Gujarat Garba Dance: ನವರಾತ್ರಿ ಗರ್ಬಾ ಡ್ಯಾನ್ಸ್ ಎಫೆಕ್ಟ್- 24 ತಾಸಿನಲ್ಲಿ 10 ಜನರ ಬಲಿ ಪಡೆದ ಹೃದಯಾಘಾತ !!
Gujarat news 10 deaths due to Heart attack during garba dance latest news
Gujarat Garba Dance: ದೇಶದೆಲ್ಲೆಡೆ ನವರಾತ್ರಿ (Navarathri) ಹಬ್ಬದ ಸಂಭ್ರಮ ಕಳೆ ಕಟ್ಟಿದ್ದು, ನವರಾತ್ರಿ ಆಚರಣೆಯ(Navaratri Celebration) ಸೊಬಗನ್ನು ಕಣ್ತುಂಬಿ ಕೊಳ್ಳುವುದೇ ಸಡಗರ. ಗುಜರಾತ್ (Gujarat) ರಾಜ್ಯದ ಹೆಚ್ಚಿನ ಭಾಗಗಳಲ್ಲಿ ನವರಾತ್ರಿ ಹಬ್ಬವನ್ನು ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ಈ ಸಂದರ್ಭ ಗರ್ಭಾ ನೃತ್ಯ ಕಾರ್ಯಕ್ರಮಗಳು ಕೂಡ ಹೆಚ್ಚಿನ ಕಡೆ ನಡೆಯುತ್ತವೆ.ಆದರೆ, ನವರಾತ್ರಿ ಹಿನ್ನೆಲೆಯಲ್ಲಿ ಗುಜರಾತ್ ನಲ್ಲಿ ಆಚರಿಸುವ ಗರ್ಬಾ ಸಾಂಪ್ರದಾಯಿಕ ನೃತ್ಯದ (Garba Events) ಸಂದರ್ಭ ಕಳೆದ 24 ಗಂಟೆಯಲ್ಲಿ ಹೃದಯಾಘಾತದ ಪರಿಣಾಮ 10 ಜನ ಮೃತಪಟ್ಟ ದಾರುಣ ಘಟನೆ ವರದಿಯಾಗಿದೆ.
ಯುವಕರು ಮತ್ತು ಹಿರಿಯರು ಗರ್ಬಾ ನೃತ್ಯ(Gujarat Garba Dance) ಸಮಾರಂಭಗಳಲ್ಲಿ ಭಾಗಿಯಾಗುತ್ತಾರೆ. ಈ ಸಂಭ್ರಮಾಚರಣೆಯಲ್ಲಿ ಪಾಲ್ಗೊಳ್ಳುತ್ತಿರುವ ಕೆಲವರು ಹೃದಯಾಘಾತದಿಂದ (Heart Attack) ಕುಸಿದು ಬಿದ್ದಿದ್ದು, ರಾಜ್ಯದ ಪ್ರಸಿದ್ಧ ಗರ್ಬಾ ಆಚರಣೆ (Garba Event) ವೇಳೆ ಬರೋಡಾದ ದಭೋಯಿಯಲ್ಲಿ 13 ವರ್ಷದ ಬಾಲಕನು ನೃತ್ಯ ಮಾಡುತ್ತಿದ್ದಾಗಲೇ ಕುಸಿದು ಬಿದ್ದಿದ್ದು, ಆಸ್ಪತ್ರೆಗೆ ದಾಖಲಿಸಿದರು ಕೂಡ ಅಷ್ಟರಲ್ಲಿ ಆತನ ಪ್ರಾಣ ಪಕ್ಷಿ ಹಾರಿಹೋಗಿರುವುದನ್ನು ವೈದ್ಯರು ಖಾತ್ರಿ ಪಡಿಸಿದ್ದು, ಹೃದಯ ಸ್ತಂಭನ ಉಂಟಾಗಿದೆ ಎಂದು ಮಾಹಿತಿ ನೀಡಿದ್ದಾರೆ. ಕಪಾಡ್ವಂಜ್‌ನಲ್ಲಿ ಹೃದಯಾಘಾತಕ್ಕೆ 17 ವರ್ಷದ ಬಾಲಕ ಬಲಿಯಾಗಿದ್ದು, ಇದೆ ರೀತಿ, ಕಳೆದ ಕಳೆದ 24 ಗಂಟೆಯಲ್ಲಿ ಗರ್ಬಾ ನೃತ್ಯದ ವೇಳೆ ಹೃದಯಾಘಾತದಿಂದ 10 ಮಂದಿ ಮೃತಪಟ್ಟಿದ್ದಾರೆ.
ಗುಜರಾತ್‌ನ ಬರೋಡಾ ಸೇರಿ ಹಲವೆಡೆ ಗರ್ಬಾ ಹಾಡು, ನೃತ್ಯದ ಸಂದರ್ಭ ಜೋರಾಗಿ ಸಂಗೀತದ ಶಬ್ದವಿರುವ ಹಿನ್ನೆಲೆ ಹೆಚ್ಚಿನ ಮಂದಿಗೆ ಹೃದಯಾಘಾತ ಉಂಟಾಗಿದೆ ಎನ್ನಲಾಗಿದೆ. ಬಾಲಕರು, ಯುವಕರು ಮತ್ತು ಮಧ್ಯವಯಸ್ಕರು ಮೃತಪಟ್ಟಿರುವ ಹಿನ್ನೆಲೆ ಸಹಜವಾಗಿ ಆತಂಕ ಎದುರಾಗಿದೆ. ಇದರಿಂದಾಗಿ ಗರ್ಬಾ ನೃತ್ಯದ ಆಚರಣೆಯಲ್ಲಿ ಜನರು ಸಂಭ್ರಮದಿಂದ ಪಾಲ್ಗೊಳ್ಳಲು ಕೂಡ ಭಯಪಡುವಂತಾಗಿದೆ ಎಂದು ತಿಳಿದುಬಂದಿದೆ.