Subsidy: ರೈತರೆಲ್ಲರೂ ಸಂತೋಷ ಪಡೋ ವಿಚಾರ – ಹೊಸ ಸಬ್ಸಿಡಿ ಘೋಷಣೆ ಮಾಡಿದ ಸರ್ಕಾರ
Subsidy: ಕೇಂದ್ರ ಸರ್ಕಾರ ರೈತರ (farmer) ಬೆಳೆ ನಾಶವನ್ನು ಗಮನಿಸಿ ರೈತರಿಗೆ ಅನುಕೂಲವಾಗುವಂತಹ ರೈತ ಸಿಂಚಾಯಿ ಯೋಜನೆಯನ್ನು ಜಾರಿಗೆ ತಂದಿದೆ. ತೋಟಗಾರಿಕಾ ಬೆಳೆಗಳಿಗೆ ಹನಿ ನೀರಾವರಿ ಒದಗಿಸಲು ಬೇಕಾಗಿರುವ ಉಪಕರಣವನ್ನು ನೀಡುವಂತಹ ಯೋಜನೆ ಇದಾಗಿದೆ. ಇದು ಅಡಿಕೆ ಕೃಷಿ ಹೊರತುಪಡಿಸಿ ಇತರ ತೋಟಗಾರಿಕಾ ಬೆಳೆಗಳಿಗೆ ಅನುಕೂಲವಾಗುವಂತಹ ಯೋಜನೆಯಾಗಿದೆ. ಇದಕ್ಕೆ 90% ವರೆಗೆ ಸಬ್ಸಿಡಿ (Subsidy) ಪಡೆದುಕೊಳ್ಳಬಹುದು.
ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ ಯೋಜನೆಯನ್ನು 2018 16ರ ಸಾಲಿನಲ್ಲಿ ಜಾರಿಗೆ ತರಲಾಗಿದ್ದು, ಆ ಸಮಯದಲ್ಲಿ ಯೋಜನೆಗೆ 533 ಕೋಟಿ ರೂಪಾಯಿಗಳನ್ನು ಮೀಸಲಿಡಲಾಗಿತ್ತು. ಈಗ “ಹರ್ ಖೇತ್ ಕೊ ಪಾನಿ” ಎನ್ನುವ ಟ್ಯಾಗ್ ಲೈನ್ ಅಡಿಯಲ್ಲಿ ಕೃಷಿ ಸಿಂಚಾಯಿ ಯೋಜನೆಯನ್ನು ಇನ್ನಷ್ಟು ದೊಡ್ಡ ಮಟ್ಟದಲ್ಲಿ ರೈತರಿಗೆ ಸಿಗುವಂತೆ ಕೇಂದ್ರ ಸರ್ಕಾರ ಮಾಡಿದೆ.
ಸದ್ಯ 2023- 24ನೇ ಸಾಲಿನ ಕೃಷಿ ಸಿಂಚಾಯಿ ಯೋಜನೆಗೆ ಅರ್ಜಿಯನ್ನು ಸರ್ಕಾರ ಆಹ್ವಾನಿಸಿದೆ. ಯೋಜನೆ ಅಡಿಯಲ್ಲಿ ಕನಿಷ್ಠ ಎರಡು ಹೆಕ್ಟೇರ್ ಜಮೀನಿಗೆ ಹನಿ ನೀರಾವರಿ ಒದಗಿಸಲು ಸಾಮಾನ್ಯ ಕೃಷಿಕರಿಗೆ 75% ನಷ್ಟು ಸರ್ಕಾರ ಸಬ್ಸಿಡಿ ನೀಡುತ್ತದೆ. ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ರೈತರಿಗೆ (SC/ST) ಎರಡು ಹೆಕ್ಟೇರ್ ಜಮೀನಿಗೆ 90% ವರೆಗೆ ಸಬ್ಸಿಡಿ ಪಡೆಯಬಹುದು. ದೇಶದ ಎಲ್ಲಾ ವರ್ಗದ ರೈತರಿಗೆ ಕನಿಷ್ಠ ಎರಡು ಹೆಕ್ಟೇರ್ ನಿಂದ ಗರಿಷ್ಠ ಐದು ಹೆಕ್ಟೇರ್ ವರೆಗೆ 40% ಸಬ್ಸಿಡಿ ನೀಡಲಾಗುವುದು.
ಪರಿಶಿಷ್ಟ ಜಾತಿ ಹಾಗೂ ಪಂಗಡದವರು ಯೋಜನೆಯ ಪ್ರಯೋಜನ ಪಡೆಯುವುದಾದರೆ ಜಾತಿ ಪ್ರಮಾಣ ಪತ್ರವನ್ನು ಸಲ್ಲಿಸಬೇಕು. ಹತ್ತಿರದ ತೋಟಗಾರಿಕಾ ಇಲಾಖೆ ಅಥವಾ ಗ್ರಾಮ ಪಂಚಾಯಿತಿಯಲ್ಲಿ ಯೋಜನೆಯ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಪಡೆದುಕೊಳ್ಳಬಹುದು.