Teeth Care: ಹಲ್ಲು ಹಳದಿಗಟ್ಟಿದೆಯೇ? ಬಿಳಿಯಾಗಿಸಿ ಫಳಫಳ ಹೊಳೆಯೋ ತಂತ್ರ ಇಲ್ಲಿದೆ!

Teeth whitening Tip Remove yellow stains from teeth with these home remedies

Teeth whitening Tip: ಬಾಯಿಯ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಿದರೂ, ಹಲ್ಲು ಹಳದಿಯಾಗುವುದು ಅಥವಾ ಹಲ್ಲುಗಳ ಮೇಲಿನ ಮೊಂಡುತನದ ಹಳದಿ ಪ್ಯಾಚ್ ಗಳನ್ನು ತೆಗೆಯುವುದು ಸಾಧ್ಯವಾಗುವುದಿಲ್ಲ ಎಂಬ ಹಲವರ ಕಲ್ಪನೆ ತಪ್ಪು.

ಬಹುತೇಕರಿಗೆ ಹಲ್ಲು ಹುಳುಕು ಮತ್ತು ಹಳದಿ ಬಣ್ಣ ಇದ್ದಾಗ ಮಾತನಾಡಲು ಬಿಡಿ ಮುಗುಳ್ನಗೆ ಬೀರಲು ಸಹ ಮುಜುಗರ ಆಗುತ್ತದೆ . ಕೆಲವರು ಬಿಳಿ ಹಳ್ಳುಗಳನ್ನು ಹೊಂದಲು ಹಲವು ಪ್ರಯತ್ನ ಸಹ ಮಾಡುವುದು ಉಂಟು. ಸದ್ಯ ನಿಮ್ಮ ಹಲ್ಲು ಶುಭ್ರವಾಗಿ ಮುತ್ತಿನಂತ ಹೊಳಪು ಪಡೆಯಲು( Teeth home remedies) ಈ ಕೆಳಗಿನ ಸಲಹೆ ಖಂಡಿತವಾಗಲು ಅನುಸರಿಸಿ. ಹೌದು, ಮುಖದಲ್ಲಿ ಮಂದಹಾಸ ಬಿರುವಾಗ ಮೆಲ್ಲಗೆ ಇಣುಕುವ ಹಲ್ಲುಗಳು ನೋಡಲು ಚೆನ್ನಾಗಿರಬೇಕು ಮತ್ತು ಆರೋಗ್ಯವಾಗಿ ಇರಬೇಕು ಅಂದರೆ ಖಂಡಿತಾ ಈ ಟಿಪ್ಸ್(Teeth whitening Tip) ಫಾಲೋ ಮಾಡಿ.

ಮುಖ್ಯವಾಗಿ ಫ್ಲೇಕ್ ಬ್ಯಾಕ್ಟೀರಿಯಾದ ಜಿಗುಟಾದ ಪದರವಾಗಿದ್ದು ಅದು ಹೆಚ್ಚಿನ ಜನರ ಹಲ್ಲು ಮತ್ತು ಒಸಡುಗಳ ಮೇಲೆ ರೂಪುಗೊಳ್ಳುತ್ತದೆ. ಈ ಕಾರಣದಿಂದಾಗಿ ನೀವು ಹಲ್ಲುಗಳ ಹಳದಿ ಬಣ್ಣ, ಹಲ್ಲಿನ ಕೊಳೆತ, ವಸಡು ಕಾಯಿಲೆ ಮತ್ತು ಬಾಯಿಯ ಆರೋಗ್ಯಕ್ಕೆ ಸಂಬಂಧಿಸಿದ ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗಬಹುದು. ಅದಕ್ಕಾಗಿ ಈ ಸಲಹೆ ನೀಡಲಾಗಿದೆ.

ಬೇಕಿಂಗ್ ಸೋಡಾ ಮತ್ತು ನಿಂಬೆ :

