Benefits Of Tea Leaves: ಟೀ ಮಾಡಿದ ಮೇಲೆ ಅದರ ವೇಸ್ಟ್ ಅನ್ನು ಎಸೆಯುತ್ತೀರಾ?! ಹಾಗಿದ್ರೆ ನೀವು ಎಂತಾ ತಪ್ಪು ಮಾಡುತ್ತಿದ್ದೀರಿ ಗೊತ್ತಾ ?!
Lifestyle kitchen hacks benefits of reusing tea leaves here is details in Kannada
Benefits Of Tea Leaves: ಬಹುತೇಕರು ಚಹಾ ಪ್ರಿಯರು ಆಗಿರುತ್ತಾರೆ. ಕೆಲವರಿಗೆ ಚಹಾ ಇಲ್ಲದೇ ಬೆಳಗ್ಗಿನ ದಿನಚರಿ ಆರಂಭವಾಗುವುದಿಲ್ಲ. ಅಷ್ಟರ ಮಟ್ಟಿಗೆ ಕೆಲವರು ಚಹಾ ಕುಡಿಯುವುದಕ್ಕೆ ಹೊಂದಿಕೊಂಡಿರುತ್ತಾರೆ. ಏಕೆಂದರೆ ಇದು ದೇಹಕ್ಕೆ ಶಕ್ತಿಯನ್ನು ತುಂಬುತ್ತದೆ. ಜೊತೆಗೆ ದಿನವಿಡೀ ಚಟುವಟಿಕೆಯಿಂದ ಕೂಡಿರಲು ಸಹಾಯ ಮಾಡುತ್ತದೆ.
ಆದರೆ ನೀವು ಚಹಾ ತಯಾರಿಸಿದ ಬಳಿಕ ಅದನ್ನು ಸೋಸಿ ಚಹಾ ಎಲೆಗಳನ್ನು ಕಸದ ಬುಟ್ಟಿಗೆ ಎಸೆಯುತ್ತೀರಿ. ಅಂತಹವರಲ್ಲಿ ನೀವೂ ಒಬ್ಬರಾಗಿದ್ದರೆ, ಇನ್ನು ಮುಂದೆ ಈ ತಪ್ಪನ್ನು ಖಂಡಿತ ಮಾಡಬೇಡಿ. ಟೀ ಸೊಪ್ಪಿನ ಮರುಬಳಕೆ ಹಾಗೂ ಅದರ ಉಪಯೋಗಗಳ(Benefits Of Tea Leaves) ಬಗ್ಗೆ ತಿಳಿದರೆ ನೀವು ಯಾವುದೇ ಕಾರಣಕ್ಕೂ ಅದನ್ನು ಬಿಸಾಡುವುದಿಲ್ಲ.
ಹೌದು, ನಾವು ಕಸ ಎಂದು ಎಸೆಯುವ ಬಳಕೆಯಾದ ಟೀ ಸೊಪ್ಪು ಉತ್ತಮ ಆರೋಗ್ಯವರ್ಧಕ. ಅಷ್ಟೇ ಅಲ್ಲ, ಇದು ನಿಮ್ಮ ಮನೆ ಕೆಲಸಕ್ಕೂ ಪ್ರಯೋಜನಕಾರಿ ಎಂದು ಸಾಬೀತುಪಡಿಸಲಿದೆ.
ನೀವು ಮನೆಯಲ್ಲಿ ಕೆಲವೊಮ್ಮೆ ನೊಣ, ಸೊಳ್ಳೆ, ಇರುವೆಯಂತಹ ಕೀಟಗಳ ಸಮಸ್ಯೆ ಹೆಚ್ಚಾಗಿರುತ್ತದೆ. ಇದನ್ನು ತಪ್ಪಿಸಲು ಇವು ಹೆಚ್ಚು ಬರುವ ಜಾಗದಲ್ಲಿ ಈಗಾಗಲೇ ಬಳಸಿರುವ ಟೀ ಸೊಪ್ಪನ್ನು ಸಣ್ಣ ಸಣ್ಣ ಗಂಟುಗಳಾಗಿ ಮಾಡಿ ಇರಿಸಿ ಆಮೇಲೆ ನೋಡಿ ಚಮತ್ಕಾರ.
