Apple iPhone: ಈ ರೀತಿಯ ಮೊಬೈಲ್ ಫೋನ್ ಬಳಸೋರಿಗೆ ಬೆಳ್ಳಂಬೆಳಗ್ಗೆಯೇ ಬಂತು ಹೊಸ ರೂಲ್ಸ್ – ಖಡಕ್ ಎಚ್ಚರಿಕೆ ನೀಡಿದ ಕೇಂದ್ರ ಸರ್ಕಾರ

National news Indian government warns Apple iPhone and iPad users of high risk

Apple iPhone: ಆಪಲ್‌ ಇತ್ತೀಚಿಗೆ ಹೊಸ ಸರಣಿಯ ಐಫೋನ್‌ಗಳನ್ನು(apple iPhone)ಲಾಂಚ್‌ ಮಾಡಿದ್ದು, ಇತ್ತೀಚೆಗೆ ಐಫೋನ್‌ಗಳು (iPhone) ಅಥವಾ ಆಪಲ್‌ ಡಿವೈಸ್‌ (Apple device) ಬಳಕೆ ಮಾಡುವವರ ಸಂಖ್ಯೆ ಹೆಚ್ಚಾಗಿದೆ. ಈ ನಡುವೆ, ಹಳೆಯ ಓಎಸ್‌ ಚಾಲನೆಯಲ್ಲಿರುವ ಐಫೋನ್‌ಗಳು ಮತ್ತು ಐಪ್ಯಾಡ್‌ (iPhones, iPads) ಅನ್ನು ಬಳಸುತ್ತಿರುವವರಿಗೆ ಸರಕಾರ ಎಚ್ಚರಿಕೆ ನೀಡಿದೆ.

ಆಂಡ್ರಾಯ್ಡ್‌ ಓಎಸ್‌ (Android OS) ನಲ್ಲಿ ಇಲ್ಲಿಯವರೆಗೆ ಹೆಚ್ಚಿನ ಭದ್ರತಾ ಸಮಸ್ಯೆಗಳ ಬಗ್ಗೆ ದೂರು ಕೇಳಿ ಬರುತ್ತಿತ್ತು. ಆದರೆ ಈಗ CERT-In ಈ ಸಂಬಂಧ ಆಪಲ್‌ ಐಫೋನ್ ಮತ್ತು ಐಪ್ಯಾಡ್ ಆಪರೇಟಿಂಗ್ ಸಿಸ್ಟಂಗಳಲ್ಲಿ ಗಂಭೀರವಾದ ದೋಷಗಳನ್ನು ಫ್ಲ್ಯಾಗ್ ಮಾಡಿದ್ದು, ಈ ಮೂಲಕ ಡಿವೈಸ್‌ಗಳನ್ನು ಸ್ಕ್ಯಾಮರ್‌ಗಳು ರಿಮೋಟ್‌ ಮೂಲಕ ಕಂಟ್ರೋಲ್‌ಗೆ ಪಡೆದುಕೊಳ್ಳಬಹುದು ಎನ್ನಲಾಗಿದೆ. ಈ ದುರ್ಬಲತೆಯ ಮೂಲಕ ರಿಮೋಟ್ ಸ್ಕ್ಯಾಮರ್‌ಗಳಿಗೆ ವಿವಿಧ ರೀತಿಯಲ್ಲಿ ಅನುಕೂಲವಾಗಲಿದ್ದು, ದುರುದ್ದೇಶಪೂರಿತ ಸ್ಕ್ಯಾಮರ್ಸ್‌ ಬಳಕೆದಾರರ ಡಿವೈಸ್‌ ಅನ್ನು ಸಂಪೂರ್ಣವಾಗಿ ಕಂಟ್ರೋಲ್‌ಗೆ ಪಡೆಯಬಹುದಾಗಿದೆ. ಇದು ಮುಂದಿನ ದಿನಗಳಲ್ಲಿ ಪ್ರಮುಖ ಭದ್ರತಾ ಅಪಾಯವನ್ನು ಉಂಟು ಮಾಡುವ ಸಾಧ್ಯತೆಯಿದೆ.