ಒಂದು ಟೀ ಚಮಚ ಅಡಿಗೆ ಸೋಡಾವನ್ನು ತೆಗೆದುಕೊಂಡು ಅದನ್ನು ಒಂದು ಚಮಚ ನಿಂಬೆ ರಸದೊಂದಿಗೆ ಮಿಶ್ರಣ ಮಾಡಿ. ಈಗ ಟೂತ್ ಬ್ರಶ್ ಸಹಾಯದಿಂದ ಈ ಪೇಸ್ಟ್ ಅನ್ನು ತೆಗೆದುಕೊಂಡು ನಿಮ್ಮ ಹಲ್ಲುಗಳನ್ನು ಬ್ರಷ್ ಮಾಡಿ. ಈ ಮಿಶ್ರಣವನ್ನು ನಿಮ್ಮ ಹಲ್ಲುಗಳ ಮೇಲೆ 2-3 ನಿಮಿಷಗಳ ಕಾಲ ಹಾಗೆಯೇ ಬಿಡಿ. ನಂತರ ತಣ್ಣನೆಯ ನೀರಿನಿಂದ ಹಲ್ಲುಗಳನ್ನು ತೊಳೆಯಿರಿ. ಅಡಿಗೆ ಸೋಡಾ ಆಸಿಡ್ ಸ್ವಭಾವವನ್ನು ಹೊಂದಿದ್ದು, ಬಾಯಿಯೊಳಗಿನ ಆಮ್ಲೀಯ pH ಅನ್ನು ಸಮತೋಲನಗೊಳಿಸಲು ಸಹಾಯ ಮಾಡುತ್ತದೆ. ಇನ್ನು ಹಲ್ಲುಗಳ ಹಳದಿ ಬಣ್ಣವನ್ನು ಕಡಿಮೆ ಮಾಡಲು ನಿಂಬೆ ಕೂಡಾ ಪರಿಣಾಮಕಾರಿಯಾಗಿದೆ.

ತೆಂಗಿನ ಎಣ್ಣೆ:
ನಿಮ್ಮ ಬೆರಳುಗಳ ಸಹಾಯದಿಂದ ತೆಂಗಿನ ಎಣ್ಣೆಯನ್ನು ನಿಮ್ಮ ಹಲ್ಲುಗಳ ಮೇಲೆ ಉಜ್ಜಿಕೊಳ್ಳಿ. ಇದಾದ ನಂತರ ಸಾಕಷ್ಟು ನೀರೂ ತೆಗೆದುಕೊಂಡು ಚೆನ್ನಾಗಿ ತೊಳೆಯಿರಿ. ಇದರ ನಂತರ, ಬೇಕಾದರೆ ನೀವು ಬಳಸುವ ಸಾಮಾನ್ಯ ಪೇಸ್ಟ್ ನಿಂದ ಹಲ್ಲು ಉಜ್ಜಬಹುದು. ತೆಂಗಿನ ಎಣ್ಣೆಯಲ್ಲಿರುವ ಲಾರಿಕ್ ಆಮ್ಲವು ಹಲ್ಲುಗಳನ್ನು ಬಿಳಿಯಾಗಿಸಲು ಸಹಾಯ ಮಾಡುತ್ತದೆ.

ಕಿತ್ತಳೆ ಸಿಪ್ಪೆಯು ಹಳದಿ ಬಣ್ಣವನ್ನು ನಿವಾರಿಸುತ್ತದೆ :
ಕಿತ್ತಳೆ ಸಿಪ್ಪೆಯನ್ನು ಸ್ವಲ್ಪ ಸಮಯದವರೆಗೆ ಬಿಸಿಲಿನಲ್ಲಿ ಒಣಗಿಸಿ ಪುಡಿ ಮಾಡಿಕೊಳ್ಳಿ. ಈ ಪುಡಿಯನ್ನು ನೀರಿನೊಂದಿಗೆ ಬೆರೆಸಿ ಪೇಸ್ಟ್ ತಯಾರಿಸಿ. ಈ ಪೇಸ್ಟ್ ಅನ್ನು ಬಳಸಿ ಬ್ರಷ್‌ನಿಂದ ಹಲ್ಲುಗಳ ಮೇಲೆ ಚೆನ್ನಾಗಿ ಉಜ್ಜಿಕೊಳ್ಳಿ. ನಿಯಮಿತವಾಗಿ ಈ ವಿಧಾನವನ್ನು ಅನುಸರಿಸಿದರೆ, ಕೆಲವೇ ದಿನಗಳಲ್ಲಿ ಪ್ಲೇಕ್ ಕಣ್ಮರೆಯಾಗುತ್ತದೆ.

ವಿಟಮಿನ್ ಡಿ ಮತ್ತು ಕ್ಯಾಲ್ಸಿಯಂ ಕೊರತೆ ಇರಬಾರದು:
ನಿಮ್ಮ ದೇಹದಲ್ಲಿ ಕ್ಯಾಲ್ಸಿಯಂ ಕೊರತೆ ಇರಬಾರದು ಎಂಬುದನ್ನು ನೆನಪಿಡಿ. ಆರೋಗ್ಯಕರ ಹಲ್ಲುಗಳಿಗೆ ಕ್ಯಾಲ್ಸಿಯಂ ಬಹಳ ಮುಖ್ಯ. ಇದರೊಂದಿಗೆ, ನಿಮ್ಮ ಆಹಾರದಲ್ಲಿ ವಿಟಮಿನ್ ಡಿ ಸಮೃದ್ಧವಾಗಿರುವ ಆಹಾರವನ್ನು ಸೇರಿಸಲು ಮರೆಯಬೇಡಿ.

