Darshan thoogudeepa: ವರ್ತೂರು ಸಂತೋಷ್ ಬೆನ್ನಲ್ಲೇ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಬಂಧನ ?! ಅಭಿಮಾನಿಗಳಲ್ಲಿ ಹೆಚ್ಚಿದ ಆತಂಕ !!

Sandalwood news challenging star darshan thoogudeepa demands arrest latest news

Share the Article

Darshan thoogudeepa: ಬಿಗ್ ಬಾಸ್ ಸೀಸನ್-10ರ ಸ್ಪರ್ಧಿ, ಹಳ್ಳಿಕಾರ್ ಒಡೆಯ ವರ್ತೂರು ಸಂತೋಷ್ ಅವರನ್ನು ರಾತ್ರೋರಾತ್ರಿ ಪೊಲೀಸರು ಬೆಗ್ ಬಾಸ್ ಮನೆಯಿಂದಲೇ ಬಂಧಿಸಿದ್ದು ರಾಜ್ಯಾದ್ಯಂತ ಭಾರಿ ಸುದ್ದಿಯಾಗುತ್ತಿದೆ. ಅಲ್ಲದೆ ಸಂತೋಷ್ ರವರನ್ನು ಬಂಧಿಸಿದ ಕಾರಣ ಕೂಡ ಇದೀಗ ಜಗ್ಗಜಾಹಿರವಾಗಿದೆ. ಆದರೆ ಈ ಬೆನ್ನಲ್ಲೇ ಕನ್ನಡದ ಖ್ಯಾತ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್(Darshan thoogudeepa) ಕೂಡ ಜೈಲು ಪಾಲಾಗ್ತಾರೆ, ಪೋಲೀಸರು ಬಂಧಿಸುತ್ತಾರೆ, ಇದಕ್ಕಾಗಿ ಎಲ್ಲಾ ಸಿದ್ಧತೆಗಳು ನಡೆಯುತ್ತಿವೆ ಎಂಬುದು ವರದಿಯಾಗಿದೆ.

ಹೌದು, ವರ್ತೂರು ಸಂತೋಷ್ ಅವರು ಹುಲಿ ಉಗುರು ಧರಿಸಿಕೊಂಡಿದ್ದಾರೆಂದು ಅವರನ್ನು ಬಿಗ್ ಬಾಸ್ ಮನೆಗೇ ತೆರಳಿ ಪೋಲೀಸರು ಬಂದಿಸಿದರು. ಇದೀಗ ಈ ಬೆನ್ನಲ್ಲೇ ನಟ ದರ್ಶನ್ ಕೂಡ ಹುಲಿ ಉಗುರು ಬಳಸಿ ಡಾಲರದ ಮಾಡಿಸಿಕೊಂಡಿದ್ದಾರೆ ಎಂಬ ಆರೋಪ ಕೇಳಿ ಬಂದಿದ್ದು, ದರ್ಶನ್ ವಿರುದ್ಧ ತನಿಖೆಗೆ ಆಗ್ರಹಿಸಲಾಗಿದೆ. ಅಲ್ಲದೆ ಈಗಾಗಲೇ ನಟ ದರ್ಶನ್ ವಿರುದ್ದ ಅರಣ್ಯ ಸಂರಕ್ಷಣಾಧಿಕಾರಿಗಳಿಗೆ ದೂರು ಸಲ್ಲಿಸಲು ಸಿದ್ದತೆ ನಡೆಸಲಾಗುತ್ತಿದೆ ಎಂದು ತಿಳಿದುಬಂದಿದೆ.

ಅಂದಹಾಗೆ ದರ್ಶನ್ ವಿರುದ್ಧ ಅರಣ್ಯ ಸಂರಕ್ಷಣಾ ಅಧಿಕಾರಿಗಳಿಗೆ ದೂರಿ ದಾಖಲಿಸಲು ಜೆಡಿಯು ಪಕ್ಷ ಮುಂದಾಗಿದೆ. ಮಲ್ಲೇಶ್ವರಂ ನಲ್ಲಿರುವ ಅರಣ್ಯ ಭವನದಲ್ಲಿ ದೂರು ಸಲ್ಲಿಸಲು ತಯಾರಿ ಕೂಡ ನಡೆದಿದೆ.ದರ್ಶನ್ ಕುತ್ತಿಗೆಯಲ್ಲಿ ಹುಲಿಯ ಉಗುರು ಹೋಲುವ ಡಾಲರ್ ಹಾಕಿದ್ದಾರೆ ಎಂದು ಉಲ್ಲೇಖ ಮಾಡಲಾಗಿದೆ. ಕಳೆದ ಎರಡು ತಿಂಗಳ ಹಿಂದೆ ಕೊಲ್ಲೂರು ಮೂಕಾಂಬಿಕಾ ದರ್ಶನದ ವೇಳೆ ಹುಲಿ ಉಗುರು ಹೋಲುವ ಡಾಲರ್ ಅನ್ನು ದರ್ಶನ್ ಹಾಕಿದ್ದರು. ವರ್ತೂರು ಸಂತೋಷ್ ಕೇಸ್ ಮುನ್ನಲೆಗೆ ಬರುತ್ತಿದ್ದಂತೆ ಇದೀಗ ದರ್ಶನ್ ವಿಚಾರ ಕೂಡ ಮುನ್ನಲೆಗೆ ಬಂದಿದೆ. ಹೀಗಾಗಿ ಅಭಿಮಾನಿಗಳಲ್ಲಿ ಆತಂಕ ಹೆಚ್ಚಿದೆ.

ಇದನ್ನೂ ಓದಿ: Dasara holiday: ಶಾಲೆಗಳ ದಸರಾ ರಜೆ ಮುಂದೂಡಿಕೆ ?! ಕೊನೇ ಕ್ಷಣದಲ್ಲಿ ಹೊಸ ಟ್ವಿಸ್ಟ್ !!

Leave A Reply

Your email address will not be published.