16.7.1 ಕ್ಕಿಂತ ಮೊದಲ ಐಓಎಸ್ ಮತ್ತು ಐಪ್ಯಾಡ್‌ ಓಎಸ್‌ ಆವೃತ್ತಿಗಳೊಂದಿಗೆ ಆಪಲ್‌ ಐಫೋನ್ ಮತ್ತು ಐಪ್ಯಾಡ್‌ನಲ್ಲಿ ಈ ಸಮಸ್ಯೆ ಎದುರಾಗಿದೆ. ಈ ಓಎಸ್‌ ಸಾಮಾನ್ಯವಾಗಿ ಐಫೋನ್‌ 8 ಮತ್ತು ಅದರ ಹಿಂದಿನ ಡಿವೈಸ್‌ನಲ್ಲಿ ಇದ್ದು ಐಪ್ಯಾಡ್‌ ಏರ್‌ 3 ನೇ ತಲೆಮಾರಿನ ಹಾಗೂ ಆ ಬಳಿಕದ ಮಾಡೆಲ್ ನಲ್ಲಿ ಕಂಡುಬರುತ್ತಿವೆ. ಇದರ ಜೊತೆಗೆ ಐಪ್ಯಾಡ್‌ 5 ನೇ ತಲೆಮಾರಿನ ಮತ್ತು ನಂತರದ, ಮತ್ತು ಐಪ್ಯಾಡ್‌ ಮಿನಿ 5 ನೇ ತಲೆಮಾರಿನ ಮತ್ತು ನಂತರ ಡಿವೈಸ್‌ನಲ್ಲಿ ಈ ಸಮಸ್ಯೆ ಎದುರಾಗಿದೆ.

ಈ ಸಮಸ್ಯೆಗಳಿಂದ ಪಾರಾಗುವುದು ಹೇಗೆ?
ಆಪಲ್ ಈಗಾಗಲೇ ಆಪಲ್ ಸೆಕ್ಯುರಿಟಿ ನವೀಕರಣಗಳೊಂದಿಗೆ ದೋಷಗಳಿಗೆ ಪರಿಹಾರವನ್ನು ಬಿಡುಗಡೆ ಮಾಡಿದ್ದು, ಇದಕ್ಕಾಗಿ ಈ ಲಿಂಕ್‌ ಕ್ಲಿಕ್‌ ಮಾಡಬಹುದು. support.apple.com/en-us/HT213972. ಸಿಇಆರ್‌ಟಿ-ಇನ್ ಬಳಕೆದಾರರಿಗೆ ತಮ್ಮ ಭದ್ರತಾ ನವೀಕರಣಗಳಲ್ಲಿ ಆಪಲ್‌ ಒದಗಿಸಿದ ಸೂಕ್ತ ನವೀಕರಣಗಳನ್ನು ಅನ್ವಯಿಸಲು ಸಲಹೆ ನೀಡಿದೆ. ಇದರೊಂದಿಗೆ ಭದ್ರತಾ ಸಮಸ್ಯೆಗಳನ್ನು ಪರಿಹರಿಸಲು ಆಪಲ್ ನಿಯಮಿತವಾಗಿ ಪ್ಯಾಚ್‌ಗಳು ಮತ್ತು ನವೀಕರಣಗಳನ್ನು ಬಿಡುಗಡೆ ಮಾಡುತ್ತಿರುತ್ತದೆ. ಈ ಮಾದರಿಗಳಲ್ಲಿ ಗುರುತಿಸಲಾದ ದುರ್ಬಲತೆಗಳಿಗೆ ಸಂಬಂಧಿಸಿದ ಅಪಾಯಗಳನ್ನು ನಿಯಂತ್ರಿಸಲು ಮೇಲೆ ತಿಳಿಸಿದ ಡಿವೈಸ್‌ಗಳ ಬಳಕೆದಾರರು ಈ ನವೀಕರಣಗಳನ್ನು ತ್ವರಿತವಾಗಿ ಪೂರ್ಣಗೊಳಿಸುವುದು ಉತ್ತಮ.

ಇದನ್ನೂ ಓದಿ: Health Tips: ಅಗ್ಗದಲ್ಲಿ ಸಿಗೋ ಈ ಒಂದೇ ಒಂದು ಹಣ್ಣು ತಿಂದ್ರೆ ಯಾವ ರೋಗವೂ ನಿಮ್ಮ ಹತ್ತಿರ ಸುಳಿಯಲ್ಲ !!

Leave A Reply

Your email address will not be published.