ವಿನೆಗರ್:
ಒಂದು ಲೋಟ ನೀರಿನಲ್ಲಿ ಸ್ವಲ್ಪ ವಿನೆಗರ್ ಬೆರೆಸಿ ಬಾಯಿ ಮುಕ್ಕಳಿಸುವುದರಿಂದ ನಿಮ್ಮ ಹಲ್ಲುಗಳು ಬೆಳ್ಳಗಾಗುತ್ತದೆ ಮತ್ತು ಮುತ್ತಿನಂತೆ ಹೊಳೆಯುತ್ತದೆ.

ಬಾಳೆಹಣ್ಣಿನ ಸಿಪ್ಪೆ :
ಒಂದೆರಡು ನಿಮಿಷಗಳ ಕಾಲ ಬಾಳೆಹಣ್ಣಿನ ಸಿಪ್ಪೆಯ ಒಳಭಾಗದಿಂದ ಹಲ್ಲುಗಳನ್ನು ಉಜ್ಜಿ ಆನಂತರ 15 ನಿಮಿಷ ಕಳೆದ ಮೇಲೆ ಟೂಥ್ ಪೇಸ್ಟ್ ನಿಂದ ಹಲ್ಲು ಉಜ್ಜಿದರೆ ಸಾಕು. ಎರಡರಿಂದ ಮೂರು ಬಾರಿ ವಾರದಲ್ಲಿ ಹೀಗೆ ಮಾಡಿ.

ನಿಂಬೆ ಸಿಪ್ಪೆ :
ಹಳದಿ ಹಲ್ಲುಗಳ ಸಮಸ್ಯೆ ಇದ್ದವರು ನಿಂಬೆ ಸಿಪ್ಪೆಯನ್ನು ಹಲ್ಲುಗಳ ಮೇಲೆ ಉಜ್ಜಬೇಕು. ವಾರದಲ್ಲಿ 2 ದಿನ ಈ ಟಿಪ್ಸ್ ಫಾಲೋ ಮಾಡಿದರೆ ಸಾಕು ನಿಮ್ಮ ಹಲ್ಲುಗಳು ತುಂಬಾ ಹೊಳೆಯುತ್ತವೆ.

ಬೇವಿನ ಕಡ್ಡಿ:
ಹಲ್ಲಿನ ಹಳದಿ ಬಣ್ಣವನ್ನು ತೆಗೆದುಹಾಕುವಲ್ಲಿ ಬೇವಿನ ಕಡ್ಡಿಗಳು ಸಹಾಯ ಮಾಡುತ್ತದೆ . ಬ್ರಷ್ ಬದಲು ಈ ಕಡ್ಡಿಗಳನ್ನು ಬಳಸಿದರೆ ಹಲ್ಲುಗಳು ಬೇಗ ಸ್ವಚ್ಛವಾಗಿ ಹೊಳೆಯುತ್ತವೆ.

ಶುಂಠಿ ಮತ್ತು ಉಪ್ಪು:
ಉಗುರುಬೆಚ್ಚಗಿನ ನೀರಿನಲ್ಲಿ ಶುಂಠಿ ಮತ್ತು ಉಪ್ಪನ್ನು ಬೆರೆಸಿ ಬಾಯಿ ಮುಕ್ಕಳಿಸುವುದರಿಂದಲೂ ಹಲ್ಲಿನ ಹಳದಿ ಬಣ್ಣವನ್ನು ಹೋಗಲಾಡಿಸಲು ಸಾಧ್ಯವಾಗುತ್ತದೆ.

ಸ್ಟ್ರಾಬೆರಿ ಮತ್ತು ಉಪ್ಪು:
ಸ್ಟ್ರಾಬೆರಿ ಮತ್ತು ಉಪ್ಪನ್ನು ಒಟ್ಟಿಗೆ ಮ್ಯಾಶ್ ಮಾಡಿ ಬ್ರಶ್ ಸಹಾಯದಿಂದ ಹಲ್ಲುಗಳ ಮೇಲೆ ಹಚ್ಚಬೇಕು. ನಂತರ ಹಲ್ಲುಜ್ಜಬೇಕು.

 

ಇದನ್ನು ಓದಿ: ICC World Cup 2023: ರಾಷ್ಟ್ರಗೀತೆ ಹಾಡಲು ಆಟಗಾರರೊಂದಿಗೆ ಮಕ್ಕಳು ಬರೋದ್ಯಾಕೆ ?! ಇಲ್ಲಿದೆ ನೋಡಿ ಅಸಲಿ ಕಾರಣ

Leave A Reply

Your email address will not be published.