Home Karnataka State Politics Updates Congress MLA: ಬ್ಯೂಟಿಫುಲ್ ನರ್ಸ್ಗಳು ನಂಗೆ ‘ತಾತಾ’ ಅಂದ್ರೆ ಒಂಥರಾ ಆಗುತ್ತೆ !! ಕಾಂಗ್ರೆಸ್ ಶಾಸಕನಿಂದ...

Congress MLA: ಬ್ಯೂಟಿಫುಲ್ ನರ್ಸ್ಗಳು ನಂಗೆ ‘ತಾತಾ’ ಅಂದ್ರೆ ಒಂಥರಾ ಆಗುತ್ತೆ !! ಕಾಂಗ್ರೆಸ್ ಶಾಸಕನಿಂದ ಅಚ್ಚರಿ ಹೇಳಿಕೆ

Congress MLA

Hindu neighbor gifts plot of land

Hindu neighbour gifts land to Muslim journalist

Congress MLA: ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಪಿಕೆ ನಾಗನೂರ ಗ್ರಾಮದಲ್ಲಿ ಆಯೋಜಿಸಿದ ದಸರಾ ಕಾರ್ಯಕ್ರಮದಲ್ಲಿ (Dasara Program) ಭಾಗಿಯಾಗಿದ್ದ ಕಾಂಗ್ರೆಸ್ ಕಾಗವಾಡ ಶಾಸಕ (Kagawad MLA) ರಾಜು ಕಾಗೆ ನೀಡಿರುವ ಹೇಳಿಕೆ ಭಾರೀ ಚರ್ಚೆಗೆ ಕಾರಣವಾಗಿದೆ.ಚೆಂದದ ನರ್ಸ್ಗಳು (Nurses) ನನ್ನನ್ನು ಅಜ್ಜ ಅಂತಾ ಕರೆಯುತ್ತಾರೆ ಎಂದು ಕಾಂಗ್ರೆಸ್ ಶಾಸಕ ರಾಜು ಕಾಗೆ (Congress MLA Raju Kage) ಬೇಸರ ಹೊರ ಹಾಕಿದ್ದಾರೆ.

Congress MLA

ಅವರಖೋಡ ಗ್ರಾಮದಲ್ಲಿ ನಡೆದ ದಸರಾ ಸಾಂಸ್ಕ್ರತಿಕ‌ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ರಾಜು ಕಾಗೆ,ಅಥಣಿ ಶಾಸಕ ಲಕ್ಷ್ಮಣ ಸವದಿ ಅವರನ್ನು ಉದ್ದೇಶಿಸಿ ಮಾತನಾಡಿದ್ದಾರೆ. ನನಗೆ ಲೀವರ್ ಆಪರೇಷನ್ ಆಗಿದ್ದ ಸಂದರ್ಭ ಡಾಕ್ಟರ್ ಪದೇಪದೆ ಆರಾಮಾಗಿದ್ದೀರಾ ಎಂದು ಡಾಕ್ಟರ್ ಕೇಳಿದ್ದು ಏನು ತ್ರಾಸ ಆಗುತ್ತಿರಲಿಲ್ಲ. ಆದರೆ, ಅಲ್ಲಿನ ಚೆಂದ ಚೆಂದ ನರ್ಸ್‌ಗಳು ಬಂದು ನಂಗೆ ಅಜ್ಜಾ ಅನ್ನುತ್ತಿದ್ದದ್ದು ತ್ರಾಸ ಆಗುತ್ತಿತ್ತು ಎಂದು ಹೇಳಿದ್ದಾರೆ. ಸದ್ಯ, ಶಾಸಕರ ಹೇಳಿಕೆಗೆ ಸಾರ್ವಜನಿಕ ವಲಯದಲ್ಲಿ ಭಾರೀ ಟೀಕೆ ವ್ಯಕ್ತವಾಗುತ್ತಿದೆ. ಶಾಸಕರು ಕಾರ್ಯಕ್ರಮದಲ್ಲಿ ಆಡಿದ ಮಾತಿನ ವಿಡಿಯೋ (Video) ಸೋಶಿಯಲ್ ಮೀಡಿಯಾದಲ್ಲಿ (Social Media) ವೈರಲ್ ಆಗಿದೆ.

ಇದನ್ನೂ ಓದಿ: Karnataka BJP: ಬಿಜೆಪಿ ರಾಜ್ಯಾಧ್ಯಕ್ಷ ಫೈಟ್- ಶೋಭಾ, ಸದಾನಂದಗೌಡ ಇಬ್ಬರಲ್ಲಿ ಇವರಿಗೆ ಪಟ್ಟ ಫಿಕ್ಸ್ ?!