ನೀವು ಮರದ ವಸ್ತುಗಳನ್ನು ಸ್ವಚ್ಛಗೊಳಿಸಲು ಹಾಗೂ ಅದರ ಬಣ್ಣವನ್ನು ಮಾಸದಂತೆ ನೋಡಿಕೊಳ್ಳಲು ಬಯಸಿದರೆ ಚಹಾದ ನೀರಿನಿಂದ ಅವುಗಳನ್ನು ಸ್ವಚ್ಛಗೊಳಿಸಬಹುದು.
ಚಹಾ ತಯಾರಿಸಿರುವ ಟೀ ಸೊಪ್ಪಿನಲ್ಲಿ ಉತ್ತಮ ಪ್ರಮಾಣದ ಆಂಟಿಆಕ್ಸಿಡೆಂಟ್ಗಳು ಕಂಡು ಬರುತ್ತದೆ. ಇದನ್ನು ಗಾಯವಾಗಿರುವ ಜಾಗದಲ್ಲಿ ಲೇಪಿಸುವುದರಿಂದ ಗಾಯ ಬೇಗ ಗುಣವಾಗುತ್ತದೆ.
ಇನ್ನು ಬಳಕೆಯಾದ ಚಹಾ ಎಲೆಗಳು ಟ್ಯಾನಿಂಗ್ ಅನ್ನು ತೆಗೆದುಹಾಕಲು ಕೂಡ ಅತ್ಯುತ್ತಮ ಮನೆಮದ್ದು ಎಂದು ಪರಿಗಣಿಸಲಾಗಿದೆ.
ಪಾತ್ರೆಗಳನ್ನು ಶುಚಿಗೊಳಿಸಲು ಚಹಾ ಎಲೆಯ ನೀರು ತುಂಬಾ ಪ್ರಯೋಜನಕಾರಿ ಆಗಿದೆ. ನೀವು ಮನೆಯಲ್ಲಿ ಬಳಸುವ ಡಿಶ್ ವಾಶ್ ಜೊತೆಗೆ ಈ ಟೀ ಸೊಪ್ಪಿನ ನೀರನ್ನು ಮಿಕ್ಸ್ ಮಾಡಿ ಬಳಸುವುದರಿಂದ ಪಾತ್ರೆಗಳು ಸ್ವಚ್ಛವಾಗುತ್ತವೆ.
ಪಾತ್ರೆಯಲ್ಲಿ ಅಡಗಿರುವ ತುಪ್ಪ, ಎಣ್ಣೆಯ ಜಿಡ್ಡು ಕಲೆಗಳನ್ನು ಹೋಗಲಾಡಿಸಲು, ಹಾಗೂ ದುರ್ವಾಸನೆಯನ್ನು ಹೋಗಲಾಡಿಸಲು ಟೀ ಸೊಪ್ಪಿನ ನೀರನ್ನು ಚೆನ್ನಾಗಿ ಕುದಿಸಿ ಬಳಿಕ ಈ ನೀರಿನಿಂದ ಪಾತ್ರೆಯನ್ನು ವಾಶ್ ಮಾಡಿ.
ಇನ್ನು ಬಳಕೆಯಾದ ಚಹಾ ಎಲೆಗಳನ್ನು ಹೂವಿನ ಬುಡಗಳಿಗೆ, ತರಕಾರಿ ಗಿಡಗಳ ಬುಡಗಳಿಗೆ ಹಾಕಿ ನೋಡಿ. ಇದ್ರಿಂದ ಗಿಡಗಳು ಸೊಂಪಾಗಿ ಬೆಳೆದು ಉತ್ತಮ ಬೆಳೆ ನೀಡುತ್ತದೆ.
ಇದನ್ನೂ ಓದಿ: ಅಬ್ಬಬ್ಬಾ… ಇನ್ಮುಂದೆ 25 ವರ್ಷ ಪ್ರತೀ ತಿಂಗಳೂ ಈತನ ಕೈ ಸೇರುತ್ತೆ ಲಕ್ಷ ಲಕ್ಷ ಹಣ !! ಎಂತಾ ಲಾಟ್ರಿ ಮಾರ್ರೆ ಇದು !!