Washing machine tips: ಬಟ್ಟೆ ಒಗೆದ ಮೇಲೆ ವಾಷಿಂಗ್ ಮಷೀನ್ ಮುಚ್ಚಳ ತೆರೆದಿಡಬೇಕು! ಯಾಕೆ?

Latest news tips to washing machine door should be open after washing clothes

Share the Article

Washing machine tips: ಇತ್ತೀಚಿನ ದಿನಗಳಲ್ಲಿ ವಾಷಿಂಗ್ ಮೆಷಿನ್‌ಗಳ ಬಳಕೆ ವಿಪರೀತವಾಗಿ ಹೆಚ್ಚಾಗಿದೆ. ಹಳ್ಳಿಗಳಿಂದ ನಗರಗಳವರೆಗೆ ಅನೇಕ ಮನೆಗಳಲ್ಲಿ ಈ ವಾಷಿಂಗ್ ಮೆಷಿನ್​ಗಳನ್ನು ಬಳಸುತ್ತಿದ್ದಾರೆ. ಇನ್ನು ಈ ಬ್ಯುಸಿ ಜೀವನದಲ್ಲಿ ಪ್ರತಿಯೊಬ್ಬರು ಅವರ ಆರ್ಥಿಕ ಪರಿಸ್ಥಿತಿಗೆ ತಕ್ಕಂತೆ ಮನೆಗೊಂದು ವಾಷಿಂಗ್​ ಮೆಷಿನ್​ ಖರೀದಿ ಮಾಡಿರುತ್ತಾರೆ. ಈ ಹಿಂದೆ ಬಟ್ಟೆಗಳು ಹೆಚ್ಚು ಕಲೆಯಾದರೆ ಅದನ್ನು ಕೈಯಿಂದ ಒಗೆಯುವುದು ತುಂಬಾ ಕಷ್ಟವಾಗುತ್ತಿತ್ತು. ಆದರೀಗ ವಾಷಿಂಗ್ ಮಷೀನ್​ನಿಂದ ನಿಮಿಷಾರ್ಧದಲ್ಲಿ ಕೆಲಸ ಆಗಿಬಿಡುತ್ತದೆ.

ಯಾವುದೇ ರೀತಿಯ ಯಂತ್ರೋಪಕರಣಗಳಿಗೆ ನಿಯಮಿತ ಶುಚಿಗೊಳಿಸುವಿಕೆ ಮತ್ತು ದೀರ್ಘಾವಧಿಯ ನಿರ್ವಹಣೆ ಅಗತ್ಯವಿರುತ್ತದೆ. ಅಂತೆಯೇ ವಾಷಿಂಗ್ ಮಿಷನ್( Washing machine tips) ಸ್ವಚ್ಛತೆಯು ಬಹಳ ಮುಖ್ಯ. ನಮ್ಮಲ್ಲಿ ಅನೇಕರು ವಾಷಿಂಗ್ ಮೆಷಿನ್ ಸ್ವತಃ “ಕ್ಲೀನಿಂಗ್ ಮೆಷಿನ್” ಆಗಿರುವುದರಿಂದ ಸ್ವಯಂ-ನಿರ್ವಹಣೆ ಮಾಡಬಹುದು ಎಂದು ಊಹಿಸುತ್ತಾರೆ. ಆದರೆ, ಅದಕ್ಕೆ ನಿಯಮಿತವಾಗಿ ಸಾಕಷ್ಟು ಶುಚಿತ್ವದ ಅಗತ್ಯವಿದೆ.ವಾಷಿಂಗ್ ಮಷೀನ್ ದೀರ್ಘಕಾಲದವರೆಗೆ ಸರಿಯಾಗಿ ಕಾರ್ಯನಿರ್ವಹಿಸಲು, ನೀವು ಅದರ ಬಗ್ಗೆ ವಿಶೇಷ ಕಾಳಜಿಯನ್ನು ತೆಗೆದುಕೊಳ್ಳಬೇಕಾಗುತ್ತದೆ.

ಇನ್ನು ಕೆಲವರು ಅನುಸರಿಸುವ ತಪ್ಪಾದ ಕ್ರಮಗಳಿಂದಾಗಿ ವಾಷಿಂಗ್ ಮಿಷನ್ ನ ಬಾಳಿಕೆ ಕಡಿಮೆಯಾಗುತ್ತದೆ.
ಹೆಚ್ಚಿನವರು ವಾಷಿಂಗ್ ಮಷೀನ್​ನಲ್ಲಿ ಬಟ್ಟೆಗಳನ್ನು ಒಗೆದ ಬಳಿಕ ಮುಚ್ಚಳವನ್ನು ಸಂಪೂರ್ಣವಾಗಿ ಮುಚ್ಚಿ ಬಿಡುತ್ತಾರೆ ಆದರೆ ಇದು ತಪ್ಪು. ಈ ರೀತಿ ಯಾವತ್ತು ಮಾಡಬೇಡಿ.

ವಾಷಿಂಗ್ ಮಿಷನ್ ಅನ್ನು ಸಂಪೂರ್ಣವಾಗಿ ಮುಚ್ಚಿದರೆ ಕೆಟ್ಟ ವಾಸನೆ ಬರುತ್ತದೆ. ಇದು ಹೊರಹೋಗಿವುದಿಲ್ಲ. ಮುಂದಿನ ಬಾರಿ ಒಗೆಯಲು ಹಾಕಿದಾಗ ಬಟ್ಟೆ ವಾಸನೆ ಬರುತ್ತದೆ. ಹಾಗಾಗಿ ಬಟ್ಟೆ ತೊಳೆದ ಕನಿಷ್ಠ 40-45 ನಿಮಿಷ ಮುಚ್ಚಳವನ್ನು ತೆರೆದಿಟ್ಟರೆ, ಗಾಳಿಯು ವಾಷಿಂಗ್ ಮಷೀನ್​ ಒಳಗೆ ಬಂದಿಯಾಗದೆ ಹೊರಗಡೆ ಹೋಗುತ್ತದೆ. ಹಾಗೂ ಇದರಲ್ಲಿ ಯಾವುದೇ ಬ್ಯಾಕ್ಟೀರಿಯಾ ಇದ್ದರೆ ಅದು ಹೋರಗೋಗುತ್ತದೆ.

ಇದಲ್ಲದೆ, ವಾಷಿಂಗ್ ಮಷೀನ್​ ಅನ್ನು ನಿಯಮಿತವಾಗಿ ಸ್ವಚ್ಛಗೊಳಿಸುತ್ತಿರಬೇಕು. ಇದರಿಂದಾಗಿ ಜೀವಿತಾವಧಿಯನ್ನು ಹೆಚ್ಚಿಸಬಹುದು ಮತ್ತು ರಿಪೇರಿ ಖರ್ಚನ್ನು ಉಳಿಸಬಹುದು. ವಾಷಿಂಗ್ ಮಿಷನ್ ಸ್ವಚ್ಛತೆಗಾಗಿ ನೀವು ಅಡುಗೆ ಮನೆಯಲ್ಲಿರುವ ವಿನೆಗರ್ (ಬಿಳಿ ವಿನೆಗರ್) ಅನ್ನು ಉಪಯೋಗಿಸಬಹುದು.

 

ಇದನ್ನು ಓದಿ: Viral news: ರೀಲ್ಸ್ ಮಾಡಲು 68 ನೇ ಮಹಡಿ ಹತ್ತಿದ ವ್ಯಕ್ತಿ! ಅದೇ ಕೊನೆ, ದುರಂತ ಅಂತ್ಯಗೀಡಾದ! 

Leave A Reply