Ration Card Updates: ರೇಷನ್ ಕಾರ್ಡ್’ದಾರರಿಗೆ ಭಾರೀ ದೊಡ್ಡ ಆಘಾತ – ತಿದ್ದುಪಡಿಗೆ ಎದುರಾಯ್ತು ಮತ್ತೊಂದು ಸಂಕಷ್ಟ

Karnataka news Big shock for ration card holders correction of name in ration card server problem

Ration Card name correction : ಬಿಪಿಎಲ್, ಎಪಿಎಲ್ ಸೇರಿ ಪಡಿತರ ಚೀಟಿದಾರರಿಗೆ (Ration Card Holder) ಹೆಸರು ಸೇರ್ಪಡೆ ಹಾಗೂ ತಿದ್ದುಪಡಿಗೆ(Ration Card name correction) ಮತ್ತೊಮ್ಮೆ ಅನುವು ಮಾಡಿಕೊಡಲಾಗಿದೆ. ಪಡಿತರ ಚೀಟಿಯಲ್ಲಿನ(Ration Card)ಫಲಾನುಭವಿಗಳ ಮಾಹಿತಿ ತಿದ್ದುಪಡಿ ಮತ್ತು ಹೆಚ್ಚುವರಿ ಫಲಾನುಭವಿಗಳ ಹೆಸರು ಸೇರಿಸಲು ಮತ್ತೆ ಮೂರು ದಿನಗಳವರೆಗೆ ಆಹಾರ ಇಲಾಖೆ ಅನುವು ಮಾಡಿಕೊಟ್ಟಿದೆ.

ರಾಜ್ಯದಲ್ಲಿ ಪಡಿತರ ಕಾರ್ಡ್ನಲ್ಲಿರುವ ದೋಷದಿಂದ ಲಕ್ಷಾಂತರ ಫಲಾನುಭವಿಗಳಿಗೆ ಅನ್ನಭಾಗ್ಯ(Anna Bhagya), ಗೃಹಲಕ್ಷ್ಮಿ ಯೋಜನೆಯ (Gruha Lakshmi Yojana Money)ಹಣ ಪಾವತಿಯಾಗದೆ ಬಾಕಿ ಉಳಿದಿದ್ದು, ಹೀಗಾಗಿ ಪಡಿತರ ಚೀಟಿಗಳಲ್ಲಿ ತಿದ್ದುಪಡಿ ಮಾಡಿಕೊಂಡು ಹಣ ಪಡೆಯಲು ಮುಂದಾದವರಿಗೆ ಸರ್ವರ್ ಸಮಸ್ಯೆ ದೊಡ್ಡ ತಲೆ ನೋವಾಗಿ ಪರಿಣಮಿಸಿದೆ. ಮೊದಲ ಬಾರಿಗೆ ಪಡಿತರ ಚೀಟಿ ತಿದ್ದುಪಡಿಗೆ ಒಂದೂವರೆ ತಿಂಗಳ ಹಿಂದೆಯೇ ಅವಕಾಶ ಕಲ್ಪಿಸಲಾಗಿ, ಪ್ರತಿ ಜಿಲ್ಲೆಗಳಿಗೆ ತಲಾ ಮೂರು ದಿನಗಳಂತೆ ಅವಕಾಶ ನೀಡಿದ್ದರೂ ಕೂಡ ಸರ್ವರ್ ಸಮಸ್ಯೆಯಿಂದ ಪಡಿತರ ತಿದ್ದುಪಡಿ ಮಾಡಲು ಸಾಧ್ಯವಾಗಿಲ್ಲ. ಈಗ ಮತ್ತೆ ಎರಡನೇ ಬಾರಿ ಪಡಿತರ ತಿದ್ದುಪಡಿ(Ration Card)ಮಾಡಲು ಅನುವು ಮಾಡಿದರು ಸಹ ಸರ್ವರ್ ಸಮಸ್ಯೆ ಮುಂದುವರಿದಿದೆ. ಹೀಗಾಗಿ, ತಿದ್ದುಪಡಿ ವಿಳಂಬವಾಗಿ ಪಡಿತರ ಚೀಟಿದಾರರು ಸಮಸ್ಯೆ ಎದುರಿಸುತ್ತಿದ್ದಾರೆ. ಕೆಲಸ ಕಾರ್ಯ ಬಿಟ್ಟು ಗ್ರಾಮ ಒನ್ ಕೇಂದ್ರಗಳ( Grama One Center)ಎದುರು ಕಾದು ನಿಂತರೂ ಕೂಡ ಕಾಲಹರಣ ಆಗುತ್ತಿದೆಯೇ ವಿನಃ ಪಡಿತರ ತಿದ್ದುಪಡಿ ಮಾತ್ರ ಆಗುತ್ತಿಲ್ಲ ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ: Fix Date Time For fireworks In Karnataka: ದೀಪಾವಳಿ ಹಬ್ಬಕ್ಕೆ ಪಟಾಕಿ ಸಿಡಿಸಲು ಗೈಡ್‌ಲೈನ್ಸ್‌ ಜಾರಿ! ಪಟಾಕಿ ಸಿಡಿಸಲು ಸಮಯ, ದಿನಾಂಕ ನಿಗದಿ!!!

Leave A Reply

Your email address will not be published.