Home Entertainment Bigg Boss Kannada: ʼಹುಲಿ ಉಗುರುʼ ಪೆಂಡೆಂಟ್‌ ಕೇಸ್‌; ಅರಣ್ಯ ಇಲಾಖೆಯಿಂದ ವರ್ತೂರ್‌ ಸಂತೋಷ್‌ ಆಪ್ತ,...

Bigg Boss Kannada: ʼಹುಲಿ ಉಗುರುʼ ಪೆಂಡೆಂಟ್‌ ಕೇಸ್‌; ಅರಣ್ಯ ಇಲಾಖೆಯಿಂದ ವರ್ತೂರ್‌ ಸಂತೋಷ್‌ ಆಪ್ತ, ಚಿನ್ನದ ವ್ಯಾಪಾರಿಗೆ ನೋಟಿಸ್‌!!!

Varthur santhosh

Hindu neighbor gifts plot of land

Hindu neighbour gifts land to Muslim journalist

Bigg Boss Kannada Season 10 contestant Varthur santhosh: ಹುಲಿ ಉಗುರನ್ನು ಅಕ್ರಮವಾಗಿ ಧರಿಸಿದ ಕಾರಣಕ್ಕಾಗಿ ಅರಣ್ಯ ಇಲಾಖೆಯವರು ಭಾನುವಾರ ಸಂಜೆ ಬಿಗ್‌ಬಾಸ್‌ ಸೆಟ್‌ನಿಂದ ವರ್ತೂರು ಸಂತೋಷ್‌ (Varthuru Santhosh) ಅವರನ್ನು ಬಂಧಿಸಿ, ವೈದ್ಯಕೀಯ ಪರೀಕ್ಷೆ ಮಾಡಿ, ಹಲವು ಗಂಟೆಗಳ ಕಾಲ ವಿಚಾರಣೆ ನಡೆಸಿ, ನಂತರ ಕೋರಮಂಗಲದ ನ್ಯಾಯಾಧೀಶರ ಮುಂದೆ ಹಾಜರುಪಡಿಸಿ, ಹದಿನಾಲ್ಕು ದಿನಗಳ ಕಾಲ ಬಂಧನಕ್ಕೆ ಕಳುಹಿಸಲಾಗಿದೆ.

ಇದೀಗ ಮತ್ತೊಂದು ವಿಷಯ ಹೊರ ಬಂದಿದ್ದು, ಹುಲಿ ಉಗುರನ್ನು ಎಲ್ಲಿಂದ ಖರೀದಿ ಮಾಡಲಾಗಿದೆ, ಸಂಗ್ರಹಿಸಲಾಗಿದೆ ಎಂದು ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ. ವಿಚಾರಣೆ ನಡೆಸಿದ ನಡೆಸಿದ ಅರಣ್ಯಾಧಿಕಾರಿಗಳು, ಸಂತೋಷ್‌ ಅವರ ಆಪ್ತ ರಂಜಿತ್‌ ಹಾಗೂ ಚಿನ್ನದ ಸರ ತಯಾರಿಸಿದ ಆಭರಣ ವ್ಯಾಪಾರಿಗೆ ನೋಟಿಸ್‌ ನೀಡಿದ್ದಾರೆ.

ಅರಣ್ಯ ಇಲಾಖೆ ಅಧಿಕಾರಿಗಳು ಉಗುರುಗಳನ್ನು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಿದ್ದು, ಅವರು ಹುಲಿಗೆ ಸೇರಿದ್ದಾ, ಅಥವಾ ಬೇರೆ ಪ್ರಾಣಿಯದ್ದಾ ಎಂದು ಕಂಡುಹಿಡಿಯಲು ಪ್ರಯತ್ನ ಪಡುತ್ತಿದ್ದಾರೆ.