KSRTC ಯಿಂದ ಪುರುಷ, ಮಹಿಳೆ ಇಬ್ಬರಿಗೂ ಭರ್ಜರಿ ಗುಡ್ ನ್ಯೂಸ್ !!
KSRTC ಯಿಂದ ಪುರುಷ, ಮಹಿಳೆ ಇಬ್ಬರಿಗೂ ಭರ್ಜರಿ ಗುಡ್ ನ್ಯೂಸ್ ಸಿಕ್ಕಿದೆ. ಹೌದು, ಸರ್ಕಾರ ಜನರ ಆರ್ಥಿಕ ಪರಿಸ್ಥಿತಿ ಸುಧಾರಿಸಲು ಹಲವು ಯೋಜನೆ ತಂದಿದೆ. ಹಲವು ಹುದ್ದೆಗಳನ್ನೂ ಒದಗಿಸಿದೆ. ಇದೀಗ KSRTC ಯಿಂದ ಸಿಹಿಸುದ್ದಿ ಸಿಕ್ಕಿದೆ. ಏನಪ್ಪಾ ಆ ಗುಡ್ ನ್ಯೂಸ್ ಅಂತ ಯೋಚನೆನಾ? ಇಲ್ಲಿದೆ ನೋಡಿ ಮಾಹಿತಿ!!!.
ಎಂಟು ವರ್ಷಗಳಿಂದಲೂ ಕೆಎಸ್ಆರ್ಟಿಸಿ (KSRTC) ಹಾಗೂ ಅಂಗಸಂಸ್ಥೆಗಳಲ್ಲಿ 13 ಸಾವಿರಕ್ಕಿಂತಲೂ ಹೆಚ್ಚಿನ ಹುದ್ದೆಗಳು ಖಾಲಿ ಇದೆ ಎನ್ನಲಾಗಿದೆ. ಈ ಕಾರಣಕ್ಕಾಗಿ ಸರ್ಕಾರ ಮೊದಲ ಹಂತದ 6800 ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲಾಗುತ್ತಿದೆ. ಮೊದಲ ಹಂತವಾಗಿ 6500 ಚಾಲನೆ ಸಿಬ್ಬಂದಿ ಹಾಗೂ 300 ಜನ ತಾಂತ್ರಿಕ ಸಿಬ್ಬಂದಿಯನ್ನು ನೇಮಿಸಿಕೊಳ್ಳುವುದಕ್ಕೆ ಸರ್ಕಾರ ಆದೇಶವನ್ನು ನೀಡಿದೆ ಎಂದು ತಿಳಿದುಬಂದಿದೆ.
ಕೆಎಸ್ಆರ್ಟಿಸಿ (KSRTC) ನಿಗಮದಲ್ಲಿ 2000 ಡ್ರೈವರ್ ಹಾಗೂ ಕಂಡಕ್ಟರ್ ಪೋಸ್ಟ್ ಇದ್ದು, 300 ಜನ ತಾಂತ್ರಿಕ ಸಿಬ್ಬಂದಿಗಳನ್ನು ನೇಮಿಸುವಂತಹ ಪ್ರಕ್ರಿಯೆ ಕೂಡ ನಡೆಯುತ್ತಿದೆ. ಎನ್ ಬಿ ಡಬ್ಲ್ಯೂ ಕೆ ಆರ್ ಟಿ ಸಿ ನಲ್ಲಿ ಡ್ರೈವರ್ ಹಾಗೂ ಕಂಡಕ್ಟರ್ ಪೋಸ್ಟ್ ಗೆ 2000 ಹುದ್ದೆಗಳನ್ನು ಭರ್ತಿ ಮಾಡುವುದಕ್ಕೆ ಆದೇಶ ನೀಡಲಾಗಿದೆ. ಬಿಎಂಟಿಸಿ ನಲ್ಲಿ 2017 ಭರ್ತಿ ಮಾಡಲು ಆದೇಶ ನೀಡಲಾಗಿದೆ. ಒಟ್ಟು 2024ರ ಒಳಗಾಗಿ 8,719 ಹುದ್ದೆಗಳು ಭರ್ತಿಯಾಗಲಿವೆ ಎನ್ನಲಾಗಿದೆ.
ಇದನ್ನು ಓದಿ: RBI: ಮನೆ, ಆಸ್ತಿ ಮೇಲೆ ಸಾಲ ಮಾಡಿರೋರಿಗೆಲ್ಲಾ ಹೊಸ ರೂಲ್ಸ್- ಮಹತ್ವದ ನಿರ್ಧಾರ ಮಾಡಿದ ರಿಸರ್ವ್ ಬ್ಯಾಂಕ್ !!