕ್ಕೆ ರೋಚಕ ಟ್ವಿಸ್ಟ್- ವಂಚನೆಯಲ್ಲಿ ಬಸವರಾಜ ಬೊಮ್ಮಾಯಿ, ಶ್ರೀ ರಾಮುಲು ಹೆಸರು ಮುನ್ನಲೆಗೆ

Leave A Reply

Your email address will not be published.