Home latest Mars: ಅಬ್ಬಬ್ಬಾ.. ರಾತ್ರೋರಾತ್ರಿ ಮಂಗಳ ಗ್ರಹದಲ್ಲಿ ಏನಾಗಿದೆ ಗೊತ್ತಾ ?! ವಿಚಾರ ತಿಳಿದು ವಿಜ್ಞಾನಿಗಳಿಗೇ ಕಾದಿತ್ತು...

Mars: ಅಬ್ಬಬ್ಬಾ.. ರಾತ್ರೋರಾತ್ರಿ ಮಂಗಳ ಗ್ರಹದಲ್ಲಿ ಏನಾಗಿದೆ ಗೊತ್ತಾ ?! ವಿಚಾರ ತಿಳಿದು ವಿಜ್ಞಾನಿಗಳಿಗೇ ಕಾದಿತ್ತು ಬಿಗ್ ಶಾಕ್

Mars

Hindu neighbor gifts plot of land

Hindu neighbour gifts land to Muslim journalist

Mars: ಮಂಗಳ ಗ್ರಹದಲ್ಲಿ (Mars) ಜೀವಿಗಳಿರಬಹುದೇ? ಮನುಷ್ಯರು ಅಲ್ಲಿ ಈಗ ಹೋದರೆ ಬದುಕಲು ಸಾಧ್ಯವೇ? ಮನುಷ್ಯರು ಮಂಗಳನ ಅಂಗಳದಲ್ಲಿ ಬದುಕಲು ಏನು ಮಾಡಬೇಕು ಎಂಬ ಬಗ್ಗೆ ನಾನಾ ಚರ್ಚೆಗಳು, ಪರೀಕ್ಷೆ, ಅಧ್ಯಯನಗಳು ನಡೆಯುತ್ತಲೇ ಇವೆ. ಸದ್ಯ ನಾಸಾ (Nasa) ಸಂಸ್ಥೆಯ ಲ್ಯಾಂಡರ್ (Lander) ಮಂಗಳ ಗ್ರಹದಲ್ಲಿ ಮೊದಲ ಬಾರಿಗೆ ದೊಡ್ಡ ಮಟ್ಟದ ಭೂಕಂಪನವನ್ನು ಡಿಟೆಕ್ಟ್ ಮಾಡಿದೆ ಎನ್ನಲಾಗಿದೆ.

ಮಂಗಳ ಗ್ರಹದ ಮೇಲೆ 4.7 ಮ್ಯಾಗ್ನಿಟ್ಯೂಡ್ ಡಿಟೆಕ್ಟ್ ಮಾಡಲಾಗಿದ್ದು, ವೈಜ್ಞಾನಿಕ ಸಂಶೋಧನೆಯ ಪ್ರಕಾರ ಇದನ್ನು ಮಂಗಳ ಗ್ರಹದಲ್ಲಿ ಮೊದಲ ಬಾರಿಗೆ ಕಂಡು ಹಿಡಿದಿರುವುದು ಇನ್ನಷ್ಟು ವಿಚಿತ್ರ ಅನುಭವವನ್ನು ನೀಡುವಂತೆ ಮಾಡಿದೆ. ಭೂಮಿಯ ರೀತಿಯಲ್ಲಿ ಮಂಗಳ ಗ್ರಹದಲ್ಲಿ ಭೂಕಂಪನಕ್ಕೆ (Mars Quake) ಕಾರಣವಾಗುವಂತಹ ಭೌಗೋಳಿಕ ಅಂಶಗಳು ಇಲ್ಲ. ಆದರೂ ಮಂಗಳ ಗ್ರಹದಲ್ಲಿ ಭೂಕಂಪನ ಆಗಿರುವುದು ಗೊಂದಲಮಯ ಸನ್ನಿವೇಶವನ್ನು ಉಂಟುಮಾಡಿದೆ. ಆದರೆ, ಮಂಗಳ ಗ್ರಹದಲ್ಲಿಯೇ ಆಗಿರುವಂತಹ ಟೆಟನಿಕ್ ಆಕ್ಟಿವಿಟಿ ಕಾರಣದಿಂದಾಗಿ ಇದು ನಡೆದಿರಬಹುದು ಎಂದು ವಿಜ್ಞಾನಿಗಳು ಅಂದಾಜಿಸಿದ್ದಾರೆ.

ಇದು ನಮ್ಮ ಭೂಮಿಯ (Earth) ಮೇಲೆ ಅಷ್ಟೊಂದು ಪ್ರಭಾವವನ್ನು ಬೀರುವಂತಹ ಭೂಕಂಪನ ಅಲ್ಲ. ಆದರೆ ಮಂಗಳ ಗ್ರಹದಲ್ಲಿ ಇದನ್ನು ಗಂಭೀರವಾಗಿ ಪರಿಗಣಿಸಬಹುದಾಗಿದೆ. ಈ ಬೆಳವಣಿಗೆಗಳು ಮಂಗಳಗ್ರಹದಲ್ಲಿ ಇನ್ನಷ್ಟು ದೊಡ್ಡ ಮಟ್ಟದ ಭೂಕಂಪನಗಳನ್ನು ಕೂಡ ನಾವು ಕಾಣಬಹುದೇ ಎಂಬುದನ್ನು ಸೂಚಿಸಿದೆ ಎಂಬುದಾಗಿ ವಿಜ್ಞಾನಿಗಳು ಅಭಿಪ್ರಾಯ ಪಟ್ಟಿದ್ದಾರೆ. ಹಾಗೇ ಮಂಗಳದಲ್ಲಿರುವಂತಹ ಭೂಕಂಪನ ಚಟುವಟಿಕೆಗಳನ್ನು ಇನ್ನಷ್ಟು ಹೆಚ್ಚಿನ ಅಧ್ಯಯನ ಮಾಡುವುದಕ್ಕೆ ಇದು ಪ್ರೇರೇಪಿಸಿದೆ.

ಇದನ್ನೂ ಓದಿ: Arecanut Leaf Spot Disease: ಇದೊಂದು ಸಣ್ಣ ಕೆಲಸ ಮಾಡಿ, ನಿಮ್ಮ ಅಡಿಕೆ ತೋಟದಲ್ಲಿ ಇನ್ಯಾವತ್ತೂ ಎಲೆಚುಕ್ಕಿ ರೋಗ ಬರೋದಿಲ್ಲ !!