Arecanut: ಅಡಿಕೆ ಬೆಳೆಗಾರರಿಗಷ್ಟೇ ಅಲ್ಲ, ‘ಕೇಣಿ’ ಮಾಡೋ ಕೇಣಿದಾರರಿಗೂ ಎದುರಾಯ್ತು ಭಾರೀ ದೊಡ್ಡ ಸಂಕಷ್ಟ !!

Agriculture news Arecanut growers problem latest news

Arecanut growers problem: ಅಡಿಕೆ ಬೆಳೆಗಾರರಿಗಷ್ಟೇ(Arecanut Growers)ಅಲ್ಲದೇ, ಕೇಣಿ’ ಮಾಡುವ ಕೇಣಿದಾರರಿಗೂ ಭಾರೀ ದೊಡ್ಡ ಸಂಕಷ್ಟ(Arecanut growers problem) ಎದುರಾಗಿದೆ. ಬಸವಾಪಟ್ಟಣದಲ್ಲಿ ಅನಾವೃಷ್ಟಿಯಿಂದ ಈ ಭಾರೀ ನಷ್ಟ ಉಂಟಾಗಿದ್ದು, ಈ ವರ್ಷ ಮಳೆಯ ಅಭಾವದ ಪರಿಣಾಮ ಅಡಿಕೆ ಫಸಲಿನ ಇಳುವರಿ ಶೇಕಡ 40ರಷ್ಟು ಕುಸಿತ ಕಂಡಿದೆ.

ಪ್ರತಿ ವರ್ಷ ಎಕರೆಗೆ ಸರಾಸರಿ 10 ಕ್ವಿಂಟಾಲಲ್‌ನಷ್ಟು ಅಡಿಕೆ ದೊರೆಯುತ್ತಿತ್ತು. ಈ ವರ್ಷ ಕೇವಲ 5 ಕ್ವಿಂಟಲ್‌ಗೆ ಇಳಿಕೆ ಕಂಡಿದ್ದು, ಅಡಿಕೆಯ ತೂಕ ಕೂಡ ಕಡಿಮೆಯಾಗಿದೆ. ಒಂದು ಚೀಲ ಅಡಿಕೆ 80ರಿಂದ 85 ಕೆ.ಜಿ. ತೂಗುತ್ತಿದ್ದಲ್ಲಿ ಈಗ 60ರಿಂದ 65 ಕೆ.ಜಿ.ಯಷ್ಟಾಗಿದೆ. ಬಸವಾಪಟ್ಟಣ ಸುತ್ತಲಿನ ಗ್ರಾಮಗಳ ನೂರಾರು ಎಕರೆ ಅಡಿಕೆ ತೋಟಗಳನ್ನು ಕೇಣಿ ಪಡೆದು, ಮರಗಳಿಂದ ಅಡಿಕೆ ಕೊಯ್ದು ಕಣಗಳಿಗೆ ಸಾಗಿಸಿ ಸುಲಿಯುವುದು, ಬೇಯಿಸುವುದು, ಒಣಗಿಸುವ ಕೆಲಸವನ್ನು ಕೇಣಿದಾರರು ಮಾಡಿಸುತ್ತಾರೆ. ಆದರೆ, ಒಣಗಿಸಿದ ಕೂಡಲೇ ಮಾರಾಟ ಮಾಡಲಾಗದು. ದರ ಹೆಚ್ಚಾಗುವವರೆಗೆ ಕಾಯಬೇಕಾಗುತ್ತದೆ. ಇದರಿಂದ ಕೆಲವು ದಿನ ಅಡಿಕೆ ಇಟ್ಟರು ಕೂಡ ತೂಕ ಕಡಿಮೆಯಾಗುತ್ತದೆ.

‘ಪ್ರತಿ ವರ್ಷ ಜೂನ್ ತಿಂಗಳಲ್ಲಿ ಕೇಣಿದಾರರು, ರೈತರ ತೋಟಗಳನ್ನು ಕೇಣಿ ಹಿಡಿಯುತ್ತಾರೆ. ರೈತರೊಂದಿಗೆ ದರ ನಿಗದಿ ಮಾಡಿಕೊಂಡು ಮುಂಗಡ ಕೇಣಿದಾರರು ಮುಂಗಡ ನೀಡುತ್ತಾರೆ. ಆದ್ರೆ, ಈ ನಡುವೆ, ರೈತರಿಗೆ ಲಾಭ ಬಾರದೇ ಹೋದರು ಕೇಣಿದಾರರು ಹಣ ನೀಡಲೇಬೇಕು. ರೈತರು ಒಪ್ಪಂದದ ಪ್ರಕಾರ ಹಣ ವಸೂಲಿ ಮಾಡುತ್ತಾರೆ. ಹಣ ಕೊಡುವುದು ತಡವಾದರೆ, ಕೇಣಿದಾರರಿಗೆ ಕಪ್ಪು ಪಟ್ಟಿಗೆ ಸೇರಿಸಿ ಮತ್ತೆ ಮುಂದಿನ ವರ್ಷ ಕೇಣಿ ಕೊಡುವುದಿಲ್ಲ. ಇದರಿಂದಾಗಿ ಸತತ ಎರಡು ವರ್ಷದಿಂದ ನಷ್ಟವಾಗುತ್ತಿದೆ’ ಎಂದು ಕಣಿವೆಬಿಳಚಿ ಗ್ರಾಮದ ಕೇಣಿದಾರರೊಬ್ಬರು ಮಾಧ್ಯಮವೊಂದಕ್ಕೆ ಮಾಹಿತಿ ನೀಡಿದ್ದಾರೆ. ಜೂನ್‌ನಿಂದ ಜನವರಿವರೆಗೆ ಅಡಿಕೆ ಕೊಯ್ಲು, ಸಾಗಣೆ, ಹಸಿ ಅಡಿಕೆ ಸುಲಿದು ಬೇಯಿಸುವುದು, ಒಣಗಿಸುವುದು, ಪ್ರತ್ಯೇಕಿಸಿ ಚೀಲ ತುಂಬುವುದಕ್ಕೆ ಅಂದಾಜು 600 ಜನ ಮಹಿಳೆಯರಿಗೆ, 400 ಜನ ಪುರುಷರಿಗೆ ಕೇಣಿದಾರರು ಕೆಲಸ ನೀಡುತ್ತಾರೆ. ಕೇಣಿದಾರರಿಗೆ ಹಾಕಿದ ಬಂಡವಾಳವೂ ದೊರೆಯುತ್ತಿಲ್ಲ’ ಎಂದು ಕೇಣಿದಾರರೊಬ್ಬರು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ:  Gujarat Garba Dance: ನವರಾತ್ರಿ ಗರ್ಬಾ ಡ್ಯಾನ್ಸ್ ಎಫೆಕ್ಟ್- 24 ತಾಸಿನಲ್ಲಿ 10 ಜನರ ಬಲಿ ಪಡೆದ ಹೃದಯಾಘಾತ !!

Leave A Reply

Your email address will not be published.